ಬಾಳೆಹಣ್ಣು (ಸಂಗ್ರಹ ಚಿತ್ರ) 
ಆರೋಗ್ಯ

ಬಾಳೆಹಣ್ಣು, ಆಲೂಗಡ್ಡೆಯಲ್ಲಿರುವ ಪಿಷ್ಠ ಆರೋಗ್ಯಕ್ಕೆ ಒಳ್ಳೆಯದು ಏಕೆ?

ಆಲೂಗಡ್ಡೆ ಎಂದಾಕ್ಷಣ ಇಷ್ಟವಿದ್ದರೂ ಅದು ಅನಾರೋಗ್ಯ ಎಂದು ಹೇಳಿ ದೂರ ಹೋಗುವ ಜನರ ಸಂಖ್ಯೆಯೇ ಹೆಚ್ಚು. ಆದರೆ, ಆಲೂಗಡ್ಡೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಪ್ರತೀನಿತ್ಯ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು...

ಲಂಡನ್: ಆಲೂಗಡ್ಡೆ ಎಂದಾಕ್ಷಣ ಇಷ್ಟವಿದ್ದರೂ ಅದು ಅನಾರೋಗ್ಯ ಎಂದು ಹೇಳಿ ದೂರ ಹೋಗುವ ಜನರ ಸಂಖ್ಯೆಯೇ ಹೆಚ್ಚು. ಆದರೆ, ಆಲೂಗಡ್ಡೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಪ್ರತೀನಿತ್ಯ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮುಖ್ಯವಾಗಿ ಬಾಳೆಹಣ್ಣು ಮತ್ತು ಆಲೂಗಡ್ಡೆ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆಲೂಗಡ್ಡೆಯು ಆರೋಗ್ಯ ಮತ್ತು ಸೌಂದರ್ಯವರ್ಧಕವೂ ಹೌದು, ಆಲೂಗಡ್ಡೆಯಲ್ಲಿ ಕೊಬ್ಬಿನಾಂಶವು ಶೂನ್ಯವಾಗಿರುತ್ತದೆ. ಆಲೂಗಡ್ಡೆಯಲ್ಲಿ ಪೊಟ್ಯಾಷಿಯಮ್, ಮೆಗ್ನೀಷಿಯಮ್, ತಾಮ್ರ, ಕ್ಯಾಲ್ಷಿಯಂ, ಸತು ಮುಂತಾ ಅಂಶವಿದ್ದು, ಇದು ದೇಹಕ್ಕೆ ಕಬ್ಬಿಣದ ಅಂಶವನ್ನು ಒದಗಿಸುತ್ತದೆ. ವಾರಕ್ಕೆರಡು ಬಾರಿಯಾಲೂ ಆಲೂಗಡ್ಡೆಯನ್ನು ಬೇಯಿಸಿ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದರನೆ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ದೊರೆಯುತ್ತದೆ. ಅಲ್ಲದೆ, ಆಲೂವಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಲೂ ಸಹಕಾರಿಯಾಗಿದೆ.

ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣನ್ನು ತಮ್ಮ ಮಿತಿಯಲ್ಲಿ ತಿಂದಾಗ ಅದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಗ್ರೂಕೋಸ್, ಪ್ರಕ್ಟೋಸ್ ಮತ್ತು ಸುಕ್ರೋಸ್ ಎಂಬ ಅಂಶಗಳು ಹೆಚ್ಚಾಗಿರುತ್ತದೆ. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ (ಪಿಷ್ಠ)ಹೆಚ್ಚಾಗಿರುವುದರಿಂದ ಇದು ಕಡಿಮೆ ಅವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ. ತಿನ್ನುವ ಬಾಳೆಹಣ್ಣು ಗಾತ್ರದ ಮೇಲೆ ಅವಲಂಬಿತವಾಗಿದ್ದು, ಗಾತ್ರ ಕಡಿಮೆ ಇದ್ದಷ್ಟು ಅದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಸಕ್ಕರೆ ಕಾಯಿಲೆಯಿರುವವರು ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸಬಹುದು. ಆದರೆ, ಮಿಲ್ಕ್ ಶೇಕ್ ನಂತಹ ಪದಾರ್ಥಗಳನ್ನು ಕುಡಿಯಬಾರದು. ಏಕೆಂದರೆ ಇವುಗಳಲ್ಲಿ ಕ್ಯಾಲೋರಿಗಳು ಹೆಚ್ಚಾಗಿ ಸೇರ್ಪಡೆಗೊಂಡಿರುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಬಾಳೆಹಣ್ಣು ಹಾಗೂ ಆಲೂಗಡ್ಡೆಯಲ್ಲಿರುವ ಪಿಷ್ಟ ಕುರಿತಂತೆ ಬ್ರಿಟನ್ ಮೂಲದ ಸಂಸ್ಥೆಯೊಂದು ಅಧ್ಯಯನ ನಡೆಸಿದೆ. ಬಾಳೆ ಹಣ್ಣು ಮತ್ತು ಆಲೂಗಡ್ಡೆಯಲ್ಲಿ ಹೆಚ್ಚಳವಾಗಿ ಕಾರ್ಬೋಹೈಡ್ರೇಟ್ (ಪಿಷ್ಠ) ಇದ್ದು, ಇವುಗಳನ್ನು ಪ್ರತೀನಿತ್ಯ ಸೇವನೆ ಮಾಡುವುದರಿಂದ ಅದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.

ಮನುಷ್ಟ ಪ್ರತೀನಿತ್ಯ ಫೈಬರ್ ಅಂಶ ಇರುವ ಆಹಾರವನ್ನು ಸೇವಿಸಬೇಕು. ಪ್ರಮುಖವಾಗಿ ದಿನಕ್ಕೆ ಒಬ್ಬ ವ್ಯಕ್ತಿ 30 ಗ್ರಾಂನಷ್ಟಾದರೂ ಫೈಬರ್ ಅಂಶ ಇರುವ ಆಹಾರ ಸೇವಿಸಬೇಕು. ಇದು ಮನುಷ್ಯ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಅಲ್ಲದೆ, ಸಮತೋಲನವನ್ನು ಕಾಪಾಡುತ್ತದೆ. ಇದರಿಂದ ದೀರ್ಘಕಾಲಿಕ ರೋಗದಿಂದ ದೂರಇರಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಶನ್ನ ನ್ಯೂಟ್ರಿಷನ್ ವಿಜ್ಞಾನಿ ಸ್ಟಾಸಿ ಲಾಕ್'ಯೆರ್ ಅವರು ಹೇಳಿದ್ದಾರೆ.

ಕಾರ್ಬೋಹೈಡ್ರೇಟ್ (ಪಿಷ್ಠ) ಇರುವಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ಅದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಅಲ್ಲದೆ, ಕರುಳಿನ ಆರೋಗ್ಯ ಇದು ಸಹಕಾರಿಯಾಗಲಿದೆ ಎಂದು ಸ್ಟಾಸಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT