ಆರೋಗ್ಯ

ಎದೆ ಹಾಲು ಶಿಶುಗಳಿಗೆ ದಿನದ ಸಮಯವನ್ನು ಹೇಳಬಹುದೆಂದು ನಿಮಗೆ ತಿಳಿದಿದೆಯೇ?

Shilpa D

2022ರ ವರೆಗೂ ಪ್ರತಿ ತಿಂಗಳ ಮೊದಲ ವಾರವನ್ನು ಸ್ತನಪಾನ ವಾರ ಎಂದು ಘೋಷಿಸಬೇಕೆಂದು  ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದರು, ಭಾರತದಲ್ಲಿ ಇತ್ತೀಚೆಗೆ ಎದೆ ಹಾಲುಣಿಸುವುದರ ಮಹತ್ವ ಹೆಚ್ಚುತ್ತಿದೆ.

ದೇಶದ ಮುಂದಿನ ಪ್ರಜೆಗಳನ್ನು ಖಾಯಿಲೆಯಿಂದ ಮುಕ್ತರನ್ನಾಗಿಸಲು ಸ್ತನಪಾನ ಮಾಡಿಸಬೇಕೆಂದು ಸಚಿವರು ಅಭಿಪ್ರಾಯ ಪಟ್ಟಿದ್ದರು. ಕಾಯಿಲೆಗಳ ಸಂಖ್ಯೆ ಹೆಚ್ಚಿದರೇ ದೇಶದ ಆರ್ಥಿಕ ವ್ಯವಸ್ಥೆಗೆ ಹೊರೆಯಾಗುತ್ತದೆ ಎಂಬುದು ಸಚಿವರ ಅಭಿಪ್ರಾಯ.

ತಾಯಿ ಎದೆ ಹಾಲು ಕುಡಿಯುವುದರಿಂದ ಮಗುವಿಗೆ ಹಾಗೂ ತಾಯಿಗೆ ಇಬ್ಬರಿಗೂ ಅನೇಕ ಪ್ರಯೋಜನಗಳಾಗುತ್ತವೆ, ದೇಹ ಸಂಪರ್ಕ, ತಾಯಿ ಹಾಗೂ ಮಗುವಿನ ಚರ್ಮ ಸ್ಪರ್ಶದಿಂದಾಗಿ ತಾಯಿ ಮತ್ತು ಮಗುವಿನ ಬಾಂಧ್ಯ ಬೆಳೆಯುತ್ತದೆ,. ಹಾಗೆಯೇ ಮಗುವಿಗೆ ಒಂದು ಸುರಕ್ಷತಾ ಭಾವನೆ ಮೂಡುತ್ತದೆ. 

ತಾಯಿಯ ಎದೆ ಹಾಲಿನ ವಾಸನೆ, ಹಾಗೂ ತಾಯಿಯ ಹೃದಯ ಬಡಿತ ಕೇಳಿಸಿಕೊಳ್ಳುವುದರಿಂದ ಮಗುವಿನ ಶ್ರವಣ ಶಕ್ತಿ ಉತ್ತಮಗೊಳ್ಳುತ್ತದೆ. ಮಗುವಿಗೆ ಎದೆ ಹಾಲುಣಿಸುವುದರಿಂದ ತಾಯಿಯಾದವಳಿಗೆ ಪ್ರಸವದ ನಂತರ ಖಿನ್ನತೆ ದೂರಾಗುತ್ತದೆ.

ಎದೆ ಹಾಲುಣಿಸುವುದರಿಂದ ಅನೇಕ  ಲಾಭಗಳು ಇವೆ, ಹೊಸದಾಗಿ ತಾಯಿಯಾದವರಿಗೆ ಇದರ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ, ಏಕೆಂದರೇ ಪ್ರಸವದ ನಂತರ ಅವರ ವರ್ತನೆಯಲ್ಲಿ ಹಾಗೂ ಬದಲಾವಣೆಯಾಗಿ ಸೂಕ್ಷ್ಮ ಮತಿಗಳಾಗುತ್ತಾರೆ.

ತಾಯಿಯ ಎದೆ ಹಾಲುಣಿಸುವುದರಿಂದ ಮಕ್ಕಳಲ್ಲಿ ಡಯೇರಿಯಾ ಮತ್ತು ನ್ಯೂಮೋನಿಯಾದಂತ ಕಾಯಿಲೆಗಳು ದೂರಾಗುತ್ತವೆ, ಎದೆ ಹಾಲು ಕುಡಿಯುವುದರಿಂದ ಪೌಷ್ಠಿಕಾಂಶ ಸಿಗುತ್ತದೆ, ಎದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ಸಂನಹನ ಸಾದ್ಯವಾಗುತ್ತದೆ.

ಹಾಲಿನಲ್ಲಿರುವ ಪೌಷ್ಠಿಕಾಂಶ, ಹಾರ್ಮೋನುಗಳಿಂದ ರೋಗನಿರೋಧಕ  ಶಕ್ತಿ ಹೆಚ್ಚುತ್ತದೆ.ಎದೆ ಹಾಲು ಶಿಶುಗಳಿಗೆ ದಿನದ ಸಮಯವನ್ನು ತಿಳಿಸುತ್ತದೆ.ಮಕ್ಕಳು ಪೂರ್ಣ ಪ್ರಮಾಣದ ಕಾರ್ಡಿಯಾಕ್ ಕ್ಲಾಕ್ ಜೊತೆ ಜನಿಸಿರುವುದಿಲ್ಲ, ಎದೆ ಹಾಲುಣಿಸುವುದರಿಂದ ಹೃದಯ ಬಡಿತ ಸರಿಯಾಗಿ ಆಗುವುದಕ್ಕೆ ಸಹಾಯವಾಗುತ್ತದೆ.

ಹಗಲು ಮತ್ತು ರಾತ್ರಿಯ  ಹಲವು ಸಮಯಗಳಲ್ಲಿ ಮಗುವಿಗೆ ಹಾಲು ಕುಡಿಸುವುದರಿಂದ, ರಾತ್ರಿಗಿಂತ ಬೆಳಗ್ಗಿನ ಸಮಯದಲ್ಲಿ ಮೆಲಟೋನಿನ್ ಮಟ್ಟವು ಹೆಚ್ಚಾಗುತ್ತದೆ , ಹಗಲಿನಲ್ಲಿ ಕೋರ್ಟಿಸಾಲ್ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿದ್ದು, ಮಗು ಜಾಗೃತೆಯಿಂದರಲೂ ಸಹಾಯವಾಗುತ್ತದೆ. ಮೆಲಾಟನಿನ್  ಪ್ರಮಾಣ ಸಂಜೆಯ ಸಮಯದಲ್ಲಿ ಹೆಚ್ಚುವುದರಿಂದ ಮಗುವಿಗೆ ಜೀರ್ಣಶಕ್ತಿ ವೃದ್ಧಿಸಿ ನಿದ್ದೆ ಬರಿಸುತ್ತದೆ,

ಬಾಟಲ್ ಗಳಲ್ಲಿ ಹಾಲು ಕುಡಿಯುವ ಮಕ್ಕಳಿಗಿಂತ ಎದೆ ಹಾಲು ಕುಡಿಯುವ ಮಕ್ಕಳಲ್ಲಿ ನಿದ್ರೆಯ ಪ್ರಮಾಣ ಹೆಚ್ಚಿರುತ್ತದೆ. ಎದೆ ಹಾಲಿನ ಮೂಲಕ ಮಗುವಿಗೆ ಕ್ರೋನೋ ಸಿಗ್ನಲ್ ತಲುಪುತ್ತದೆ.ಎದೆ ಹಾಲಿನಿಂದಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. 

SCROLL FOR NEXT