ಆರೋಗ್ಯ

ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಅಪಾಯ ಹೆಚ್ಚು!

Srinivas Rao BV
ಟೋರಂಟೋ: ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಎದುರಾಗುವ ಅಪಾಯ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದರ ಮೂಲಕ ಬಹಿರಂಗವಾಗಿದೆ. 
ಕೆನಡಾದ ಮ್ಯಾನಿಟೋಬ ವಿಶ್ವವಿದ್ಯಾಲಯ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಅಸ್ಪರ್ಟೇಮ್, ಸುಕ್ರಾಲೋಸ್ ಮತ್ತು ಸ್ಟೀವಿಯಾ ರೀತಿಯ ಕೃತಕ ಸಿಹಿಯನ್ನು ಬಳಕೆ ಮಾಡುವುದರಿಂದ ಬೊಜ್ಜು, ಹೃದ್ರೋಗ ಮುಂದಾದ ಅನಾರೋಗ್ಯದ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದೆ. 
ಕಳೆದ 10 ವರ್ಷಗಳಲ್ಲಿ 4,00,000 ಜನರ ಬಗ್ಗೆ ಅಧ್ಯಯನ ನದೆಸಲಾಗಿದ್ದು, ಒಟ್ಟು 7 ಅಧ್ಯಯನಗಳಲ್ಲಿ 1,003 ಜನರನ್ನು ಸರಾಸರಿ 6 ತಿಂಗಳು ಅಧ್ಯಯನದ ವರದಿಗಾಗಿ ತೊಡಗಿಸಿಕೊಳ್ಳಲಾಗಿದ್ದು, ತೂಕ ಇಳಿಸಿಕೊಳ್ಳುವುದರ ಮೇಲೆ ಕೃತಕ ಸಿಹಿಯ ಸ್ಥಿರ ಪರಿಣಾಮ ಕಂಡುಬಂದಿಲ್ಲ, ಆದರೆ ದೀರ್ಘಾವಧಿಯಲ್ಲಿ ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಅಪಾಯ ಹೆಚ್ಚುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 
SCROLL FOR NEXT