ಆರೋಗ್ಯ

ತೊಡೆ ಮಾಂಸದಿಂದ ಕ್ಯಾನ್ಸರ್ ರೋಗಿಗೆ ಹೊಸ ನಾಲಿಗೆ ಕಸಿ ಮಾಡಿದ ವೈದ್ಯರು

Guruprasad Narayana
ನವದೆಹಲಿ: ಬಾಯಿ ಕ್ಯಾನ್ಸರ್ ನಿಂದ ನರಳುತ್ತಿದ್ದ ರೋಗಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ತೊಡೆ ಮಾಂಸದಿಂದ ನಾಲಗೆಯನ್ನು ಕಸಿ ಮಾಡಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದರಿಂದ ರೋಗಿಗೆ ಸ್ವಲ್ಪ ಸ್ವಲ್ಪ ಮಾತನಾಡಲು ಸಾಧ್ಯವಾಗಿದ್ದರು, ರುಚಿಯನ್ನು ಕಂಡುಹಿಡಿಯಲು ಇನ್ನು ಸಾಧ್ಯವಾಗುತ್ತಿಲ್ಲ. 
ಫರೀದಾಬಾದ್ ನಿವಾಸಿ ಕಳೆದ ಎರಡೂವರೆ ತಿಂಗಳುಗಳಿಂದ ಬಾಯಿಯಲ್ಲಿ ತೀವ್ರ ನೋವಿನಿಂದ ನರಳುತ್ತಿದು, ತಿನ್ನುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಹಳ ಕಷ್ಟಪಡುತ್ತಿದ್ದರು. ಈ ಶಸ್ತ್ರಚಿಕಿತ್ಸೆ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದಿದೆ. 
ರೋಗಿ ಧೂಮಪಾನ ವ್ಯಸನಿ ಮತ್ತು ಹೊಗೆಸೊಪ್ಪು ಕೂಡ ಅಗೆಯುತ್ತಿದ್ದರು ಮತ್ತು ಆಗಾಗ ಮದ್ಯಪಾನ ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ. "ಅವರಿಗೆ ಅಗೆಯಲು ಆಗುತ್ತಿರಲಿಲ್ಲ ಮತ್ತು ತೀವ್ರ ನೋವನ್ನು ಅನುಭವಿಸುತ್ತಿದ್ದರು. ನಾವು ಅವರ ದವಡೆ ಮೂಳೆಯನ್ನು ತೆಗೆದು ಶಸ್ತ್ರಚಿಕಿತ್ಸೆ ಮಾಡುವುದಾಗಿ ಒಪ್ಪಿಸಿದೆವು. ಅವರ ಜೀವನ ಉಳಿಸಲು ಇದರ ಅವಶ್ಯಕತೆ ಇತ್ತು" ಎಂದು ಡಾ. ನಿತಿನ್ ಸಿಂಘಾಲ್ ಹೇಳಿದ್ದಾರೆ. 
ಅಕ್ಟೋಬರ್ ೨೫ ರಂದು ಈ ಶಸ್ತ್ರಚಿಕಿತ್ಸೆ ನಡೆದಿದ್ದು, ಈಗ ಸದ್ಯಕ್ಕೆ ದ್ರವ ಮತ್ತು ಅರ್ಧ ಘನ ಆಹಾರವನ್ನು ರೋಗಿಗೆ ಸೇವನೆ ಮಾಡಲು ಸಾಧ್ಯವಾಗುತ್ತಿದೆ. "ಅಂತಿಮ ವರದಿಯಲ್ಲಿ ಟ್ಯೂಮರ್ ಸಂಪೂರ್ಣವಾಗಿ ಹೋಗಿದೆ ಎಂದು ತಿಳಿದಿದೆ" ಎಂದು ಡಾ. ಚಾವ್ಲಾ ಹೇಳಿದ್ದಾರೆ. 
ಭಾರತದಲ್ಲಿ ಬಾಯಿ ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ೧೦ ಕ್ಯಾನ್ಸರ್ ರೋಗಿಗಳಲ್ಲಿ ೪ ಜನ ಬಾಯಿ ಕ್ಯಾನ್ಸರ್ ನಿಂದ ನರಳುತ್ತಿದ್ದು, ಪ್ರತಿ ಘಂಟೆಗೆ ಬಾಯಿ ಕ್ಯಾನ್ಸರ್ ನಿಂದ ೧೪ ಜನ ಸಾವನ್ನಪ್ಪುತ್ತಾರೆ ಎನ್ನಲಾಗಿದೆ. 
SCROLL FOR NEXT