ಚೀನಿಯರು ಹೆಚ್ಚು ಸಸ್ಯಹಾರಿಗಳಾಗುತ್ತಿದ್ದಾರೆ, ಏಕೆ ಗೊತ್ತೇ? 
ಆರೋಗ್ಯ

ಚೀನಿಯರು ಹೆಚ್ಚು ಸಸ್ಯಹಾರಿಗಳಾಗುತ್ತಿದ್ದಾರೆ, ಏಕೆ ಗೊತ್ತೇ?

ಪೋರ್ಕ್, ಬೀಫ್ ಗಳಿಗೆ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದ್ದ ಚೀನಾದಲ್ಲಿ ಈಗ ಸಸ್ಯಹಾರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.

ಬೀಜಿಂಗ್: ಪೋರ್ಕ್, ಬೀಫ್ ಗಳಿಗೆ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದ್ದ ಚೀನಾದಲ್ಲಿ ಈಗ ಸಸ್ಯಹಾರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. 
ಚೀನಾದಲ್ಲಿ ಸಸ್ಯಹಾರಕ್ಕೆ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ವೆಜಿಟೇರಿಯನ್ ರೆಸ್ಟೊರೆಂಟ್ ಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಚೀನಾದಲ್ಲಿ ಆಹಾರದ ಟ್ರೆಂಡ್ ಬದಲಾಗತೊಡಗಿದೆ. 
ಸಾವಯವ, ಸಸ್ಯಹಾರ ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣದಿಂದಾಗಿ ಚೀನಾದಲ್ಲಿ ಈ ಟ್ರೆಂಡ್ ಉಂಟಾಗಿದೆ ಎನ್ನಲಾಗುತ್ತಿದ್ದು ರೆಸ್ಟೊರೆಂಟ್ ಉದ್ಯಮದಲ್ಲಿ ವೆಜಿಟೇರಿಯನ್ ರೆಸ್ಟೊರೆಂಟ್ ಗಳನ್ನು ಪ್ರಾರಂಭಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. 
2012 ರಲ್ಲಿ ಚೀನಾದ ಶಾಂಘೈ ನಲ್ಲಿ ಇದ್ದದ್ದು ಕೇವಲ 49 ವೆಜಿಟೆರಿಯನ್ ಔಟ್ ಲೆಟ್ ಆದರೆ ಈಗ ಅದು 100 ಕ್ಕಿಂತ ಹೆಚ್ಚಾಗಿದೆ. 
ಚೀನಾಡೈಲಾಗ್ ಡಾಟ್ ನೆಟ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಕಳೆದ ಎರಡು ವರ್ಷಗಳ ಹಿಂದೆ ಚೀನಾದ ಆರೋಗ್ಯ ಉದ್ಯಮ ಜನರಿಗೆ ಹೆಚ್ಚು ಮಾಂಸಾಹಾರ ತಿನ್ನದಂತೆ ಸಲಹೆ ನೀಡಿತ್ತು. ಇದಕ್ಕೆ ಪೂರಕವೆಂಬಂತೆ 2016 ರಲ್ಲಿ ಪೋರ್ಟ್ ಮಾರಾಟ 42.49 ಮಿಲಿಯನ್ ಟನ್ ಗಳಿಂದ 40.85 ಮಿಲಿಯನ್ ಟನ್ ಗಳಿಗೆ ಇಳಿಕೆಯಾಗಿದೆ. 
ಚೀನಾದ ಮಾಂಸ ಉದ್ಯಮದಿಂದಾಗಿ ಪ್ರತಿ ವರ್ಷ ವಾತಾವರಣಕ್ಕೆ 150 ಮಿಲಿಯನ್ ಟನ್ ಗಳಷ್ಟು ಇಂಗಾಲ ಸೇರುತ್ತಿತ್ತು. ಆದರೆ ಈಗ ಚೀನಾ ಹೆಚ್ಚು ಸಸ್ಯಹಾರಕ್ಕೆ ಪ್ರಾಧಾನ್ಯತೆ ನೀಡುತ್ತಿರುವುದರಿಂದ ವಿಶ್ವದ ಶೇ.40 ರಷ್ಟು ಹಣ್ಣು ಮತ್ತು ತರಕಾರಿಗಳನ್ನು ಚೀನಾ ಸೇವಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಚೀನಾದಲ್ಲಿ ಸಸ್ಯಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್