ಕಛೇರಿಯಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳೆಯರಲ್ಲಿ ಅಸ್ತಮಾ ಸಮಸ್ಯೆ ಹೆಚ್ಚು: ಅಧ್ಯಯನ ವರದಿ
ಲಂಡನ್: ಕಛೇರಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮಹಿಳೆಯರು, ಮನೆಯಲ್ಲಿ ಸ್ವಚ್ಚತೆಗಾಗಿ ಬಲವಾದ ಆಸಿಡ್ ನಂತಹಾ ಪದಾರ್ಥವನ್ನು ಬಳಸುವ ಮಹಿಳೆಯರಲ್ಲಿ ಬೇರೆ ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶದ ಖಾಯಿಲೆಗಳು ಕಂಡು ಬರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸ್ವಚ್ಚತೆಗಾಗಿ ರಾಸಾಯನಿಕ ಪದಾರ್ಥಗಳನ್ನು ನಿತ್ಯ ಬಳಸುವ ಮಹಿಳೆಯರಲ್ಲಿ ಅಸ್ತಮಾ ಗುಣಲಕ್ಷಣಗಳು ಕಂಡುಬಂದಿದೆ. ಆದರೆ ಈ ರೋಗದ ಲಕ್ಷಣಗಳು ದೀರ್ಘಕಾಲದವರೆಗೆ ಇರಲಿದೆಯೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯದ ಸೆಸಿಲ್ ಸ್ವಾನೆಸ್ ಹೇಳಿದ್ದಾರೆ.
ಇಂತಹಾ ರಾಸಾಯನಿಕಗಳು ದಿನನಿತ್ಯವೂ ವಾತಾವರಣದಲ್ಲಿ ಸೇರಿ ಅಲ್ಲಿ ಹಾನಿಯುಂಟುಮಾಡುತದೆ. ಇನ್ನು ಈ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ವರ್ಷ ದಿಂದ ವರ್ಷಕ್ಕೆ ಶ್ವಾಸಕೋಶದ ಕಾರ್ಯಚಟುವಟಿಕೆಗೆ ಹಾನಿಯಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಸೆಸಿಲ್ ಹೇಳಿದರು.
ಅಮೇರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನವೂ ಸಹ ಇದನ್ನು ಹೇಳಿದೆ.ಇದರ ಅನುಸಾರ ಮನೆಯಲ್ಲಿ ಸ್ವಚ್ಚತೆಗಾಘಿ ರಾಸಾಯನಿಕಗಳನ್ನು ಬಳಸುವವರಲ್ಲಿ ಶೇ.12.3ರಷ್ಟು ಮಹಿಳೆಯರು, ಕಛೇರಿಯಲ್ಲಿ ಸ್ವಚ್ಚತೆ ಕೆಲಸದಲ್ಲಿ ನಿರತರಾದವರಲ್ಲಿ ಶೇ.13.7 ಮಹಿಳೆಯರು ಅಸ್ತಮಾಗೆ ತುತ್ತಾಗುತ್ತಾರೆ.
ಇದೆಷ್ಟು ಗಂಭಿರ ಸಮಸ್ಯೆಯಾಗಿದೆ ಎನ್ನುವುದನ್ನು ಹೇಳಬೇಕೆಂದರೆ ಈ ಮಹಿಳೆಯರ ಶ್ವಾಸಕೋಶದ ಸಮಸ್ಯೆ, ಅಸ್ತಮಾ ಸಮಸ್ಯೆಗಳನ್ನು ಯಾರು 20 ಪ್ಯಾಕ್ ಸಿಗರೇಟ್ ಸೇದುತ್ತಾರೆಯೋ ಅಂತಹವರ ಶ್ವಾಸಕೋಶದ ಸಮಸ್ಯೆಗಳ ಜತೆ ಹೋಲಿಸಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos