ಆರೋಗ್ಯ

ಮಕ್ಕಳಿಗೆ ಕೊರೋನಾ ವೈರಸ್ ತಗುಲುವದಿಲ್ಲವೆ?: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದೇನು?

Lingaraj Badiger

ಚೆನ್ನೈ: ಸಾರ್ಸ್-ಸಿಒವಿ-2 ಮಾದರಿಯ ಕೊವಿಡ್-19(ಕೊರೋನಾ ವೈರಸ್) ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆ?

ಚೀನಾ ಸಂಶೋಧಕರಿಗೆ ಮಹಾಮಾರಿ ಕೊರೋನಾ ವೈರಸ್ ಹುಟ್ಟಿದ ವುಹಾನ್ ನಗರದಲ್ಲಿ ನವೆಂಬರ್ 2019ರಿಂದ ಜನವರಿ 2020ರ ವರೆಗೆ ಒಂದೇ ಒಂದು ಮಗುವಿಗೂ ಕೊರೋನಾ ವೈರಸ್ ತಗುಲಿಲ್ಲ. ಚೀನಾದಾದ್ಯಂತ ಒಟ್ಟು 1,099 ಕೋರನಾ ವೈರಸ್ ಪೀಡಿತ ವ್ಯಕ್ತಿಗಳ ಅಧ್ಯಯನ ನಡೆಸಲಾಗಿದ್ದು, ಈ ಪೈಕಿ, ಶೇ. 0.9 ರಷ್ಟು ಮಾತ್ರ ಒಂಬತ್ತು ವರ್ಷದೊಳಗಿನ ತಗುಲಿದೆ.

ಇದುವರೆಗಿನ ಸಂಶೋಧನೆಗಳ ಪ್ರಕಾರ, ಮಕ್ಕಳಿಗೂ ಕೊರೋನಾ ವೈರಸ್ ತಗುಲುತ್ತದೆ. ಆದರೆ ವಯಸ್ಕರಂತೆ ಅವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಮಕ್ಕಳು ವಯಸ್ಕರಂತೆ ಅನಾರೋಗ್ಯಕ್ಕೀಡಾಗುವುದಿಲ್ಲ. ಕೆಲವು ಗೊತ್ತಿಲ್ಲದ ಕಾರಣಗಳು ಮಕ್ಕಳನ್ನು ರಕ್ಷಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಹೇಳಿದ್ದಾರೆ.

ಮಕ್ಕಳಲ್ಲಿ ಕೊರೋನಾ ವೈರಸ್ ಎದುರಿಸುವ ರೋಗ ನಿರೋಧಕ ಶಕ್ತಿ ಇರಬಹುದು. ಆದರೆ ಆ ಬಗ್ಗೆ ಇನ್ನು ಖಚಿತವಾಗಿ ತಿಳಿದುಬಂದಿಲ್ಲ ಎಂದಿದ್ದಾರೆ.

ಅಚ್ಚರಿ ಎಂದರೆ 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ಸಹ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಸಾರ್ಸ್ ಸಹ ಸಾರ್ಸ್-ಸಿಒವಿ-2 ನಿಕಟ ಸಂಬಂಧಿಯಾಗಿದೆ.

SCROLL FOR NEXT