ಸಂಗ್ರಹ ಚಿತ್ರ 
ಆರೋಗ್ಯ

ಮಕ್ಕಳಲ್ಲಿ ಕಣ್ಣಿನ ಪೊರೆ ಸಮಸ್ಯೆ: ಪಾಲಕರು ಪಾಲಿಸಬೇಕಾದ ನಿಯಮಗಳು

ಆಗಷ್ಟೇ ಹುಟ್ಟಿದ ಮಕ್ಕಳನ್ನು ಪಾಲಿಸುವ, ಪೋಷಿಸುವ ಪರಿ ಅದು ಬಹಳವೇ ಸುಂದರವಾಗಿರುವುದ್. ಹಾಗೆಯೇ ಅತ್ಯಂತ ಮಹತ್ವದ್ದೂ ಆಗಿರುತ್ತದೆ ಏಕೆಂದರೆ ಮಗುವಿಗೆ ಅವನು / ಅವಳು ಏನನ್ನು ಅನುಭವಿಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಲು ಬರುವುದಿಲ್ಲ. 

ಆಗಷ್ಟೇ ಹುಟ್ಟಿದ ಮಕ್ಕಳನ್ನು ಪಾಲಿಸುವ, ಪೋಷಿಸುವ ಪರಿ ಅದು ಬಹಳವೇ ಸುಂದರವಾಗಿರುವುದ್. ಹಾಗೆಯೇ ಅತ್ಯಂತ ಮಹತ್ವದ್ದೂ ಆಗಿರುತ್ತದೆ ಏಕೆಂದರೆ ಮಗುವಿಗೆ ಅವನು / ಅವಳು ಏನನ್ನು ಅನುಭವಿಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಲು ಬರುವುದಿಲ್ಲ. ಅಲ್ಲದೆ ಅದರ ಒಳಿತು, ಕೆಡುಕಿನ್ ಅವಿಚಾರವೂ ಅವರಿಗೆ ಅರಿವಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ದೈಹಿಕ ಅಸ್ವಸ್ಥತೆ ವಿಚಾರದಲ್ಲಿ ಇದು ಹೆಚ್ಚು ಗಮನಾರ್ಹವಾಗಿರುತ್ತದೆ. ಮಗುವಿಗೆ ದೃಷ್ಟಿಯ ಸಮಸ್ಯೆಗಳಿದ್ದರೆ ಎಂದರೆ ಶಿಶುವಿಗೆ ಕಣ್ಣಿನ ಪೊರೆಯಂತಹಾ ಸಮಸ್ಯೆಗಳಿದ್ದರೆ ಅದನ್ನು ನಿಭಾಯಿಸುವುದು ಅತ್ಯಂತ ಕಠಿಣವಾಗುತ್ತದೆ ಎಂದು ಪರಿಣಿತ ವೈದ್ಯರಾದ ಡಾ. ವಿದ್ಯಾ ಸಿ ಹೇಳಿದ್ದಾರೆ.

ಕಣ್ಣಿನ ಪೊರೆ ಸಮಸ್ಯೆ ವಯಸ್ಕರಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ ಎಂದು ತಿಳಿದಿದ್ದರೆ ಅದು ತಪ್ಪು, ಚಿಕ್ಕ ಮಕ್ಕಳಲ್ಲಿ ಸಹ ಪೊರೆ ಸಮಸ್ಯೆ ಕಾಡುವುದು ಸಾಧ್ಯವಿದೆ.ಕಣ್ಣಿನ ಪೊರೆ ಮೂಲತಃಅ ಕಣ್ಣಿನ ಮಸೂರವನ್ನು ಮಸುಕಾಗಿಸುವ ಸಮಸ್ಯೆಯಾಗಿದೆ. ಅದು ಹೆಚ್ಚಾಗಿದ್ದರೆ ಕಣ್ಣಿನ ದೃಷ್ಟಿ ಮಾಂದ್ಯತೆಗೆ ಕಾರಣವಾಗಬಹುದು ಅಥವಾ ಸಂಪೂರ್ಣ ದೃಷ್ಟಿಯೇ ಇಲ್ಲದಂತಾಗಬಹುದು.ಕಣ್ಣಿನ ಪೊರೆ ಮಗುವಿನ ಒಂದು ಕಣ್ಣಿನಲ್ಲಿ ಅಥವಾ ಎರಡರಲ್ಲೂ ಇರಬಹುದು. ನಿಮ್ಮ ಮಗುವಿಗೆ ಕಣ್ಣಿನ ಪೊರೆ ಇದೆಯೇ ಎನ್ನುವುದು ಗುರುತಿಸುವಿಕೆ ಸ್ವಲ್ಪ ಕಠಿಣವಾಗಿರುತ್ತದೆ. ಪೊರೆಯನ್ನು ಸ್ಪಷ್ಟ ಗೋಚರವಾಗಿ ಗುರುತಿಸುವುದು ಕಠಿಣ. ಆದರೆ ಪೊರೆ ಇದ್ದ ವೇಳೆ ಅದು ಬಿಳಿ ಅಥವಾ ಬೂದು ಬಣ್ಣದ ಚುಕ್ಕೆಯಂತೆ ಕಾಣಿಸಿಕೊಳ್ಳುತ್ತವೆ.

ಚಿಕ್ಕ ಮಕ್ಕಳಿಗೆ ನಿಯಮಿತ ದೃಷ್ಟಿ ತಪಾಸಣೆ: ಮಗುವಿನ ನಿಯಮಿತ ದೃಷ್ಟಿ ತಪಾಸಣೆ ಅಗತ್ಯ. ನವಜಾತ ಶಿಶುವಿದ್ದಾಗಿನಿಂದ ಆರಂಭಿಕ ದೃಷ್ಟಿ ತಪಾಸಣೆ ಪ್ರಾರಂಭವಾಗುತ್ತದೆ ಶೈಶವಾವಸ್ಥೆ ಮತ್ತು ಬಾಲ್ಯದಲ್ಲಿ  ನಿಯಮಿತ ಪರೀಕ್ಷೆಗಳನ್ನು ಮುಂದುವರಿಸಲಾಗಿ ಇಂತಹಾ ಸಮಸ್ಯೆಗಳ ಗುರುತಿಸುವುದು ಸುಲಭವಾಗುತ್ತದೆ. ಗಮನಿಸಬೇಕಾದ ಒಂದು ಅಂಶವೆಂದರೆ , ಸಾಮಾನ್ಯವಾಗಿ ಮಗುವಿಗೆ ಮೂರು ತಿಂಗಳಾಗುವ ಹೊತ್ತಿಗೆ, ಅವನು / ಅವಳು ಕೋಣೆಯ ಸುತ್ತಲೂ ನೋಡಲು ಮತ್ತು ಕಣ್ಣುಗಳಿಂದ ವಿಷಯಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಒಂದೊಮ್ಮೆ ಹಾಗೆ ಆಗದೆ ಹೋದಲ್ಲಿ ಮಕ್ಕಳ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕಾಗುವುದು. ಮಗುವಿನ ಕಣ್ಣುಗಳಲ್ಲಿ ದೋಷಗಳಿದೆಯೆ ಎನ್ನುವ್ದನ್ನು ಪೋಷಕರು ಪರಿಶೀಲಿಸಲು ಇದು ಸುಲಭ ಉಪಾಯಆಗಿದೆ.

ಚಿಕಿತ್ಸೆ

ಕಣ್ಣಿನ ಪೊರೆಗಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಒಂದೇ ಮಾರ್ಗವಾಗಿದೆ. ಆದರೂ  ಕಣ್ಣಿನ ಪೊರೆ ಚಿಕ್ಕದಾಗಿದ್ದರೆ ಮತ್ತು ಮಗುವಿನ ದೃಷ್ಟಿಗೆ ತೊಂದರೆ ಮಾಡದಿದ್ದಲ್ಲಿ ಅದನ್ನು ತೆಗೆದು ಹಾಕುವ ಅಗತ್ಯವಿಲ್ಲ.  ಆದರೆ ಇದು ದೃಷ್ಟಿದೋಷಕ್ಕೆ ಕಾರಣವಾಗಿದ್ದರೆ , ಅದನ್ನು ಬೇಗನೆ ತೆಗೆದುಹಾಕಬೇಕು, ಇಲ್ಲದಿದ್ದರೆ ದೀರ್ಘಾವಧಿಯಲ್ಲಿ ಅದು ಇನ್ನಷ್ಟು ದೊಡ್ಡ ಸಮಸ್ಯೆಯಾಗಲಿದೆ.ಸಾಮಾನ್ಯವಾಗಿ ಪೊರೆ ತೆಗೆದುಹಾಕಲು  ಆರು ವಾರಗಳಿಂದ ಮೂರು ತಿಂಗಳವರೆಗೆ ಚಿಕಿತ್ಸೆ ಪಡೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ

ಕುರುಡುತನವನ್ನು ತಡೆಯಲು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಆದಷ್ಟು ಬೇಗ ನಡೆಸಬೇಕು. ಸಮಯೋಚಿತವಾಗಿ ಕಾಳಜಿ ವಹಿಸದಿದ್ದರೆ, ಜನ್ಮಜಾತ ಕಣ್ಣಿನ ಪೊರೆಗಳು ಆಂಬ್ಲಿಯೋಪಿಯಾಕ್ಕೆ  ಕಾರಣವಾಗುತ್ತವೆ, ಇದು ವಸ್ತುಗಳನ್ನು ಕಣ್ಣಿಂದ ನೋಡಲು ಆಗದಂತೆ ಮಾಡಬಹುದು.  ಈ ಸಮಸ್ಯೆಗಳು ವ್ಯಕ್ತಿತ್ವ, ಕಲಿಕೆಯ ಸಾಮರ್ಥ್ಯ ಮತ್ತು ವ್ಯಕ್ತಿಯ ಒಟ್ತಾರೆ ಬೆಳವಣಿಗೆ ಮೇಲೆ  ಪರಿಣಾಮ ಬೀರುತ್ತವೆ. ಶಸ್ತ್ರಚಿಕಿತ್ಸೆಯ ನಂತರವೂ ನಿಯಮಿತವಾಗಿ ಕಣ್ಣಿನ ತಪಾಸಣೆಯನ್ನು ವೈದ್ಯರಿಂದ ಮಾಡಿಸಿಕೊಳ್ಳುವುದು ಅಗತ್ಯ. 

ಕಣ್ಣಿನ ಪೊರೆ ಬೆಳವಣಿಗೆಗೆ ಹಲವು ಕಾರಣಗಳು

ಮಗು ಜನಿಸುವಾಗಲೇ ಕಣ್ಣಿನ ಪೊರೆಯೊಂದಿಗೆ ಜನಿಸುವ ಸಾಧ್ಯತೆ ಇದೆ, ಇದನ್ನು ವೈದ್ಯರು ‘ಜನ್ಮಜಾತ’ ಎಂದು ಕರೆಯುತ್ತಾರೆ, ಅಂದರೆ ಗರ್ಭಾವಸ್ಥೆಯಲ್ಲಿ ಮಸೂರ ಸರಿಯಾಗಿ ರೂಪುಗೊಂಡಿರದೆ  ಜನ್ಮಜಾತ ಕಣ್ಣಿನ ಪೊರೆಗಳು ಶಿಶುವಿನ ಕಣ್ಣಿನ ಮಸೂರದಲ್ಲಿ ದಟ್ಟವಾಗಿ ಬಿಳಿ ಬಣ್ನವನ್ನು ಹೊಂದಿರುವ ಸಾಧ್ಯತೆ ಇದೆ. ಇದನ್ನು ಸಮಯಕ್ಕೆ ಸರಿಯಾಗಿ ತೆಗೆಸದಿದ್ದರೆ ದೃಷ್ಟಿಹೀನತೆ ಸಂಭವಿಸುವ ಸಾಧ್ಯತೆ ಇದೆ. ರ್ಭಾವಸ್ಥೆಯಲ್ಲಿ ತಾಯಿಗೆ ದಡಾರ ಅಥವಾ ರುಬೆಲ್ಲಾಚಿಕನ್ ಪೋಕ್ಸ್, ಸೈಟೊಮೆಗಾಲೊವೈರಸ್, ಹರ್ಪಿಸ್ ಸಿಂಪ್ಲೆಕ್ಸ್, ಹರ್ಪಿಸ್ ಜೋಸ್ಟರ್, ಪೋಲಿಯೊಮೈಲಿಟಿಸ್,  ಇನ್ನೂ ಬೇರೆ ನಮೂನೆಯ ಸೋಂಕುಗಳು ಬಂದಾಗ ಸಹ ಜನ್ಮಜಾತ ಕಣ್ಣಿನ ಪೊರೆ ಬರುವ ಸಾಧ್ಯತೆ ಉಂಟು ಡೌನ್ ಸಿಂಡ್ರೋಮ್ ನಂತಹಾ ವರ್ಣತಂತು ಸಮಸ್ಯೆಯಿಂದ ಜನ್ಮಜಾತ ಕಣ್ಣಿನ ಪೊರೆ ಕೂಡ ಉಂಟಾಗುತ್ತದೆ.

ಕಣ್ಣಿನ ಪೊರೆ ಸಮಸ್ಯೆ ಅನುವಂಶಿಕವಾಗಿರುವ ಸಾಧ್ಯತೆಯೂ ಇದೆ. ಅಂದರೆ ಮಗು ಆತನ/ಆಕೆಯ ತಂದೆ-ತಾಯಿಗಳಿಂದ ಅದನ್ನು ಪಡೆದಿರಬಹುದು. 

ಮಗು ಹುಟ್ಟಿದ ಕೆಲ ಸಮಯದ ಬಳಿಕ ಸಹ ಕಣ್ಣಿನ ಪೊರೆ ಬೆಳೆಯುವ ಸಾಧ್ಯತೆಗಳೂ ಇದೆ.

ಕಣ್ಣಿನ ಗಾಯ, ಕಣ್ಣಿನ ಸಮಸ್ಯೆಗಳಿಂದ ಉಂಟಾಗುವ ತೊಂದರೆಗಳು, ವಿಕಿರಣ ಆಘಾತ,  ಸ್ಟೀರಾಯ್ಡ್ ಸೇವನೆ, ಮಧುಮೇಹಿಗಳಂತಹ ಚಯಾಪಚಯ ರೋಗಗಳು ಇದೇ ಮೊದಲಾದ ಕಾರಣಗಳಿಗೆ, ಮಕ್ಕಳಿಗೆ  ಕಣ್ಣಿನ ಪೊರೆ ಬರಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT