ಆರೋಗ್ಯ

10 ನಿಮಿಷಗಳ ವ್ಯಾಯಾಮ ಮಕ್ಕಳ ಹೃದಯಕ್ಕೆ ಆರೋಗ್ಯಕಾರಿ

Srinivas Rao BV
ನ್ಯೂಯಾರ್ಕ್: ಪ್ರತಿದಿನವೂ 10 ನಿಮಿಷಗಳ ವ್ಯಾಯಾಮ ಮಾಡಲು ಮಕ್ಕಳಿಗೆ ಪೋಷಕರು ಉತ್ತೇಜನ ನೀಡುವುದರಿಂದ ಮಕ್ಕಳ ಹೃದಯದ ಆರೋಗ್ಯ ಹೆಚ್ಚುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. 
ಕಡಿಮೆ ತೀವ್ರತೆಯ ಲಘು ವ್ಯಾಯಾಮದ ಬದಲು ನಿಯಮಿತವಾಗಿ ಬಲವಾದ ವ್ಯಾಯಾಮ ಮಾಡುವುದು ಹೃದಯ ಆರೋಗ್ಯಕ್ಕೆ ಹಾಗೂ ಮಧುಮೇಹವನ್ನು ದೂರವಿಡಲು ಸಹಕಾರಿ ಎಂದು ಅಮೆರಿಕಾದ ನಾರ್ತ್ ಕ್ಯಾರೊಲಿನಾದ ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ನ ಅಸೋಸಿಯೇಟ್ ಪ್ರೊಫೆಸರ್ ಹೇಳಿದ್ದಾರೆ. 
ಪ್ರತಿದಿನವೂ 10 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಇನ್ಸುಲಿನ್ ಏರಿಕೆಯನ್ನು ತಡೆಗಟ್ಟಬಹುದು ಈ ಮೂಲಕ ಮಧುಮೇಹವನ್ನೂ ದೂರವಿಡಬಹುದು ಎಂದು ಪ್ರೊಫೆಸರ್ ಜಸ್ಟಿನ್ ಬಿ ಮೂರೆ ಹೇಳಿದ್ದಾರೆ. ಅಧ್ಯಯನ ವರದಿಗಾಗಿ 4-18 ವರ್ಷದ 11,588 ಯುವಕರನ್ನು  ಅಮೆರಿಕ, ಬ್ರೆಜಿಲ್, ಯೂರೋಪ್ ರಾಷ್ಟ್ರಗಳಲ್ಲಿ ಸಮೀಕ್ಷೆಗೊಳಪಡಿಸಲಾಗಿದ್ದು, ಅಧ್ಯಯನ ವರದಿ  ಔಷಧಿ, ವಿಜ್ಞಾನ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 
SCROLL FOR NEXT