ಸಾಂದರ್ಭಿಕ ಚಿತ್ರ 
ಆರೋಗ್ಯ

ಬಂಜೆತನ ಸಮಯದಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ!

ಬಂಜೆತನವು ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸ್ಥಿತಿಯ ಪರಿಣಾಮಗಳು ದೈಹಿಕತೆಯನ್ನು ಮೀರಿವೆ.ಬಂಜೆತನವು ಮಹಿಳೆಯರು ಮತ್ತು ಪುರುಷರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿವೆ.

ಬೆಂಗಳೂರು:ಬಂಜೆತನವು ವಿಶ್ವದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸ್ಥಿತಿಯ ಪರಿಣಾಮಗಳು ದೈಹಿಕತೆಯನ್ನು ಮೀರಿವೆ.ಬಂಜೆತನವು ಮಹಿಳೆಯರು ಮತ್ತು ಪುರುಷರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿವೆ.

ಸಂತಾನೋತ್ಪತ್ತಿ ವ್ಯವಸ್ಥೆಯು ಜೀವನದ ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಲೈಂಗಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಪುರುಷರು ಮತ್ತು ಮಹಿಳೆಯರು ಬಂಜೆತನದ ಚಿಕಿತ್ಸೆಯ ಸಮಯದಲ್ಲಿ ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ.

ಪ್ರತಿ ತಿಂಗಳು  ಕಳೆದಂತೆ, ಜೀವನಶೈಲಿ ಮಾರ್ಪಾಡುಗಳು, ವೈಯಕ್ತಿಕ ಮತ್ತು ಧಾರ್ಮಿಕ ಮತ್ತು ಕುಟುಂಬ ಹಸ್ತಕ್ಷೇಪದ ಬಗ್ಗೆಗಿನ ಮಾಹಿತಿಯ ಕೊರತೆಯು ಕೋಪ, ದುಃಖ, ಭರವಸೆ ಮತ್ತು ಅಪರಾಧದಂತಹ ಭಾವನೆಗಳು ಇಬ್ಬರಲ್ಲಿಯೂ ಬರಲು ಕಾರಣವಾಗುತ್ತಿದೆ.ಇಂತಹ ಸಂದರ್ಭದಲ್ಲಿ ದಂಪತಿಗಳು ಚಿಕಿತ್ಸೆ ಪಡೆಯಬೇಕಾಗುತ್ತದೆ.

ಇದು ವೈದ್ಯಕೀಯ ಸಮಸ್ಯೆಯಾಗಿದ್ದರೂ, ಬಂಜೆತನವು ಅವಮಾನ ಮತ್ತು ಗೌಪ್ಯತೆಗೆ ಸಂಬಂಧಿಸಿದೆ.ಇದಕ್ಕೆ  ಸ್ನೇಹಿತರು ಮತ್ತು ಕುಟುಂಬದಿಂದ ಸಹಾಯ ಕೇಳಲು ಕಷ್ಟವಾಗುತ್ತದೆ. ಬಂಜೆತನದಿಂದ  ಇತರರ ಪ್ರೀತಿ ಮತ್ತು ಬೆಂಬಲವಿಲ್ಲದೆ ಹತಾಶೆ ಮತ್ತು ನಿರಾಶೆಗೆ ಕಾರಣವಾಗುತ್ತದೆ.

ಬಂಜೆತನಕ್ಕೆ ಚಿಕಿತ್ಸೆ ಬಯಸುವವರು ಮನೋವೈದ್ಯ ಅಥವಾ  ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಲು ಪ್ರೇರೇಪಿಸುವ ಕೆಲವು ಲಕ್ಷಣಗಳು ಇಲ್ಲಿವೆ:

* ಹಿಂದೆ ಅನುಭವಿಸಿದ ಚಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ 
* ದಿನವಿಡೀ ಖಿನ್ನತೆಗೆ ಒಳಗಾಗುವುದು
*  ಅತಿ ಕಡಿಮೆ ಅಥವಾ ಅತಿ ಹೆಚ್ಚು ನಿದ್ರೆ ಮಾಡುವುದು
* ಆರೋಗ್ಯ ಪರಿಸ್ಥಿತಿ ಅಥವಾ ಆಹಾರ ಪಥ್ಯದಿಂದ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು
* ಏಕಾಗ್ರತೆ ಅಥವಾ ಸ್ಪಷ್ಟ ಯೋಚನೆ ಮಾಡುವುದರಲ್ಲಿ ತೊಂದರೆ 
* ಆಗಾಗ್ಗೆ ಆತ್ಮಹತ್ಯೆ ಅಥವಾ ಸಾವಿನ ಬಗ್ಗೆ ಯೋಚನೆ
* ನಾಚಿಕೆ, ತಪ್ಪಿತಸ್ಥ ಮತ್ತು ನಿಷ್ಪ್ರಯೋಜಕ ಭಾವನೆ
 
ಚಿಕಿತ್ಸೆ: ಇಂತಹ ಲಕ್ಷಣಗಳಿಂದ ಯಾತನೆ ಅನುಭವಿಸುತ್ತಿರುವವರು ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಅಗತ್ಯ ಚಿಕಿತೆ ಪಡೆದುಕೊಳ್ಳಬೇಕಾಗುತ್ತದೆ. ಭಯ, ಖಿನ್ನತೆ ಮತ್ತಿತರ ಮಾನಸಿಕ ಆರೋಗ್ಯಕ್ಕೆ ಹಲವಾರು ಔಷಧಿಗಳು ಲಭ್ಯವಿದೆ.

ಆದಾಗ್ಯೂ, ಬಂಜೆತನ ಚಿಕಿತ್ಸೆಯಲ್ಲಿ ಮಧ್ಯಪ್ರವೇಶಿಸಬಹುದಾದ ಕಾರಣ ವಿವರಗಳನ್ನು ಹಂಚಿಕೊಳ್ಳಬೇಕಾಗಿದೆ.ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ  ಎಂಬುದನ್ನು ನೋಡಲು ಒಂದಕ್ಕಿಂತ ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ.

ಖಿನ್ನತೆ, ಆತಂಕ ಮತ್ತು ಮಾನಸಿಕ ಕಾಯಿಲೆಗಳಿಗೆ ಥೆರಪಿ ಮೂಲಕವೂ ಚಿಕಿತ್ಸೆ ಪಡೆಯಬಹುದಾಗಿದೆ. ಇಂತಹ ಚಿಕಿತ್ಸೆ ಸಂದರ್ಭದಲ್ಲಿ  ಬಂಜೆತನ ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಮತ್ತು ಮುಂದಿನ ಗುರಿ ಮತ್ತು ಕಾರ್ಯತಂತ್ರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಸಂಬಂಧ ವೃದ್ದಿಯಾಗುತ್ತದೆ. ಬಂಜೆತನವು ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಉಂಟುಮಾಡುವ ಅಪಾಯವೂ ಇದೆ. 

* ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಚಿಕಿತ್ಸೆ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಸೇವಿಸಬೇಕು
* ದಂಪತಿಗಳು ಹೊಸ ಹವ್ಯಾಸ ಅಥವಾ ಚಟುವಟಿಕೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಇದರಿಂದಾಗಿ ಅವರ ಜೀವನ ಸಮತೋಲನದಿಂದ ಕೂಡಿರಲು ಉತ್ತಮ ಅವಕಾಶವಾಗಲಿದೆ.
* ಇದೇ ರೀತಿಯ ಅನುಭವವನ್ನು ಅನುಭವಿಸುತ್ತಿರುವ ಅಥವಾ ಅನುಭವಿಸಿದ ಜನರೊಂದಿಗೆ ಗುಂಪು ಗೂಡುವುದರಿಂದಲೂ ಸಹಾಯವಾಗಲಿದೆ ಎಂದು ಬೆಂಗಳೂರಿನ ಅಪೊಲೊ ಸಿಎಂ ಪರ್ಟಿಲಿಟಿ ವಿಭಾಗದ ಮನೋಶಾಸ್ತ್ರರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT