ಆರೋಗ್ಯ

ವಿಟಮೀನ್ ಡಿಯಿಂದ ಸ್ತನ ಕ್ಯಾನ್ಸರ್ ದೂರ

Srinivas Rao BV
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಆದರೆ ವಿಟಮೀನ್ ಡಿ ಹೆಚ್ಚು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ನ್ನು ತಡೆಯಬಹುದಾಗಿದೆ. 
ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಸಂಶೋಧನೆಯ ಪ್ರಕಾರ ವಿಟಮೀನ್ ಡಿ ಹೆಚ್ಚು ಸೇವಿಸಿದಷ್ಟೂ ಸ್ತನ ಕ್ಯಾನ್ಸರ್ ನ್ನು ತಡೆಯಬಹುದಾಗಿದೆ. ಸುಮಾರು 3,325 ರೋಗಿಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು ವಿಟಮೀನ್ ಡಿ ಹೆಚ್ಚು ಇದ್ದವರೆಲ್ಲರಿಗೂ ಸ್ತನ ಕ್ಯಾನ್ಸರ್ ನ ಅಪಾಯ ಕಡಿಮೆ ಇದ್ದದ್ದು ಪತ್ತೆಯಾಗಿದೆ. 
ಸ್ತನ ಕ್ಯಾನ್ಸರ್ ಇಲ್ಲದ 55 ವರ್ಷದ ಮಹಿಳೆಯರನ್ನು 2002 ರಿಂದ 2017 ವರೆಗೆ ಅಧ್ಯಯನಕ್ಕೊಳಪಡಿಸಲಾಗಿತ್ತು ಅಷ್ಟೇ ಅಲ್ಲದೇ 4 ವರ್ಷಗಳಿಗೊಮ್ಮೆ ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿತ್ತು. ಈ ತಪಾಸಣೆ ವೇಳೆ ರಕ್ತದಲ್ಲಿ ವಿಟಮೀನ್ ಡಿಯನ್ನೂ ಪರೀಕ್ಷಿಸಲಾಗುತ್ತಿತ್ತು. ವಿಟಮೀನ್ ಡಿ ಹೆಚ್ಚು ಇರುವವರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. 
SCROLL FOR NEXT