ಸಾಂದರ್ಭಿಕ ಚಿತ್ರ 
ಆರೋಗ್ಯ

ರೋಸ್ಟೆಡ್, ಗ್ರಿಲ್ಡ್ ಮಾಂಸಹಾರ ಸೇವೆನೆಯಿಂದ ಏರುತ್ತದೆ ರಕ್ತದೊತ್ತಡ!

ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ...

ನ್ಯೂಯಾರ್ಕ್: ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ಸೇವಿಸುವುದರಿಂದ ರಕ್ತದೊತ್ತಡ ಮಟ್ಟದಲ್ಲಿ ಏರಿಕೆಯಾಗುತ್ತದೆ, ಜೊತೆಗೆ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ತಿಂಗಳಲ್ಲಿ 15 ಬಾರಿ ಗ್ರಿಲ್ಡ್ ಚಿಕನ್, ಫಿಶ್ ಸೇವನೆ ಮಾಡಿದರೇ ಶೇ, 17 ರಷ್ಟು ರಕ್ತದೊತ್ತಡ ಪ್ರಮಾಣಏರುತ್ತದೆ ಎಂದು ಹಾರ್ವರ್ಡ್ ಅಧ್ಯಯನ ಕಂಡು ಹಿಡಿದಿದೆ.
ಅಪರೂಪಕ್ಕೆ ಈ ರೀತಿಯ ಮಾಂಸಾಹಾರ ಸೇವಿಸುವವರಿಗಿಂತ ಇವರಿಗೆ ಅಪಾಯ ಹೆಚ್ಚು ಇರುತ್ತದೆ. ಅಧಿಕ ಉಷ್ಣತೆಗೆ ಮಾಂಸಾಹಾರವನ್ನು ಒಡ್ಡಿದಾಗ ಅದರಿಂದ ಬಿಡುಗಡೆಯಾಗುವ ಪ್ರೋಟೀನ್ ನಿಂದ ರಸಾಯನಿಕ ಉತ್ಪತ್ತಿಯಾಗುತ್ತದೆ ಈ ಆಹಾರ ಪದಾರ್ಥ ಸೇವಿಸುವದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮಾಂಸಾಹಾರದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳಿಂದ ಒತ್ತಡ, ಊರಿಯೂತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಬೋಸ್ಟನ್ ಟಿ.ಎಚ್ ಚಾನ್ ಸ್ಕೂಲ್ ಆಫ್  ಪಬ್ಲಿಕ್ ಹೆಲ್ತ್  ವಿಭಾಗದ ಲೇಖಕರು ಹೇಳಿದ್ದಾರೆ.
ಹೀಗಾಗಿ ತೆರೆದ ಬೆಂಕಿಯಲ್ಲಿ ಮಾಂಸ ಸುಡುವುದು,  ಅಧಿಕ ಉಷ್ಣಾಂಶದಲ್ಲಿ ಬೇಯಿಸುವ ಮಾಂಸಾಹಾರಗಳಿಂದ ದೂರ ಇರುವಂತೆ ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!