ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಆರೋಗ್ಯವಂತ ಕಿಡ್ನಿ ನಿಮ್ಮದಾಗಬೇಕೆಂದರೆ ಜಂಕ್ ಫುಡ್ ಗಳಿಂದ ದೂರವಿರಿ

ಜಂಕ್ ಫುಡ್ ಗಳಾದ ಬರ್ಗರ್, ಪಿಜ್ಜಾ ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ...

ಜಂಕ್ ಫುಡ್  ಗಳಾದ ಬರ್ಗರ್, ಪಿಜ್ಜಾ ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ ಬರಲಿದೆ ಅಂತ ಅಧ್ಯಯನ ವರದಿಯೊಂದು ಹೇಳಿದೆ.

ಬ್ರಿಟನ್ ನ ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪ್ರಾಣಿಗಳ ಮೇಲೆ ಮಾಡಿರುವ ಸಂಶೋಧನೆಗಳ ಮೂಲಕ, ಜಂಕ್ ಫುಡ್ ಗಳಿಂದ ಮಾನವನ ಕಿಡ್ನಿ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

ಎಕ್ಸ್ಪಿರಿಮಂಟ್ ಪಿಸಿಯಾಲಜಿ ಜರ್ನಲ್ ನಲ್ಲಿ ವಾದ ಮಂಡಿಸಿರುವ ಅವರು ಹೇಳಿರುವುದರ ಸಾರ ಇಷ್ಟು- ಟೈಪ್ 2 ಸಕ್ಕರೆ ಕಾಯಿಲೆಯಲ್ಲಿ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತದೆ.

ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಶೇಖರಗೊಳ್ಳುತ್ತ ಹೋಗುತ್ತದೆ. ಇದು ದೀರ್ಘಾವಧಿಯಲ್ಲಿ ಕಿಡ್ನಿ ಸೇರಿದಂತೆ ಹಲವು ಅಂಗಗಳಿಗೆ ತೊಂದರೆ ಉಂಟು ಮಾಡುತ್ತದೆ. ಹೀಗೆ ಟೈಪ್ 2 ಡಯಾಬಿಟೀಸ್ ಇರುವ ಪ್ರಾಣಿಗಳು ಮತ್ತು ಜಂಕ್ ಫುಡ್ ತಿನ್ನಿಸಿ ಬೆಳೆಸಿದ ಇಲಿಗಳ ನಡುವೆ ಹೋಲಿಕೆ ಮಾಡಿದಾಗ ಅವುಗಳ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹಾಗೂ ಅದು ಕಿಡ್ನಿ ಮೇಲೆ ಸೃಷ್ಟಿಸಲಿರುವ ಒತ್ತಡ ಒಂದೇ ತೆರನಾಗಿತ್ತು.

ದೇಹದಲ್ಲಿ ನೀರಿನಾಂಶ ಕೊರತೆ ಎಂಬುದು ಬಿರು ಬೇಸಿಗೆಯಲ್ಲಿ ನಮ್ಮೆಲ್ಲರನ್ನು ಕಾಡುವ ಸಮಸ್ಯೆ. ಬಿಸಿಗಾಳಿಗೆ ಒಡ್ಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಿಡ್ನಿಸ್ಟೋನ್ ಅರ್ಥಾತ್ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಮಸ್ಯೆ ಎಂದಿಗಿಂತ ಹೆಚ್ಚು ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು. ಈ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯುತ್ತ ದೇಹವನ್ನು ಒಣಗದಂತೆ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಮೂತ್ರದಲ್ಲಿ ಕ್ಯಾಲ್ಶಿಯಂ ಮತ್ತು ಇತರ ಖನಿಜಾಂಶಗಳು ಬೇಗ ಹರಳುಗಟ್ಟಿಬಿಡುತ್ತವೆ.  ಈ ಬಿಸಿಲ ದಿನಗಳಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಕಿಡ್ನಿಗೆ ರಕ್ತಸಂಚಾರವಾಗುವುದರಲ್ಲೂ ವ್ಯತ್ಯಯಗಳುಂಟಾಗುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT