ಆರೋಗ್ಯ

ಲಘು ಪಾನೀಯ ಸೇವಿಸುವ ಗರ್ಭಿಣಿಯರ ಮಕ್ಕಳಲ್ಲಿ ಸ್ಥೂಲಕಾಯದ ಅಪಾಯ ಹೆಚ್ಚು

Srinivas Rao BV
ವಾಷಿಂಗ್ ಟನ್: ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಹೆಚ್ಚು ಲಘು ಪಾನೀಯ ಸೇವಿಸುವುದರಿಂದ ಮಕ್ಕಳಲ್ಲಿ ಸ್ಥೂಲಕಾಯ ಉಂಟಾಗುವ ಸಾಧ್ಯತೆ ಅಥವಾ ಮಧುಮೇಹ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. 
ಶರೀರಶಾಸ್ತ್ರಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಕುರಿತ ಸಂಶೋಧನೆ ವರದಿ ಪ್ರಕಟವಾಗಿದ್ದು, ಹಾಲುಣಿಸುವ ತಾಯಂದಿರು, ಗರ್ಭಿಣಿಯರು ಸಕ್ಕರೆ ಅಂಶ ಹೆಚ್ಚು ಹೊಂದಿರುವ ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡುವುದರಿಂದ ಅಥವಾ ಇನ್ನಿತರ ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ ಅಥವಾ ಸ್ಥೂಲ ಕಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 
ಸಾಫ್ಟ್ ಡ್ರಿಂಕ್ ಗಳಲ್ಲಿ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಹಾಗೂ ಫ್ರಕ್ಟೋಸ್ ಹೊಂದಿರುವ ಹೊಂದಿರುವ ಸಕ್ಕರೆ ಅಂಶಗಳು ಹೆಚ್ಚಿದ್ದು, ಇದರಿಂದ ಸ್ಥೂಲಕಾಯ ಹಾಗೂ ಮಧುಮೇಹ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಂಶಗಳಿರುವ ಸಾಫ್ಟ್ ಡ್ರಿಂಕ್ಸ್ ನ್ನು ಸೇವಿಸಿದರೆ ದೀರ್ಘಾವಧಿಯಲ್ಲಿ ಮಕ್ಕಳಿಗೆ ಟೈಪ್ 2 ಮಧುಮೇಹ ಹಾಗೂ ಸ್ಥೂಲ ಶರೀರ ಉಂಟಾಗಲು ಕಾರಣವಾಗಲಿದೆ. ಒಂದು ವೇಳೆ ಗರ್ಭಿಣಿಯರು ಸಾಫ್ಟ್ ಡ್ರಿಂಕ್ಸ್ ಸೇವಿಸಿದರೆ ಹುಟ್ಟಲಿರುವ ಮಕ್ಕಳಿಗೆ ಸ್ಥೂಲ ಗಾತ್ರದ ಲಿವರ್ ಇರಲಿದ್ದು, ಅವರು ಬೆಳೆದಂತೆ  ಅವರಲ್ಲಿ ಸ್ಥೂಲಕಾಯ ಹಾಗೂ ಟೈಪ್ 2 ಮಧುಮೇಹ ಎದುರಾಗಲು ಕಾರಣವಾಗಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 
SCROLL FOR NEXT