ಆರೋಗ್ಯ-ಜೀವನಶೈಲಿ

ಎಮೋಜಿ ಉಗುರು ಕಲೆಯ ಫ್ಯಾಶನ್

Sumana Upadhyaya

ಕಾಲೇಜಿಗೆ, ಉದ್ಯೋಗಕ್ಕೆ ಹೋಗುವ ಯುವತಿಯರಲ್ಲಿ ಎಮೋಜಿ ಉಗುರು ಕಲೆ ಇತ್ತೀಚಿನ ಫ್ಯಾಶನ್ ಟ್ರೆಂಡ್ ಆಗಿದೆ. ಬಣ್ಣಗಳ ಪೈಂಟಿಂಗ್ ಮೂಲಕ ಭಾವನೆಗಳನ್ನು ಕೈ ಉಗಿರಿನಲ್ಲಿ ಬರೆಯುವುದಕ್ಕೆ ಎಮೋಜಿ ಉಗುರು ಕಲೆ ಎಂದು ಕರೆಯುತ್ತಾರೆ.

'' ಇತ್ತೀಚಿನ ದಿನಗಳಲ್ಲಿ ಕಾಲೇಜು ಹುಡುಗಿಯರಲ್ಲಿ ಎಮೋಜಿ ಕಲೆ ಗೀಳು ಜಾಸ್ತಿಯಾಗಿದೆ. ಚಿಕ್ಕ ಮಕ್ಕಳ ಬರ್ತ್ ಡೇ ಪಾರ್ಟಿಗಳಿಗೂ ಕೂಡ ಹಾಕುವಂತೆ ಆಫರ್ ಗಳು ಬರುತ್ತವೆ. ಇದೊಂದು ಮೋಜಿನ ಕಲೆ. ಕೈಯ ಒಂದೆರಡು ಬೆರಳಿಗೆ ಬೇಕಾದರೂ ಹಾಕಬಹುದು, ಇಲ್ಲವೇ 10 ಬೆರಳಿಗೆ ಬೇಕಾದರೂ ಹಾಕಬಹುದು, ಬಣ್ಣ ಗಾಢವಾದದ್ದು, ಅಗಾಧವಾದದ್ದು ಎಂದೆನಿಸುವುದಿಲ್ಲ. ನೀವು ಬಹಳ ಸೃಜನಶೀಲರಾಗಿದ್ದರೆ ನೈಲ್ ಪಾಲಿಶ್ ಬಣ್ಣದಲ್ಲಿ ಕೂಡ ಎಮೋಜಿ ಡಿಸೈನ್ ನ್ನು ಮಾಡಬಹುದು ಅಥವಾ ಮಾರ್ಕರ್ ಪೆನ್ ನಿಂದಲೂ ಬಿಡಿಸಬಹುದು. ಖುಷಿ, ಸಂತೋಷ, ಸಿಟ್ಟು, ಬೇಸರ, ಆಶ್ಚರ್ಯ, ತಮಾಷೆ ಇತ್ಯಾದಿ ಭಾವನೆಗಳನ್ನು ಎಮೋಜಿ ಕಲೆಯ ಮೂಲಕ ಬಿಡಿಸಬಹುದು.

ಯಾವ ಬಣ್ಣ ಉತ್ತಮ: ಹಳದಿ, ಕಪ್ಪು, ಬಿಳಿ, ಕೆಂಪು, ಗುಲಾಬಿ ಮತ್ತು ನೀಲಿ ಬಣ್ಣದ ನೈಲ್ ಪಾಲಿಷ್ ಗಳು ಆಕರ್ಷಕವಾಗಿ ಕಾಣುತ್ತವೆ.ಕೆಲವು ಉಗುರು ಕಲೆ ಉಪಕರಣಗಳಾದ ಉಗುರು ಕಲೆ ಬ್ರಷ್, ಡಾಟಿಂಗ್ ಪೆನ್ ನ ಸಹಾಯದಿಂದ ಡಿಸೈನ್ ಮಾಡಬಹುದು. ಭಾವನೆಗಳ ಚಿತ್ರವನ್ನು ಕೈಯಿಂದ ಬಿಡಿಸಲು ಸಾಧ್ಯವಾಗದಿದ್ದರೆ ನೈಲ್ ಟಾಟೂ ಆನ್ ಲೈನ್ ನಲ್ಲಿ ಅಥವಾ ಮಾರುಕಟ್ಟೆಯಲ್ಲಿ ದೊರಕುತ್ತದೆ.

SCROLL FOR NEXT