ವಿದ್ಯಾರ್ಥಿಗಳ (ಸಾಂದರ್ಭಿಕ ಚಿತ್ರ) 
ಆರೋಗ್ಯ

ಪರೀಕ್ಷೆಗಳ ಸಮಯ: ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಕೆಲವು ಸಲಹೆ

ಇದು ಪರೀಕ್ಷೆಗಳ ಸಮಯ. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಜವಾಗಿಯೇ ಒತ್ತಡದಲ್ಲಿರುತ್ತಾರೆ. ಅದಕ್ಕೆ ಇಲ್ಲಿ ಕೆಲವೊಂದು ಟಿಪ್ಸ್ ಇದೆ.

ನವದೆಹಲಿ:  ಇದು ಪರೀಕ್ಷೆಗಳ ಸಮಯ. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಜವಾಗಿಯೇ  ಒತ್ತಡದಲ್ಲಿರುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಬಿಡುವಿಲ್ಲದಂತೆ ವ್ಯಾಸಂಗದಲ್ಲಿ ನಿರತರಾಗುತ್ತಾರೆ ಆದರೆ, ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯಕ್ಕೂ ಒತ್ತು ನೀಡಬೇಕಾದದ್ದು ಅಗತ್ಯವಾಗಿದೆ.

ಈ ಬಗ್ಗೆಹಿಮಾಲಯ ಔಷಧಕಂಪನಿ ಆರ್ಯುವೇದ ತಜ್ಞ ಡಾ. ಹರಿಪ್ರಸಾದ್ ಅವರು ಕೆಲವೊಂದು ಸಲಹೆ ನೀಡಿದ್ದಾರೆ.

ಪ್ರತಿದಿನ ವ್ಯಾಯಾಮ: ಶೈಕ್ಷಣಿಕವಾಗಿ  ಸಾಧನೆ ಮಾಡಲು ದೈಹಿಕ ಚಟುವಟಿಕೆ ಪರಿಣಾಮಕಾರಿ ಸಾಧನವಾಗಿದೆ.
ಈ ಬಗ್ಗೆ ಕೊಲಂಬಿಯಾದ  ಬ್ರಿಟೀಷ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಪ್ರಕಾರ,ಪ್ರತಿದಿನ ಏರೋಬಿಕ್ಸ್ ವ್ಯಾಯಾಮ ಮಾಡುವುದರಿಂದ ಮೆದುಳಿನ ಶಕ್ತಿ ಹೆಚ್ಚಾಗಿ ಓದಿದ ವಿಷಯವೆಲ್ಲಾ ಹೆಚ್ಚುಕಾಲ ಜ್ಞಾಪಕದಲ್ಲಿ ಉಳಿಯುವಂತಾಗುತ್ತದೆ ಎಂಬುದು ದೃಢಪಟ್ಟಿದೆ.

ಆರೋಗ್ಯಕರ ಆಹಾರ ಪದ್ದತಿ ನಿರ್ವಹಣೆ : ಎಲ್ಲಾ ವೇಳೆಯಲ್ಲೂ ಉತ್ತಮ ಆಹಾರ ಪದ್ಧತಿ ನಿರ್ವಹಣೆಯೂ ಅಗತ್ಯವಾಗಿದೆ.
ಊಟದಲ್ಲಿ ತರಕಾರಿ , ಹಣ್ಣು, ಧಾನ್ಯ, ಹಾಲಿನ ಉತ್ಪನ್ನಗಳು, ಮೀನು ಮತ್ತು ಮೊಟ್ಟೆ ಹೆಚ್ಚಾಗಿ ಸೇವಿಸುವುದಿಂದ ಪೋಷಕಾಂಶ ಹೆಚ್ಚಾಗಿ ಉತ್ತಮ ಆರೋಗ್ಯಕಾಪಾಡಬಹುದಾಗಿದೆ. ವ್ಯಾಸಂಗದಲ್ಲಿ ಹೆಚ್ಚಿನ ಆಸಕ್ತಿ ತಾಳಬಹುದಾಗಿದೆ.

ಆಹಾರದಲ್ಲಿ ಸೂಕ್ತ ಗಿಡಮೂಲಿಕೆಗಳ ಬಳಕೆ : ಆಯುರ್ವೇದ ಪಠ್ಯ ಮತ್ತು ಆಧುನಿಕ ಸಂಶೋಧನೆ ಪ್ರಕಾರ ಗಿಡಮೂಲಿಕೆ ಸೇವಿಸುವುದರಿಂದ ನೆನಪಿನ ಶಕ್ತಿ ಸಂರಕ್ಷಿಸಬಹುದಾಗಿದೆ. ಮಾನಸಿಕ ಆರೋಗ್ಯ ಕಾಪಾಡಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಅನುಕೂಲವಾಗಲಿದೆ.

 ಸರಿಯಾದ ನಿದ್ರೆ : ಪರೀಕ್ಷೆಗಳ ಸಂದರ್ಭದಲ್ಲಿ ಓದಿನ ಜೊತೆಗೆ ಸೂಕ್ತ ನಿದ್ರೆಯೂ ಅತ್ಯವಶ್ಯಕ. ಪರೀಕ್ಷೆಗಾಗಿ  ತಯಾರಾಗುತ್ತಿರುವ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ  ಪ್ರತಿ ರಾತ್ರಿ  6ರಿಂದ 8 ಗಂಟೆಗಳ ನಿದ್ರೆ ಮಾಡಲೇಬೇಕು.

ಹಾರ್ವಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ  ನಿದ್ರೆ ಮತ್ತು ನೆನಪಿನ ಶಕ್ತಿ ಮಧ್ಯೆ ಗಟ್ಟಿಯಾದ ಬಾಂಧವ್ಯವಿರುವುದು ದೃಢಪಟ್ಟಿದೆ.
ಸರಿಯಾಗಿ ನಿದ್ರೆ ಮಾಡುವುದರಿಂದ ಓದಿದ ವಿಷಯವನ್ನು ಮನನ ಮಾಡಿಕೊಳ್ಳಲು ಹಾಗೂ ಪರೀಕ್ಷೆಯನ್ನುಉತ್ತಮವಾಗಿ ಬರೆಯಲು ಸಾಧ್ಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video