ಆರೋಗ್ಯ

ಐಪ್ಯಾಡ್ ಬಳಕೆ: ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಕುತ್ತಿಗೆ ನೋವು!

Srinivas Rao BV
ಐಪ್ಯಾಡ್ ಬಳಕೆ ಮಾಡುವಾಗ ಆಂಗಿಕ ಭಂಗಿಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದಾಗಿ ಬಹುತೇಕ ಮಂದಿ ಕುತ್ತಿಗೆ ನೋವು ಎದುರಿಸುತ್ತಾರೆ. ಈ ಬಗ್ಗೆ ನಡೆಸಲಾಗಿರುವ ಅಧ್ಯಯನದ ವರದಿ ಮತ್ತೊಂದು ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. 
ಐಪ್ಯಾಡ್ ಬಳಕೆ ಮಾಡುವ ಯುವಜನರಲ್ಲಿ ಕುತ್ತಿಗೆ ನೋವು ಎದುರಾಗುತ್ತಿದೆ, ಅದರಲ್ಲಿಯೂ ಪುರುಷರಿಗಿಂತ ಹೆಚ್ಚು ಮಹಿಳೆಯರೇ ಹೆಚ್ಚು ನೋವು ಎದುರಿಸುತ್ತಾರೆ ಎಂದು  ದೈಹಿಕ ಥೆರಪಿ ಸೈನ್ಸ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ಐಪ್ಯಾಡ್, ಟ್ಯಾಬ್ಲೆಟ್ ಗಳ ಬಳಕೆಯ ಸಮಯ ಕುತ್ತಿಗೆ ನೋವಿಗೆ ಕಾರಣವಾಗುವುದಿಲ್ಲ ಬದಲಾಗಿ, ಬಳಕೆ ಮಾಡುವಾಗ ಉಂಟಾಗುವ ಭಂಗಿಯಿಂದ ಕುತ್ತಿಗೆ ನೋವು ಬರುತ್ತದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಟ್ಯಾಬ್ಲೆಟ್, ಐ ಪ್ಯಾಡ್ ಬಳಕೆ ಮಾಡುವಾಗಿನ ನಿರ್ದಿಷ್ಟ ಭಂಗಿಗಳು ಕುತ್ತಿಗೆ ನೋವಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ನಡೆಸಿರುವ ತಂಡದ ಮುಖ್ಯಸ್ಥರಾದ ನೆವಾಡಾ ವಿಶ್ವವಿದ್ಯಾಲಯದ ಸ್ಸು-ಪಿಂಗ್ ಲೀ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರಿಗೆ ಸ್ನಾಯುಗಳ ಬಲ ಕಡಿಮೆ ಇರುವುದರಿಂದ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಕುತ್ತಿಗೆ ನೋವು ಕಾಡುತ್ತದೆ ಎಂದಿದ್ದಾರೆ. 
400 ಮಂದಿಯನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಶೇ.70 ರಷ್ಟು ಮಹಿಳೆಯರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿದ್ದರೆ ಶೇ.30 ರಷ್ಟು ಪುರುಷರಿಗೆ ಮಾತ್ರ ಕುತ್ತಿಗೆ ನೋವು ಕಾಣಿಸಿಕೊಂಡಿದೆ. 
SCROLL FOR NEXT