ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಮಗುವಿನ ಭವ್ಯ ಭವಿಷ್ಯಕ್ಕೆ ಲಸಿಕೆ

ಅದು 80ರ ದಶಕ. ವಿಶ್ವದ ಅರ್ಧಕ್ಕಿಂತ ಹೆಚ್ಚು ಪೋಲಿಯೊ ಪ್ರಕರಣಗಳು ಜನಸಾಂದ್ರಿತ ದೇಶಗಳಾದ ನೈಜೀರಿಯಾ ಹಾಗೂ ಆಫ್ರಿಕಾಗಳಲ್ಲಿ ಕಂಡು ಬಂದಿದ್ದವು...

ಅದು 80ರ ದಶಕ. ವಿಶ್ವದ ಅರ್ಧಕ್ಕಿಂತ ಹೆಚ್ಚು ಪೋಲಿಯೊ ಪ್ರಕರಣಗಳು ಜನಸಾಂದ್ರಿತ  ದೇಶಗಳಾದ ನೈಜೀರಿಯಾ ಹಾಗೂ ಆಫ್ರಿಕಾಗಳಲ್ಲಿ ಕಂಡು ಬಂದಿದ್ದವು. ಆಗ ವಿಶ್ವಸಂಸ್ಥೆ  ತಡಮಾಡದೇ ಎಚ್ಚೆತ್ತುಕೊಂಡು ವಿಶ್ವವನ್ನು ಪೋಲಿಯೊ ಮುಕ್ತಗೊಳಿಸಲು 1988ರಲ್ಲಿ     ನಿರ್ಧರಿಸಿದಾಗ ಭಾರತ ಸೇರಿ 125 ದೇಶಗಳಲ್ಲಿ ಪೋಲಿಯೊ ಸೋಂಕು ಹರಡುವ ವೈರಸ್   ಇರುವುದು ಕಂಡುಬಂತು. ಈ ಆತಂಕಕಾರಿ ವಿಷಯದಿಂದ ಈಗ ಭಾರತ ವಿಶ್ವಮಟ್ಟದ    ಆರೋಗ್ಯ ಅಭಿವೃದ್ಧಿ ವಿಚಾರದಲ್ಲಿ ಜಯ ಸಾಧಿಸಿದೆ.

ಭಾರತ ಪೊಲಿಯೊ ಮುಕ್ತ ದೇಶ ಎಂದು ಅಧಿಕೃತವಾಗಿ 2014ರ ಮಾರ್ಚ್ 27ರಂದು ವಿಶ್ವ  ಆರೋಗ್ಯ ಸಂಸ್ಥೆಯೇ ಘೋಷಿಸಿದ್ದು ಇದಕ್ಕೆ ಸಾಕ್ಷಿ. ಒಂದು ವೇಳೆ ಭಾರತದಲ್ಲಿ ಪೋಲಿಯೊ ಪ್ರಕರಣಗಳು ಕಂಡುಬಂದರೂ ಅವು ಬೇರೆ ದೇಶಗಳಿಂದ ಹರಡಿದ್ದೆಂದು  ಪರಿಗಣಿಸಲಾಗುತ್ತದೆ  ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. ಇಷ್ಟೆಲ್ಲಾ ಜಯ ಸಾಧಿಸಲು ಅವಿರತ ಶ್ರಮವಿದೆ.ನಿರ್ಲಕ್ಷ್ಯಕ್ಕೊಳಗಾಗುವ ಹಳ್ಳಿಗಳಂತಹ ಪ್ರದೇಶಗಳಲ್ಲಿ ಅಂಗನವಾಡಿ   ಕಾರ್ಯಕರ್ತೆಯರ ಪ್ರಾಮಾಣಿಕ ಪ್ರಯತ್ನದಿಂದ ಹಿಡಿದು ಆರೋಗ್ಯ ಇಲಾಖೆ ಮತ್ತು ಅರೆ  ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಿಂದ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿಸಲು ದೇಶದಲ್ಲಿ 1995ರಿಂದ ಸತತ ಪ್ರಯತ್ನ ಪ್ರಾರಂಭವಾಯಿತು. ಪೋಲಿಯೊವನ್ನು ಲಸಿಕೆಯಿಂದ ಈಗ ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲಾಗಿದ್ದು, 2011 ಜನವರಿ 13ರಂದು ದಾಖಲಾದ ರಿಕ್ಷಾ ಪ್ರಕರಣ ಭಾರತದ ಕಟ್ಟ ಕಡೆಯ ಪೊಲಿಯೊ  ಪ್ರಕರಣವಾಗಿದೆ.

ನಾವು ಪೋಲಿಯೊ ಮುಕ್ತರಾಗಿದ್ದೇವೆ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಹಾಗಿಲ್ಲ. ಮೊದಲೇ ಇದು ಸಾಂಕ್ರಾಮಿಕ ರೋಗ. ಸ್ವಲ್ಪ ಆಲಕ್ಷ್ಯ ತಾಳಿದರೂ ರೋಗದ ತೀವ್ರತೆ ಸದ್ದಿಲ್ಲದೇ ಹೆಚ್ಚು ಮಾಡಬಹುದು ಎಂಬ ಮುನ್ನೆಚ್ಚರಿಕೆಯಾಗಿ ಪ್ರತಿವರ್ಷ ಎರಡು ಸುತ್ತಿನ ಪೋಲಿಯೊ ಲಸಿಕಾ   ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ 2016ರ ರಾಜ್ಯ ಪಲ್ಸ್ ಪೋಲಿಯೊ ಲಸಿಕಾ  ಕಾರ್ಯಕ್ರಮ ಜನವರಿ 17 ಮತ್ತು ಫೆಬ್ರುವರಿ 21ರಂದು ಎರಡು ಸುತ್ತಿನಲ್ಲಿ ನಡೆಯುತ್ತಿದೆ.  ಅದಕ್ಕಾಗಿ ಕರ್ನಾಟಕ ಸಿದ್ಧತೆಯಲ್ಲಿ ತೊಡಗಿದೆ.

ಏನಿದು ಪಲ್ಸ್ ಪೊಲಿಯೋ ಕಾರ್ಯಕ್ರಮ?:
ನಿರ್ದಿಷ್ಟ ದಿನಾಂಕದಂದು ನಮ್ಮ      ರಾಜ್ಯಾದ್ಯಂತ 5 ವರ್ಷದ ಒಳಗಿನ ಎಲ್ಲ  ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕುವ  ಕಾರ್ಯಕ್ರಮಕ್ಕೆ  ಪಲ್ಸ್ ಪೋಲಿಯೊ ಕಾರ್ಯಕ್ರಮ ಎಂದು ಅರ್ಥೈಸಲಾಗುತ್ತದೆ. ಕಳೆದ     ವರ್ಷ ಜನವರಿ 18 ಮತ್ತು ಫೆಬ್ರುವರಿ 22ರಂದು ಎರಡು ಸುತ್ತಿನ ಪಲ್ಸ್ ಪೋಲಿಯೊ ಲಸಿಕಾ  ಕಾರ್ಯಕ್ರಮ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯಿತು. ರಾಜ್ಯದ ಸುಮಾರು 75,16,494  ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಮೊದಲ ಸುತ್ತಿನಲ್ಲಿ ಶೇಕಡಾ  99.99 ಯಶ ಸಾಧಿಸಿದರೆ,   2ನೇ ಸುತ್ತಿನಲ್ಲಿ ಶೇಕಡಾ 100.27ರಷ್ಟು ಪಲ್ಸ್ ಪೋಲಿಯೊ ಕಾರ್ಯಕ್ರಮ    ಯಶಸ್ವಿಯಾಯಿತು.

ಪ್ರತಿ ತಿಂಗಳು ನೀಡುವ ಪೋಲಿಯೊ ಲಸಿಕೆಗೂ ಈ ಪಲ್ಸ್ ಪೊಲಿಯೋ ಲಸಿಕೆಗೂ ವ್ಯತ್ಯಾಸ ಏನು?
1. ಈ ಎರಡಕ್ಕೂ ಹೆಚ್ಚು ವ್ಯತ್ಯಾಸ ಇರುವುದಿಲ್ಲ.ತಿಂಗಳು ತಿಂಗಳು ಹಾಕುವ ಪೋಲಿಯೊ ಲಸಿಕೆಯನ್ನು ಹೆಚ್ಚುವರಿಯಾಗಿ ಎರಡು ಬಾರಿ ಮಕ್ಕಳಿಗೆ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಹಾಕಲಾಗುತ್ತದೆ ಅಷ್ಟೇ.
2. ಪ್ರತಿ ತಿಂಗಳು ವ್ಯಕ್ತಿಗತವಾಗಿ ಮಗುವಿನ ವಯಸ್ಸಿನ ಅನುಗುಣವಾಗಿ ಅಂದರೆ ಒಂದೂವರೆ ತಿಂಗಳಲ್ಲಿ, ಎರಡೂವರೆ ತಿಂಗಳಲ್ಲಿ ಮತ್ತು ಮೂರೂವರೆ ತಿಂಗಳಲ್ಲಿ ನೀಡಲಾಗುತ್ತದೆ. ಆದರೆ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಏಕ ಕಾಲದಲ್ಲಿ ಅಂದರೆ ನಿರ್ದಿಷ್ಟ ದಿನಾಂಕದಂದು ರಾಜ್ಯಾದ್ಯಂತ ನೀಡಲಾಗುತ್ತದೆ.
3. ಪ್ರತಿ ತಿಂಗಳ ಪೋಲಿಯೊ ಲಸಿಕೆಯಿಂದ ವ್ಯಕ್ತಿಗತವಾಗಿ ರೋಗ ನಿರೋಧಕ ಶಕ್ತಿಯನ್ನು  ಮಕ್ಕಳಲ್ಲಿ ಹೆಚ್ಚಿಸಲಾಗುತ್ತದೆ. ಆದರೆ, ಈ ಪಲ್ಸ್ ಪೋಲಿಯೊ ಕಾರ್ಯಕ್ರಮ ಒಂದು ಸಮುದಾಯದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಪೋಲಿಯೊ ದಿನ ಹುಟ್ಟಿದ ಮಕ್ಕಳಿಗೆ ಹಾಕಬೇಕೆ?:
ಆಗತಾನೆ ಹುಟ್ಟಿದ ಮಗುವಿನಿಂದ  ಹಿಡಿದು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕಬೇಕು.    ಹಾಗೆಯೇ 5 ವರ್ಷ ದಾಟಿದ ಮಕ್ಕಳು ಲಸಿಕಾ ಕೇಂದ್ರಗಳಿಗೆ ಬಂದರೆ ಅಂಥವರನ್ನು  ಗಮನಿಸಿ 5 ವರ್ಷದ ಮೇಲೆ 3-6 ಒಳಗಿನ ಮಕ್ಕಳಿಗೆ ಲಸಿಕೆ ನೀಡಬಹುದು. ಜನವರಿ  17ರಂದು  ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಪೋಲಿಯೊ ಲಸಿಕೆ ನೀಡಿದವರು ಎರಡನೇ ಸುತ್ತಿನ ಫೆಬ್ರುವರಿ 21ರಂದು ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲೂ ಮಕ್ಕಳಿಗೆ  ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಲೇಬೇಕು. ಅಂದಾಗ ಮಾತ್ರ ಮಕ್ಕಳಲ್ಲಿ ಸಂಪೂರ್ಣ ರೋಗ ನಿರೋಧಕ ಶಕ್ತಿಯ ರಕ್ಷಣೆ ಒದಗುತ್ತದೆ. ಈ ವರ್ಷ ಸಂಚಾರಿ ಲಸಿಕಾ ಕೇಂದ್ರಗಳು ಸೇರಿದಂತೆ  ಒಟ್ಟು 51,17,320 ತಂಡಗಳು ಪಲ್ಸ್ ಪೋಲಿಯೊ ಲಸಿಕಾ  ವಿತರಣೆ ಮಾಡಲಿವೆ. ಸುಮಾರು 1,03,464 ವ್ಯಾಕ್ಸಿನೇಟರ್ಸ್, ಸುಮಾರು 6,522 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪೋಲಿಯೊ ಬೂತ್ ನಿರ್ಮಿಸಲಾಗಿದೆ. ದುರ್ಗಮ ಪ್ರದೇಶದ ಮಕ್ಕಳಿಗೂ ಲಸಿಕೆ ತಲುಪಿಸಲು ಸಂಚಾರಿ ಬೂತ್  ವ್ಯವಸ್ಥೆ ಕಲ್ಪಿಸಲಾಗಿದೆ.

ಭರದ ಸಿದ್ಧತೆಯಲ್ಲಿ ಆಡಳಿತ ವ್ಯವಸ್ಥೆ: ಪ್ರಸಕ್ತ ವರ್ಷದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರಿಗೆ, ಕಂದಾಯ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಸಹಯೋಗ ನೀಡಿವೆ. ಲಸಿಕಾ ಕಾರ್ಯಕ್ರಮ ಕುರಿತು ಆಡಳಿತ ವ್ಯವಸ್ಥೆ ವ್ಯಾಪಕ ಪ್ರಚಾರ ಕೂಡ ಕೈಗೊಂಡಿದ್ದು, ಇದಕ್ಕೆ ಈಗಾಗಲೇ ಬೇರೆ ಬೇರೆ  ಇಲಾಖೆಗಳ ವಾಹನ ಮತ್ತು ಸಿಬ್ಬಂದಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಶಿಕ್ಷಣ ಇಲಾಖೆಗಳು ಪಲ್ಸ್ ಪೋಲಿಯೊ ಲಸಿಕಾ ಕೇಂದ್ರಗಳನ್ನು ತೆರೆಯಲು ಶಾಲಾ  ಕೊಠಡಿಗಳನ್ನು ನೀಡುತ್ತಿದ್ದು, ಶಾಲಾ ವಿದ್ಯಾರ್ಥಿಗಳು ತಮ್ಮ ತಮ್ಮ ನೆರೆಯ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ  ಬರಲು ಮನವೊಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಇದಕ್ಕೆ ಸಾರಿಗೆ ಮತ್ತು ರೈಲ್ವೆ ಇಲಾಖೆಯವರು ಲಸಿಕಾ ಕೇಂದ್ರಗಳ ತೆರೆಯಲು ಅವಕಾಶ ಕೊಟ್ಟು ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ಸಿಗೆ ಕೈ ಜೋಡಿಸಿದ್ದು, ಪ್ರತಿಯೊಂದು ಪಲ್ಸ್ ಪೋಲಿಯೊ ಲಸಿಕಾ ಕೇಂದ್ರಗಳು ನಿಗದಿತ ದಿನಾಂಕದಂದು ಬೆಳಗ್ಗೆ 8ರಿಂದ  ಸಂಜೆ 5ರವರೆಗೆ ಕಾರ್ಯ ನಿರ್ವಹಿಸಲಿವೆ.

ಶೀತಲ ಸರಪಣಿ ಕಾಪಾಡುವಿಕೆ: ಪೋಲಿಯೊ ಲಸಿಕಾ ಟ್ಯೂಬ್ ಗಳನ್ನು ಕಾಪಾಡಲು  ಸಾಕಷ್ಟು ಪ್ರಮಾಣದಲ್ಲಿ ಐಸ್ ಪ್ಯಾಕ್,  ವ್ಯಾಕ್ಸಿನ್ ಕ್ಯಾರಿಯರ್ ವ್ಯವಸ್ಥೆ ಮಾಡಲಾಗಿದೆ.   ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ವಿಶೇಷವಾಗಿ       ವಿನ್ಯಾಸಗೊಳಿಸಿದ ಐಎಲ್‍ಆರ್ ಅಥವಾ ಫ್ರಿಜ್ ವ್ಯವಸ್ಥೆ  ಕಲ್ಪಿಸಲಾಗಿದೆ. Vaccine Vial    Monitor ಇದ್ದು, ಲಸಿಕೆಯ ಗುಣಮಟ್ಟ ಸೂಚಿಸಲು ಸಹಾಯ ಮಾಡುತ್ತದೆ. ಈ ಕುರಿತು  ನಿಯೋಜನೆಗೊಂಡ ಸಿಬ್ಬಂದಿಗೂ ಸಾಕಷ್ಟು ಪ್ರಮಾಣದಲ್ಲಿ ತರಬೇತಿ ನೀಡಲಾಗಿದೆ. ಜಿಲ್ಲಾಮಟ್ಟದಲ್ಲಿ ಲಸಿಕೆ ಮತ್ತು ಐಸ್  ಪ್ಯಾಕ್ ವಿತರಣೆಗೆ ವಿಶೇಷ ವಾಹನ ವ್ಯವಸ್ಥೆ     ಮಾಡಲಾಗಿದೆ.

ಸಮಾಜದ ಜವಾಬ್ದಾರಿ ಏನು?:
ಒಟ್ಟಾರೆಯಾಗಿ ಪಲ್ಸ್ ಪೋಲಿಯೊ ಲಸಿಕಾ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಲಾಖೆಯೊಂದಿಗೆ  ಸಹಕರಿಸಬೇಕು. ಎಲ್ಲರೂ ಇದು ನಮ್ಮ   ಕಾರ್ಯಕ್ರಮ ಎಂಬ ಭಾವನೆ ಹೊಂದಿ 5 ವರ್ಷದೊಳಗಿನ ಎಲ್ಲ ಮಕ್ಕಳನ್ನು   ತಪ್ಪದೆ  ಪೋಲಿಯೊ ಹನಿ ಹಾಕಿಸಲು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಶ್ರಮಿಸಬೇಕು.   ಪೋಲಿಯೊ ಮುಕ್ತ ರಾಜ್ಯಕ್ಕಾಗಿ  ನಮ್ಮೆಲ್ಲರದೂ ಪಾಲಿರಲಿ.

ಲಸಿಕೆಯಿಂದ ಅಸ್ವಸ್ಥರಾದರೆ? ಪಲ್ಸ್ ಪೋಲಿಯೊ ಲಸಿಕೆಯಿಂದ ಮಕ್ಕಳು  ಅಸ್ವಸ್ಥರಾಗುವುದಾದರೆ 5 ನಿಮಿಷದೊಳಗೆ ಆಗಬೇಕು.  ಬದಲಿಗೆ ಲಸಿಕೆ ಹಾಕಿ ಗಂಟೆಗಳ  ನಂತರ ವಾಂತಿ ಭೇದಿ, ತಲೆಸುತ್ತುವಿಕೆ, ಜ್ವರ ಅಥವಾ ಇನ್ಯಾವುದೇ ಸಮಸ್ಯೆ  ಕಂಡು ಬಂದರೆ  ಅದಕ್ಕೆ ಲಸಿಕೆ ಕಾರಣವಾಗಿರುವುದಿಲ್ಲ. ಪೋಲಿಯೊ ಲಸಿಕೆ ಹಾಕಿಸಿದ್ದರಿಂದ  ಇದೂವರೆಗೂ ಯಾವುದೇ ಅಡ್ಡ ಪರಿಣಾಮಗಳು ಮಕ್ಕಳ ಮೇಲೆ  ಸಂಭವಿಸಿಲ್ಲ ಎಂದು  ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಷಕರು ಭಯ ಪಡುವ ಅಗತ್ಯ ಇರುವುದಿಲ್ಲ.

ಪೋಲಿಯೊ ಮುಕ್ತ ದೇಶಗಳು
ಏಷ್ಯಾಖಂಡದ ಭಾರತ ಸೇರಿದಂತೆ ವಿಶ್ವದ 10 ದೇಶಗಳು ಶೇಕಡಾ 80 ರಷ್ಟು ಪೋಲಿಯೊ  ಕ್ತವಾಗಿವೆ ಎಂದು  ವಿಶ್ವ ಸಂಸ್ಥೆ ಸ್ಪಷ್ಟಪಡಿಸಿ ಪ್ರಮಾಣ ಪತ್ರಗಳನ್ನು ಆಯ್ದ ದೇಶಗಳಿಗೆ  ಡಿದೆ.  ಗ್ಲಾದೇಶ, ಭೂತಾನ, ಬರ್ಮಾ, ನೇಪಾಳ, ಕೋರಿಯಾ, ಇಂಡೋನೇಷಿಯಾ, ಮಾಲ್ಡೀವ್ಸ್,  ರೀಲಂಕಾ, ಥೈಲ್ಯಾಂಡ್ ಮತ್ತು ತೈಮೋರ್  ದೇಶಗಳು ಪಲ್ಸ್ ಪೋಲಿಯೊ ಮುಕ್ತ  ಷ್ಟ್ರಗಳಾಗಿ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಯಶ ಗಳಿಸಿವೆ. ಪಾಕಿಸ್ತಾನ, ಅಫಘಾನಿಸ್ತಾನ  ತ್ತು ನೈಜೀರಿಯಾ ಪಲ್ಸ್ ಪೋಲಿಯೊ ಮುಕ್ತ ರಾಷ್ಟ್ರಗಳಾಗಲು ಅವಿರತ ಪ್ರಯತ್ನ ನಡೆಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

SCROLL FOR NEXT