ಆರೋಗ್ಯ-ಜೀವನಶೈಲಿ

ಆನ್ ಲೈನ್ ಡಯಟ್ ಟಿಪ್ಸ್ ನೋಡಿ ಮೋಸಹೋದ ಭಾರತೀಯರೇ ಹೆಚ್ಚು: ಇಂಟೆಲ್

Lingaraj Badiger
ನವದೆಹಲಿ: ಡಯೆಟ್ ಗೆ ಸಂಬಂಧಿಸಿದ ಪ್ರಚಾರಾರ್ಥ ಲಿಂಕ್ ಗಳ ಮೇಲೆ ಮತ್ತು ಡಯೆಟ್ ಟಿಪ್ಸ್ ಗಳ ಮೇಲೆ ಕ್ಲಿಕ್ ಮಾಡುವ ಪ್ರತಿ ನಾಲ್ವರು ಯುವಕರ ಪೈಕಿ ಮೂವರು ಭಾರತೀಯರು ತಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮಾಹಿತಿ ಹಂಚಿಕೊಂಡು ಮೋಸ ಹೋಗಿದ್ದಾರೆ ಎಂದು ಇಂಟೆಲ್ ಸೆಕ್ಯೂರಿಟಿ ಸಮೀಕ್ಷೆ ಹೇಳಿದೆ.
ಕಳೆದ ಏಪ್ರಿಲ್ ನಲ್ಲಿ ಭಾರತದ 1,500 ಮಂದಿ ಸೇರಿದಂತೆ ವಿವಿಧ ದೇಶಗಳಲ್ಲಿ 21 ವರ್ಷದಿಂದ 54 ವರ್ಷದ ಸುಮಾರು 15 ಸಾವಿರ ಮಂದಿಯನ್ನು ಇಂಟೆಲ್ ಸಮೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ ಭಾರತೀಯರೇ ಹೆಚ್ಚು ಮೋಸ ಹೋಗಿದ್ದಾರೆ.
21ರಿಂದ 30ವರ್ಷದ ಶೇ.77ರಷ್ಟು ಯುವಕರು ಅತಿ ಹೆಚ್ಚು ಡಯೆಟ್ ಟಿಪ್ಸ್ ಗೆ ಸಂಬಂಧಿಸಿದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿರುವುದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.
ಭಾರತದ ಮಧ್ಯವಯಸ್ಕರಿ(20ರಿಂದ 30 ವರ್ಷ)ಗೆ ಡಯೆಟ್ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಹೀಗಾಗಿ ಅವರು ಆನ್ ಲೈನ್ ನಲ್ಲಿ ದೊರೆಯುವ ಎಲ್ಲಾ ಡಯೆಟ್ ಟಿಪ್ಸ್ ಗಳ ಮೇಲೂ ಕ್ಲಿಕ್ ಮಾಡುತ್ತಾರೆ. ಯುವಕರ ಈ ಆತುರದಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಇಂಟೆ ಸೆಕ್ಯೂರಿಟಿ ಇಂಡಿಯಾ ಇಂಜಿನಿಯರಿಂಗ್ ಸೆಂಟರ್ ನ ಆಪರೇಷನ್ಸ್ ಮುಖ್ಯಸ್ಥ ವೆಂಕಟ್ ಕೃಷ್ಣಾಪುರ್ ಅವರು ತಿಳಿಸಿದ್ದಾರೆ.
SCROLL FOR NEXT