ಆರೋಗ್ಯ

'ಬೊಜ್ಜಿನ ಸಮಸ್ಯೆ'ನಿಯಂತ್ರಣ ಹೇಗೆ? ಇಲ್ಲಿದೆ ಪರಿಹಾರ

Nagaraja AB

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಅತಿಯಾದ ತೂಕವು ಅಧಿಕಾವಧಿ ಕೆಲಸ ಮಾಡುವಂತೆ ದೇಹದ ಅಂಗಗಳ ಮೇಲೆ ಒತ್ತಡವನ್ನುಂಟುಮಾಡುತ್ತದೆ.ದಣಿದಂತೆ ಮಾಡುವುದಲ್ಲದೆ, ಉಸಿರಾಟ, ಕೀಲು ನೋವು, ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. 

ಡಯಾಬಿಟಿಸ್, ಪಾರ್ಶ್ವವಾಯು, ನಿದ್ರಾ ಹೀನತೆ, ಬಂಜೆತನ  ಮತ್ತಿತರ ಧೀರ್ಘಾವಧಿಯ ಅಪಾಯಕಾರಿಯಾದಂತಹ ಸಮಸ್ಯೆಗಳಿಗೂ ಬೊಚ್ಚು ಕಾರಣವಾಗುತ್ತಿದೆ.ಸ್ಥೂಲಕಾಯತೆಯು ವ್ಯಕ್ತಿಯ ಮುಕ್ತ ಮತ್ತು ಸಂಚಾರದ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಹತ್ತಿರದ ಅಂಗಡಿಗೆ ಹೋಗುವುದಕ್ಕೆ ಅಥವಾ ಮೆಟ್ಟಿಲು ಹತ್ತಲು ಸಹ ಕಷ್ಟ ಅನುಭವಿಸಬೇಕಾಗುತ್ತದೆ.

ವಿಶ್ವದಾದ್ಯಂತ ಬದಲಾಗುತ್ತಿರುವ ಸಾಮಾಜಿಕ - ಸಾಂಸ್ಕೃತಿಕ ಹಾಗೂ ಜೀವನಶೈಲಿ ವ್ಯಕ್ತಿಯು ಆರೋಗ್ಯಕರ ತೂಕವನ್ನು ನಿರ್ವಹಣೆ ಮಾಡುವಲ್ಲಿ ತೊಡಕಾಗಿ ಪರಿಣಮಿಸಿದೆ.ಇದರಿಂದಾಗಿ ಬೊಜ್ಜಿನ ಸಮಸ್ಯೆ ನಿವಾರಣೆಗೆ ವೈದ್ಯರು, ಕುಟುಂಬ,ಸಮಾಜದೊಂದಿಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ವಿಶ್ವ ಬೊಜ್ಜು ದಿನದ ಅಂಗವಾಗಿ ಅತಿಯಾದ ತೊಕವನ್ನು ನಿಯಂತ್ರಿಸುವುದೇ ಹೇಗೆ ಎಂಬ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ನೀಡಲಾಗಿದೆ. 

* ಕುಟುಂಬದಲ್ಲಿ ಆರೋಗ್ಯಕರ ಆಹಾರ ಸೇವನೆಗೆ ಪ್ರೋತ್ಸಾಹ:  ಮಕ್ಕಳಿಗೆ ಜಂಕ್ ಪುಡ್  ನೀಡುವುದನ್ನು ತಪ್ಪಿಸಬೇಕು.ಉಪ್ಪಿನಕಾಯಿ ಅಥವಾ ಸಕ್ಕರೆ, ಕರಿದ ಮತ್ತು ಎಣೆಯುಕ್ತ ಆಹಾರಗಳು ಸುಲಭವಾಗಿ ಸಿಗುವುದರಿಂದ ಹಸಿವಿನ ಸಂದರ್ಭಗಳಲ್ಲಿ ಅವುಗಳ ಕಡೆಗೆ ಮನಸ್ಸು ಹೋಗದಂತೆ ತಡೆಗಟ್ಟಬೇಕಾಗಿದೆ. ಮಕ್ಕಳಲ್ಲಿ ಉತ್ತಮ ಆರೋಗ್ಯ ಸೇವನೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. 

* ರಕ್ತದಲ್ಲಿನ ಸಕ್ಕರೆ ಪ್ರಮಾಣ ತಪಾಸಣೆ:  ಆಗಾಗ್ಗೆ ತಪಾಸಣೆ ಮಾಡಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿನ ಪೌಷ್ಠಿಕಾಂಶದ ಬಗ್ಗೆ ನಿರಂತರವಾಗಿ ತಪಾಸಣೆ ಮಾಡಿಸಬೇಕಾಗುತ್ತದೆ. 

* ಆಹಾರ ಡೈರಿ ನಿರ್ವಹಣೆ: ಸಮತೋಲಿನ ಆಹಾರ ಆಯ್ಕೆಗೆ ಸಂಬಂಧಿಸಿದಂತೆ ಡೈರಿಯೊಂದನ್ನು ನಿರ್ವಹಣೆ ಮಾಡುವುದು ಉತ್ತಮವಾಗಿದೆ. 

* ನಿಯಮಿತ ವ್ಯಾಯಾಮ: ಜುಂಬಾ, ಜಲಕ್ರೀಡೆ, ಸಾಹಸ ಕ್ರೀಡೆ, ಟ್ರೆಕ್ಕಿಂಗ್ ನಿಂದ ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಕೂಡಿರಲು ನೆರವಾಗಲಿದೆ. ಆ ಮೇಲಿನ ಎಲ್ಲಾ ಅಂಶಗಳಿಂದ ಸಾಮಾಜಿಕ- ಮಾನಸಿಕವಾಗಿ ಆರೋಗ್ಯ ವೃದ್ಧಿಗೆ ನೆರವಾಗಲಿದೆ. 

* ಬೇರಿಯಾಟ್ರಿಕ್  ಸಮಾಲೋಚನೆ:  ಅನೇಕ ಪ್ರಕರಣಗಳಲ್ಲಿ  ತೂಕವನ್ನು ಕಡಿಮೆಗೊಳಿಸಲು ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. 2ನೇ ವಿಧದ ಡಯಾಬಿಟಿಸ್ ನಿಯಂತ್ರಿಸಲು  ಬಾರಿಯಾಟ್ರಿಕ್ ವಿಧಾನವು ಸಹಾಯ ಮಾಡುತ್ತದೆ ಎಂದು ಅನೇಕ ಜನರು ನಂಬಿದ್ದಾರೆ. 

ನಗರ ಜೀವನ ಶೈಲಿಯೂ ಬೊಚ್ಚಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಕಂಡುಬರುತ್ತಿದೆ. ಇದು ಹೆಚ್ಚಾಗದಂತೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು, ಸರಿಯಾದ ಮಾರ್ಗದರ್ಶನ, ಸಲಹೆಗಳಿಂದ ಈ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬಹುದು ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. 

SCROLL FOR NEXT