ಆರೋಗ್ಯ-ಜೀವನಶೈಲಿ

ಅರ್ಧದಷ್ಟು ಹೃದಯಾಘಾತಗಳು ಸದ್ದಿಲ್ಲದೆ ಸಂಭವಿಸುತ್ತವೆ

Guruprasad Narayana

ನ್ಯೂಯಾರ್ಕ್: ಅರ್ಧದಷ್ಟು ಹೃದಾಯಾಘಾತಗಳು ಯಾವುದೇ ಮುನ್ನೆಚರಿಕೆಯ ನೀಡದೆ-ಖಾಯಿಲೆಯ ಯಾವುದೇ ಕುರುಹುಗಳನ್ನು ತೋರಿಸದೆ  ಸಂಭವಿಸುತ್ತವೆ. ಎದೆ ನೋವಾಗಲೀ, ಉಸಿರಾಟ ಬಿಗಿ ಹೀಡಿಯುವುದಾಗಲೀ, ತಣ್ಣನೆಯ ಬೆವರು ಯಾವುದೂ ಇಲ್ಲದೆ ಸದ್ದಿಲ್ಲದೆ ದಾಳಿ ಮಾಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಹೃದಯದ ಮಾಂಸಖಂಡಗಳಿಗೆ ರಕ್ತ ಪೂರೈಕೆ ಗಣನೀಯವಾಗಿ ಇಳಿಮುಖವಾದಾಗ ಅಥವಾ ನಿಂತು ಹೋದಾಗ ಹೃದಯಾಘಾತ ಸದ್ದಿಲದೆ ಸಂಭವಿಸುತ್ತದೆ ಎನ್ನಲಾಗಿದೆ.

"ಖಾಯಿಲೆಯ ಕುರುಹುಗಳು ಕಾಣಿಸಿಕೊಳ್ಳುವ ಹೃದಯಾಘಾತದಷ್ಟೇ ಸದ್ದಿಲ್ಲದ ಹೃದಯಾಘಾತಗಳು ಅಪಾಯಕಾರಿ" ಎಂದಿದ್ದಾರೆ ಅಮೆರಿಕಾದ ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ವೈದ್ಯಕೀಯ ಕೇಂದ್ರದ ಹೃದ್ರೋಗ ಸಂಶೋಧಕ ಎಲ್ಸಯೇದ್ ಜಡ್ ಸೋಲಿಮನ್.

ಒಟ್ಟು ಹೃದಯಾಘಾತಗಳಲ್ಲಿ ೪೫% ಸದ್ದಿಲ್ಲದ ಹೃದಯಾಘಾತಗಳು ಸಂಭವಿಸುತ್ತವೆ ಎಂದು ಈ ಅಧ್ಯಯನ ತಿಳಿಸಿದೆ.

ಇಂತಹ ಹೃದಯಾಘಾತಗಳು ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ಮಹಿಳೆಯರನ್ನು ಸಾವಿನ ದವಡೆಗೆ ನೂಕುತ್ತವೆ ಎಂದು ಅಧ್ಯಯನ ತಿಳಿಸಿದೆ.

ಅಲ್ಲದೆ ಸದ್ದಿಲ್ಲದ ಹೃದಯಾಘಾತಗಳಲ್ಲಿ ಸಾವಿನ ಸಾಧ್ಯತೆ ಮೂರು ಪಟ್ಟು ಹೆಚ್ಚುತ್ತದೆ ಎಂದು ಕೂಡ ಅಧ್ಯಯನ ತಿಳಿಸಿದೆ.  

ಇ ಸಿ ಜಿ ಪರೀಕ್ಷೆಯಲ್ಲಿ ಮಾತ್ರ ಈ ಸದ್ದಿಲ್ಲದ ಹೃದಯಾಘಾತಗಳನ್ನು ಪತ್ತೆ ಹಚ್ಚಬಹುದಾಗಿದೆ. ಈ ಅಧ್ಯಯನಕ್ಕಾಗಿ ೯೪೯೮ ಮಧ್ಯವಯಸ್ಕ ವ್ಯಕ್ತಿಗಳ ದಾಖಲೆಗಳನ್ನು ಪರೀಕ್ಷಿಸಲಾಗಿದೆ.

ಸುಮಾರು ೯ ವರ್ಷಗಳ ಅಧ್ಯಯನದ ನಂತರ ಸುಮಾರು ೩೧೭ ಅಭ್ಯರ್ಥಿಗಳಿಗೆ ಸದ್ದಿಲ್ಲದ ಹೃದಾಯಾಘಾತವಾಗಿದ್ದರೆ, ಖಾಯಿಲೆಯಗಳ ಕುರುಗಳು ಕಾಣಿಸಿಕೊಂಡ ಹೃದಯಾಘಾತ ೩೮೬ ಜನಕ್ಕೆ ಸಂಭವಿಸಿದೆ.

SCROLL FOR NEXT