ಡಯಟ್ ಇಲ್ಲ, ಜಿಮ್ ಇಲ್ಲದೆ ತೂಕ ಇಳಿಸಬೇಕಾ? ಹಾಗಾದ್ರೆ, ಬೆಳಿಗ್ಗೆ ಎದ್ದ ಕೂಡಲೇ ಈ 1 ಲೋಟ ನೀರು ಕುಡಿಯಿರಿ, ಬೊಜ್ಜು ಕರಗೋದು ಫಿಕ್ಸ್!
Health Tips: ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ತೂಕ ಮತ್ತು ಹೊಟ್ಟೆಯ ಬೊಜ್ಜು ಬಹುತೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗಬೇಕು ಅಥವಾ ಕಟ್ಟುನಿಟ್ಟಿನ ಡಯಟ್ ಮಾಡಬೇಕು ಎಂದು ಹಲವರು ಭಾವಿಸುತ್ತಾರೆ. ಆದರೆ, ಸಮಯದ ಅಭಾವದಿಂದ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಇಂತಹವರಿಗಾಗಿ ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ತಯಾರಿಸಬಹುದಾದ ಒಂದು ಸರಳ ಮನೆಮದ್ದು ಇಲ್ಲಿದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಒಂದು ಲೋಟ ಬಿಸಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ, ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಕೇವಲ ಒಂದೇ ತಿಂಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುವಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.
ಜೀರಿಗೆ ನೆನೆಸಿದ ನೀರು - ಬೊಜ್ಜಿಗೆ ನಂ.1 ಮದ್ದು
ರಾತ್ರಿ 1 ಚಮಚ ಜೀರಿಗೆಯನ್ನು 1 ಲೋಟ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದೇ ನೀರನ್ನು ಕುದಿಸಿ, ಸೋಸಿ ಖಾಲಿ ಹೊಟ್ಟೆಗೆ ಕುಡಿಯಿರಿ. ಜೀರಿಗೆಯಲ್ಲಿ ಮೆಟಾಬಾಲಿಸಂ ಹೆಚ್ಚಿಸುವ ಗುಣ ಇದೆ, ಹೊಟ್ಟೆಯ ಕೊಬ್ಬನ್ನು ಬೇಗ ಕರಗಿಸುತ್ತದೆ, ಗ್ಯಾಸ್, ಮಲಬದ್ಧತೆ ಕಡಿಮೆ ಮಾಡುತ್ತದೆ.
ನಿಂಬೆ + ಜೇನುತುಪ್ಪ + ಉಗುರು ಬೆಚ್ಚಗಿನ ನೀರು
ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ರಸ, 1 ಚಮಚ ಜೇನುತುಪ್ಪ ಹಾಕಿ ಕುಡಿಯಿರಿ. ಇದು ದೇಹದಲ್ಲಿನ ಟಾಕ್ಸಿನ್ ಹೊರಹಾಕುತ್ತದೆ, ಲಿವರ್ ಕ್ಲೀನ್ ಮಾಡುತ್ತದೆ, ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಅಸಿಡಿಟಿ ಇರೋರು ಜೇನು ಬಿಟ್ಟು ಬರಿ ನಿಂಬೆ ನೀರು ಕುಡಿಯಬಹುದು.
ಮೆಂತ್ಯ ನೆನೆಸಿದ ನೀರು - ಹೊಟ್ಟೆ ಬೊಜ್ಜಿಗೆ ರಾಮಬಾಣ
ರಾತ್ರಿ 1 ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಆ ನೀರನ್ನು ಕುಡಿಯಿರಿ. ಮೆಂತ್ಯ ಹಸಿವನ್ನು ನಿಯಂತ್ರಿಸುತ್ತದೆ, ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುತ್ತದೆ, ಬೊಜ್ಜು ಬೇಗ ಕರಗಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳುಗಳನ್ನು ಜಗಿದು ತಿನ್ನಬಹುದು.
ಶುಂಠಿ + ನಿಂಬೆ ಡಿಟಾಕ್ಸ್ ನೀರು
ಸಣ್ಣ ತುಂಡು ಶುಂಠಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ, ಅದಕ್ಕೆ ನಿಂಬೆ ರಸ ಹಾಕಿ ಕುಡಿಯಿರಿ. ಶುಂಠಿ ದೇಹದ ಉಷ್ಣತೆ ಹೆಚ್ಚಿಸಿ ಕೊಬ್ಬನ್ನು ಬೇಗ ಸುಡುತ್ತದೆ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ.
ಕೇವಲ ಉಗುರು ಬೆಚ್ಚಗಿನ ನೀರು ಕೂಡ ಸಾಕು
ಏನೂ ಇಲ್ಲದಿದ್ದರೆ ದಿನಾ ಬೆಳಿಗ್ಗೆ ಎದ್ದ ಕೂಡಲೇ 2 ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ಕರುಳನ್ನು ಸ್ವಚ್ಛ ಮಾಡುತ್ತದೆ, ಮಲಬದ್ಧತೆ ಹೋಗುತ್ತದೆ, ಮೆಟಾಬಾಲಿಸಂ 30% ವರೆಗೆ ಹೆಚ್ಚಾಗುತ್ತದೆ. ಜಪಾನ್ ನಲ್ಲಿ ಇದನ್ನೇ ವಾಟರ್ ಥೆರಪಿ ಅಂತಾರೆ.
ಈ ನೀರುಗಳಿಂದ ತಕ್ಷಣಕ್ಕೆ ಬುಲೆಟ್ ವೇಗದಲ್ಲಿ ತೂಕ ಇಳಿಯಲ್ಲ, ಆದರೆ 20-30 ದಿನ ನಿರಂತರವಾಗಿ ಮಾಡಿದರೆ ಹೊಟ್ಟೆ ಹಗುರವಾಗುವುದು, ತೂಕ ಇಳಿಯುವುದು ಖಂಡಿತ. ಶುಗರ್, ಥೈರಾಯ್ಡ್ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

