ಆರೋಗ್ಯ

ವಾಯುಮಾಲಿನ್ಯದ ದುಷ್ಪರಿಣಾಮ ಏಡ್ಸ್ ಗಿಂತಲೂ ಭೀಕರ: ಅಧ್ಯಯನ

Sumana Upadhyaya

ವಾಷಿಂಗ್ಟನ್: ವಾಯು ಮಾಲಿನ್ಯ ವಿಚಾರದಲ್ಲಿ ಜಾಗತಿಕ ಮಾರ್ಗಸೂಚಿಯನ್ನು ಅನುಸರಿಸಿದರೆ ಭಾರತ ದೇಶದ ಜನರು ಸರಾಸರಿ 4 ವರ್ಷ ಅಧಿಕ ಜೀವಿಸಬಹುದು ಎಂದು ಅಧ್ಯಯನವೊಂದು ಹೇಳಿದೆ. ಹೆಚ್ ಐವಿ/ ಏಡ್ಸ್, ಸಿಗರೇಟು ಸೇವನೆ, ಭಯೋತ್ಪಾದನೆಗಿಂತಲೂ ಮಾಲಿನ್ಯದ ಪರಿಣಾಮ ಜೀವಿತಾವಧಿ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ವಾಯುಮಾಲಿನ್ಯ ಮಟ್ಟ ಜೀವ ಸೂಚ್ಯಂಕ(ಎಕ್ಯುಎಲ್ಐ) ಪ್ರಕಾರ ವಾಯು ಮಾಲಿನ್ಯದಿಂದ ಜಾಗತಿಕ ಸರಾಸರಿ ಜೀವಿತಾವಧಿ 1.8 ವರ್ಷದಷ್ಟು ಪ್ರತಿ ವ್ಯಕ್ತಿಗೆ ಕಡಿಮೆಯಾಗುತ್ತದೆ.
ನಿಗದಿತ ಮಾಲಿನ್ಯಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಇದು ಹೆಚ್ ಐವಿ, ಏಡ್ಸ್, ಸಿಗರೇಟು ಸೇವನೆ, ಯುದ್ಧಗಳಿಂದ ಆಗುವ ಮಾಲಿನ್ಯಗಳಿಗಿಂತಲೂ ಭೀಕರವಾದದ್ದು ಎಂದು ಅಧ್ಯಯನದಿಂದ ಸಾಬೀತುಪಡಿಸಿದೆ.

ಇಂದು ವಿಶ್ವಾದ್ಯಂತ ಜನರು ಮಲಿನ ಗಾಳಿಯನ್ನೇ ಸೇವಿಸುತ್ತಿದ್ದಾರೆ. ವಾಯುಮಾಲಿನ್ಯ ವಿವಿಧ ಬಣ್ಣಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿದ್ದು ಅದು ಇನ್ನಷ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆಯ ಪ್ರೊಫೆಸರ್ ಮಿಚಲ್ ಗ್ರೀಸ್ಟೋನ್ ಹೇಳುತ್ತಾರೆ.

ನಾನು ಮತ್ತು ನನ್ನ ಸಹೋದ್ಯೋಗಿಗಳು ಎಕ್ಯುಎಲ್ಐಯನ್ನು ಅಭಿವೃದ್ಧಿಪಡಿಸಿದ್ದು ಅದರಲ್ಲಿ ಎಲ್ ಎಂದರೆ ಲೈಫ್ ಜೀವನ ಎಂದರ್ಥ. ಮನುಷ್ಯನ ಜೀವಿತಾವಧಿ ಮೇಲೆ ಅವಲಂಬಿತವಾಗಿದೆ.

ವಿಶ್ವ ಆರೋಗ್ಯ ಸಂಘಟನೆಯ ಮಾರ್ಗಸೂಚಿಯ ಪ್ರಕಾರ ವಿಶ್ವದ ಶೇಕಡಾ 75ರಷ್ಟು ಮಂದಿ ಅಂದರೆ 5.5 ಬಿಲಿಯನ್ ಜನರು ನಿಗದಿತ ಪ್ರಮಾಣಕ್ಕಿಂತ ಮೀರಿದ ಮಾಲಿನ್ಯ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿಶ್ವದ ಜನಸಂಖ್ಯೆಯಲ್ಲಿ ಶೇಕಡಾ 36 ಭಾಗವನ್ನು ಹೊಂದಿರುವ ಭಾರತ ಮತ್ತು ಚೀನಾದಲ್ಲಿ ಇದುವರೆಗೆ ಶೇಕಡಾ 73ರಷ್ಟು ಜನರು ಮಲಿನಕಾರಕ ರೋಗಗಳಿಂದ ಮೃತಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಘಟನೆಯ ಮಾರ್ಗಸೂಚಿ ಪಾಲಿಸಿದರೆ ಭಾರತೀಯರು ಸರಾಸರಿ 4 ವರ್ಷಕ್ಕಿಂತ ಅಧಿಕ ಬದುಕಬಹುದು. ಸಾಮಾನ್ಯವಾಗಿ ಮನುಷ್ಯನ ಜೀವಿತಾವಧಿ 69ರಿಂದ 73 ವರ್ಷಗಳಾಗಿದೆ.

SCROLL FOR NEXT