ಸಂಗ್ರಹ ಚಿತ್ರ 
ಆರೋಗ್ಯ

ವಾಯುಮಾಲಿನ್ಯದಿಂದ ಗರ್ಭಪಾತದ ಅಪಾಯ ಹೆಚ್ಚು: ಅಧ್ಯಯನ

ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಎಂಬುದು ಮಹಿಳೆಯರಿಗಂತೂ ಮಾರಕವಾಗಿಯೇ ಪರಿಣಮಿಸಿದೆ. ವಾಯುಮಾಲಿನ್ಯದಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ಅಸ್ತಮಾ, ಚರ್ಮದ ಸಮಸ್ಯೆಗಳು, ಹೃದ ಸಂಬಂಧಿ ರೋಗಗಳು ಸೇರಿದಂತೆ...

ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಎಂಬುದು ಮಹಿಳೆಯರಿಗಂತೂ ಮಾರಕವಾಗಿಯೇ ಪರಿಣಮಿಸಿದೆ. ವಾಯುಮಾಲಿನ್ಯದಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ಅಸ್ತಮಾ, ಚರ್ಮದ ಸಮಸ್ಯೆಗಳು, ಹೃದ ಸಂಬಂಧಿ ರೋಗಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಮನುಷ್ಯರನ್ನು ಕಾಡುತ್ತದೆ. 
ಇದರಂತೆ ವಾಯು ಮಾಲಿನ್ಯ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಬೀರಲು ಆರಂಭಿಸಿದ್ದು, ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದಿಂದ ಗರ್ಭಪಾತದ ಅಪಾಯಗಳು ಕೂಡ ಹೆಚ್ಚಾಗುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ. 
ಅಮೆರಿಕಾದ ಉತಾಹ್ ವಿಶ್ವವಿದ್ಯಾಲಯ ಈ ಸಂಶೋಧನೆಯನ್ನು ನಡೆಸಿದ್ದು, ಸಂಶೋಧನಾ ವರದಿಯಲ್ಲಿ ವಾಯುಮಾಲಿನ್ಯವು ಗರ್ಭಪಾತದ ಅಪಾಯವನ್ನು ಹೆಚ್ಚಿಸಲಿದೆ. ವಾಯುಮಾಲಿನ್ಯದಿಂದ ಶೇ.16 ರಷ್ಟು ಗರ್ಭಪಾತ ಅಪಾಯ ಎದುರಾಗುತ್ತದೆ ಎಂದು ತಿಳಿಸಿದೆ. 
ಗಾಳಿಯಲ್ಲಿರುವ ಹೆಚ್ಚಿನ ಪ್ರಮಾಣದ ನೈಟ್ರೋಜನ್ (ಸಾರಜನಕ) ಡೈಆಕ್ಸೈಡ್'ಗೆ ನೇರವಾಗಿ ಎದುರಾಗುವ ಮಹಿಳೆಯರಲ್ಲಿ ಶೇ.6 ರಷ್ಟು ಗರ್ಭಪಾತವಾಗುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸಮಸ್ಯೆಗಳನ್ನು ದೂರಾಗಿಸಲು ಹಾಗೂ ಪರಿಹಾರವನ್ನು ಕಂಡುಕೊಳ್ಳಲು ಸಮಾಜವು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಅಧ್ಯಯನವನ್ನು ವರದಿ ಮಾಡಿರುವ ಹಿರಿಯ ಲೇಖಕ ಮ್ಯಾಥ್ಯೂ ಫುಲ್ಲರ್ ಅವರು ಹೇಳಿದ್ದಾರೆ. 
ಸಂಶೋಧನೆಯಲ್ಲಿ 28 ವರ್ಷದೊಳಗಿನ ಒಟ್ಟು 1,300 ಮಹಿಳೆಯರನ್ನು ಬಳಕೆ ಮಾಡಿಕೊಳ್ಳಲಾಗಿದೆ. ನಮಗೆ ಸಿಕ್ಕ ಕಡಿಮೆ ಸಮಯದಲ್ಲಿಯೇ ವಾಯುಮಾಲಿನ್ಯದಿಂದ ಎದುರಾಗುವ ಅಪಾಯವನ್ನು ಗಂಭೀರವಾಗಿ ಅಧ್ಯಯನ ಮಾಡಲಾಯಿತು ಸಂಶೋಧಕ ಕ್ಲೇರ್ ಲೀಸೆರ್ ಅವರು ತಿಳಿಸಿದ್ದಾರೆ. 
ಯಾವ ಹಂತದಲ್ಲಿ ಹಾಗೂ ಯಾವ ಸಮಯದಲ್ಲಿ ಗರ್ಭಪಾತವಾಗುತ್ತದೆ ಎಂಬುದರ ಬಗ್ಗೆ ಸಂಶೋಧರಕರಿಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಹೆಚ್ಚು ಮಾಲಿನ್ಯಯುಕ್ತ ಗಾಳಿ ಸೇವನೆಯಿಂದ ಮಗುವಿಗೆ ಅಪಾಯ ಎದುರಾಗುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ.
ವಾಯುಮಾಲಿನ್ಯದಿಂದ ತಮ್ಮ ಶಿಶುವನ್ನು ರಕ್ಷಣೆ ಮಾಡಲು ಬಯಸುವ ಮಹಿಳೆಯರು ಫೇಸ್ ಮಾಸ್ಕ್ ಗಳನ್ನು ಧರಿಸುವುದು ಒಳ್ಳೆಯರು. ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಹೊರಗೆ ಹೋಗದೆ ಮನೆಯೊಳಗೇ ಇರುವುದು ಒಳಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ