ಆರೋಗ್ಯ

ಸ್ತನ್ಯಪಾನ ಮಾಡಿಸಿ ಮಧುಮೇಹ ಅಪಾಯದಿಂದ ದೂರಾಗಿ

Raghavendra Adiga
ವಾಷಿಂಗ್ ಟನ್: ಆರು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ತಮ್ಮ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಮಧುಮೇಹದಿಂದ ಉಂಟಾಗಬಹುದಾದ  ಅಪಾಯ ಅರ್ಧದಷ್ಟು ತಗ್ಗಲಿದೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ.
ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಎದೆಹಾಲು ಕುಡಿಸಿದ ಮಹಿಳೆಯರಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ.47ದಷ್ಟು ಕಡಿಮೆಯಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಿದೆ.
ಹೊಸ ಸಂಶೋಧನೆಯ ಅನುಸಾರ ಸ್ತನ್ಯಪಾನ ತಾಯಿ ಮತ್ತು ಮಗುವಿನ ಮೇಲೆ  ರಕ್ಷಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದ್ದು ತಾಯಿಗೆ ಕಾಣಿಸಿಕೊಲ್ಳಬಹುದಾದ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
"ಅನೇಕ ಗೊಂದಲಗಳ ಹೊರತಾಗಿ ಣಾವು ಸ್ತನ್ಯಪಾನದ ಅವಧಿ ಮತ್ತು ಮಧುಮೇಹದ ಅಪಾಯದಿಂದ ದೂರಾಗುವ ಸಾಧ್ಯತೆ ನಡುವೆ ಸಂಬಂಧವಿರುವುದನ್ನು ಣಾವು ಪತ್ತೆಹಚ್ಚಿದ್ದೇವೆ." ಎಂದು ಕೈಸರ್ ಪರ್ಮನೆಂಟ್ ರಿಸರ್ಚ್ ಸೆಂಟರ್ ನ ಹಿರಿಯ ಸಂಶೋಧಕಿ ಎರಿಕಾ ಪಿ ಗುಂಡರ್ಸನ್ ಹೇಳಿದ್ದಾರೆ. 30 ವರ್ಷಗಳ ದಾಖಲೆಗಳನ್ನು ಪರಿಶೀಲಿಸಿದ ಸಂಶೋಧನಾ ತಂಡ ಯುವ ವಯಸ್ಕರಲ್ಲಿ ಪರಿಧಮನಿಯ ಅಪಧಮನಿಯ ಅಪಾಯದ ಬೆಳವಣಿಗೆ ಅಧ್ಯಯನ ಆಧರಿಸಿ ಈ ಸಂಶೋಧನಾ ವರದಿ ತಯಾರಾಗಿದೆ.
SCROLL FOR NEXT