ಚಿಯರ್ಸ್! ಆಲ್ಕೋಹಾಲ್ ದುಷ್ಪರಿಣಾಮಗಳನ್ನು ಕಡಿತಗೊಳಿಸುವ ಅಂಶ ಬಿಯರ್ ನಲ್ಲಿದೆ!
ಬಿಯರ್ ಅನ್ನು ಪ್ರೀತಿಸಿಸುವವರಿಗೆ ಸಂತಸದ ಸುದ್ದಿಯೊಂದಿಲ್ಲಿದೆ. ಬಿಯರ್ ನಲ್ಲಿರುವ ಹಾಪ್ಸ್ ಎಂಬ ಅಂಶ ಆಲ್ಕೋಹಾಲ್ ಲಿವರ್ ಮೇಲೆ ಬೀರುವ ದುಷ್ಪಾರಿಣಾಮಗಳನ್ನು ಕಡಿಮೆ ಮಾಡುತ್ತದೆ
ನ್ಯೂಯಾರ್ಕ್: ಬಿಯರ್ ಅನ್ನು ಪ್ರೀತಿಸಿಸುವವರಿಗೆ ಸಂತಸದ ಸುದ್ದಿಯೊಂದಿಲ್ಲಿದೆ. ಬಿಯರ್ ನಲ್ಲಿರುವ ಹಾಪ್ಸ್ ಎಂಬ ಅಂಶ ಆಲ್ಕೋಹಾಲ್ ಲಿವರ್ ಮೇಲೆ ಬೀರುವ ದುಷ್ಪಾರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಪತ್ತೆ ಹಚ್ಚಿದ್ದಾರೆ ಸಂಶೋಧಕರು.
ಹಾಪ್ಸ್ ಎಂಬ ಸಸ್ಯದ ಹೂಗಳಿಂದ ಉತ್ಪಾದಿಸುವ ಒಂದು ಅಂಶವನ್ನು ಬಿಯರ್ ಗೆ ಸ್ವಾದ ನೀಡಲು ಬಳಸಲಾಗುತ್ತದೆ.
ಎಥನಾಲ್ ಗೆ ಹೋಲಿಸಿದರೆ ಬಿಯರ್ ಕುಡಿಯುವವರಿಗೆ ಲಿವರ್ ಮೇಲೆ ದುಷ್ಪರಿಣಾಮವನ್ನು ಹಾಪ್ಸ್ ಹೇಗೆ ತಗ್ಗಿಸುತ್ತದೆ ಎಂದು ಜರ್ಮನಿಯ ಫ್ರೀಡ್ ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ.
"ಬಿಯರ್ ನಲ್ಲಿರುವ ಈ ಅಂಶ ಲಿವರ್ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಡಿತಗೊಳಿಸುವುದಕ್ಕೆ ಕನಿಷ್ಠ ಮಟ್ಟದಲ್ಲಿ ಸಹಕರಿಸುತ್ತದೆ" ಎಂದು ಸಂಶೋಧಕರು ತಿಳಿಸಿರುವುದಾಗಿ ಲಿವ್ ಸೈನ್ಸ್ ವರದಿ ಮಾಡಿದೆ.
ಬೇರೆ ರೀತಿಯ ಮದ್ಯ ಬಿಯರ್ ಗಿಂತಲೂ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತವೆ ಎನ್ನಲಾಗುತ್ತಿದ್ದಕ್ಕೆ ಈ ಸಂಶೋಧನೆ ವಿವರಣೆ ನೀಡಲು ಸಹಕರಿಸಿದೆ. ಈ ಸಂಶೋಧನೆಯನ್ನು ಇಲಿಗಳ ಮೇಲೆ ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.