ಆರೋಗ್ಯ

ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ, ಬಿಗಿಯಾದ ಬಟ್ಟೆಗಳಿಂದ ದೂರವಿರಿ!

Manjula VN
ಸಣ್ಣಗೆ ಕಾಣುವ ಸಲುವಾಗಿ ಸಾಕಷ್ಟು ಹೆಣ್ಣು ಮಕ್ಕಳು ಮೈಗೆ ಅಂಟಿದ ಬಟ್ಟೆ ತೊಡುವುದು ಸಾಮಾನ್ಯ. ಅದರ ಹಿಂದಿನ ಕೆಟ್ಟ ಪರಿಣಾಮ ಪರಿವಲ್ಲದೆ ಕೆಲವು ಟೈಟ್ ಜೀನ್ಸ್, ಟೀ ಶರ್ಟ್ಸ್ ಇನ್ನೂ ಮುಂತಾದ ಬಟ್ಟೆಗಳನ್ನು ತೊಡುತ್ತಾರೆ. ಬಿಗಿಬಟ್ಟೆಗಳನ್ನು ನಿರಂತರವಾಗಿ ಬಳಕೆ ಮಾಡುವುದರಿಂದ ಚರ್ಮಕ್ಕಷ್ಟೇ ಅಲ್ಲದೆ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 
ಪ್ರತೀನಿತ್ಯ ಬಿಗಿ ಬಟ್ಟೆಗಳನ್ನು ಧರಿಸುವುದರಿಂದ ಅದು ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚರ್ಮ ಹಾಗೂ ಆರೋಗ್ಯ ಸಮತೋಲದನಲ್ಲಿರಬೇಕಾದರೆ ದೇಹದಲ್ಲಿ ರಕ್ತದ ಸಂಚಲನ ಸರಿಯಾಗಿರಬೇಕು. ಆದರೆ, ಬಿಗಿಯಾದ ಉಡುಪುಗಳು ರಕ್ತ ಸಂಚಲನವನ್ನು ಕುಂಠಿತಗೊಳ್ಳುವಂತೆ ಮಾಡುತ್ತದೆ. 
ಬಿಗಿ ಉಡುಪುಗಳನ್ನು ತೊಟ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಕ್ಕಿಂತಲೂ ಸಡಿವಾದ ಹಾಗೂ ಆರಾಮದಾಯಕವಾದ ಉಡುಪುಗಳನ್ನು ತೊಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. 
ಹೊಟ್ಟೆ ಹಾಗೂ ಜೀರ್ಣಕ್ರಿಯೆ ಸರಿಯಾಗಿರಬೇಕೆಂದರೆ ಅನುಸರಿಸಬೇಕಾದ ಕೆಲ ಸಲಹೆಗಳು ಇಂತಿವೆ...
ಸಣ್ಣ ಪ್ರಮಾಣದ ಆಹಾರವನ್ನು ಸೇವಿಸಿ
ಕೆಲವರು ಆಹಾರವನ್ನು ಸಮಯಕ್ಕೆ ಸರಿಯಾಗಿ ಮಾಡದೆ, ಒಂದೇ ಬಾರಿ ಹೆಚ್ಚೆಚ್ಚು ಆಹಾರವನ್ನು ಸೇವಿಸುತ್ತಾರೆ. ಹಾಗೆ ಮಾಡುವುದು ತಪ್ಪು ಎನ್ನುತ್ತಾರೆ ತಜ್ಞರು. ಒಮ್ಮೆಲೇ ಹೆಚ್ಚೆಚ್ಚು ಆಹಾರ ಸೇವನೆ ಮಾಡುವುದಕ್ಕಿಂತಲೂ 3 ಬಾರಿ ತಿನ್ನುವುದನ್ನು ಸ್ವಲ್ಪ ಸ್ವಲ್ಪವೇ 5 ಬಾರಿ ಸೇವಿಸಬೇಕು. ನೀರನ್ನು ಸಮಾಧಾನದಿಂದ ನಿಧಾನಗತಿಯಲ್ಲಿ ಕುಡಿಯಬೇಕು. ಇದರಿಂದ ಹೊಟ್ಟೆಯಲ್ಲಿರುವ ಆಮ್ಲ ಹೊರಗೆ ಬರಲು ಸಹಾಯವಾಗುತ್ತದೆ. ಊಟ ಮಾಡಿದ ಕೂಡಲೇ ಎದ್ದು ಕೆಲಸ ಮಾಡಬಾರದು. ಕೆಲ ಕಾಲ ಕುಳಿತು, ಜೀರ್ಣವಾಗಲು ಸಮಯ ನೀಡಬೇಕು. 
ಮಲಗುವುದಕ್ಕೆ ಕೆಲ ನಿಮಿಷಗಳಿರುವಾಗ ಆಹಾರ ಸೇವನೆ ಒಳ್ಳೆಯದಲ್ಲ
ಊಟಕ್ಕೂ ಮಲಗುವುದಕ್ಕೂ ಗಂಟೆಗಳ ಕಾಲ ಸಮಯವಿರಬೇಕು. ಊಟ ಮಾಡಿದ ಕೂಡಲೇ ಮಲಗುವುದು ಒಳ್ಳೆಯದಲ್ಲ. ಹೆಚ್ಚೆಚ್ಚು ನೀರನ್ನು ಕುಡಿಯಬೇಕು.
ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು
ದೈಹಿಕ ಹಾಗೂ ಮಾನಸಿಕ ಒತ್ತಡಗಳೂ ಕೂಡ ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಒತ್ತಡವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು. 
ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಿ
ಅತೀಯಾದ ತೂಕವಿದ್ದರೂ ಅದು ನಮ್ಮ ಜೀವನ ಶೈಲಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತೀನಿತ್ಯ ಇತಿಮಿತಿಯಲ್ಲಿ ಆರೋಗ್ಯಕರವಾದ ಆಹಾರ ಸೇವಿಸಿ, ವ್ಯಾಯಾಮ ಮಾಡುತ್ತಿರಬೇಕು. 
ಮಲಗುವಾಗ ತಲೆಯನ್ನು ಸ್ವಲ್ಪ ಎತ್ತರದಲ್ಲಿರಿಸಿ ಮಲಗಿ
ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡಲು ಮಲಗುವಾಗ 6-12 ಇಂಚುಗಳಷ್ಟು ಮೇಲೆ ತಲೆಯನ್ನು ಹಾಕಿ ಮಲಗಬೇಕು. 
SCROLL FOR NEXT