ಸಂಗ್ರಹ ಚಿತ್ರ 
ಆರೋಗ್ಯ

ರಾಜ್ಯದಲ್ಲಿ ಪ್ರತೀ ವರ್ಷ ಕ್ಯಾನ್ಸರ್ ಪ್ರಕರಣ ಶೇ.1 ರಷ್ಟು ಹೆಚ್ಚಳ; ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡುತ್ತಿದೆ ರೋಗ!

ರಾಜ್ಯದಲ್ಲಿ ಕ್ಯಾನ್ಸರ್ ರೋಗ ಉಲ್ಪಣಿಸುತ್ತಿದೆ, ಪ್ರತಿ ವರ್ಷ ಶೇಕಡಾ 1ರಷ್ಟು ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಪುರುಷರಿಗಿಂತಲೂ ಮಹಿಳೆಯರೇ ರೋಗಕ್ಕೆ ತುತ್ತಾಗುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ರೋಗ ಉಲ್ಪಣಿಸುತ್ತಿದೆ, ಪ್ರತಿ ವರ್ಷ ಶೇಕಡಾ 1ರಷ್ಟು ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಪುರುಷರಿಗಿಂತಲೂ ಮಹಿಳೆಯರೇ ರೋಗಕ್ಕೆ ತುತ್ತಾಗುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತಿಗ್ಗುಸ ಗರ್ಭಕಂಠದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್‌ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (ಕೆಎಂಐಒ) ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಸುರೇಶ್ ಬಾಬು ಮಾತನಾಡಿ, “ಈ ಹಿಂದೆ, ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಸುಧಾರಿತ ಸ್ಕ್ರೀನಿಂಗ್‌ನಿಂದಾಗಿ ಗರ್ಭಕಂಠ ಕ್ಯಾನ್ಸರ್‌ಗಳಲ್ಲಿ ಇಳಿಮುಖ ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಬದಲಾಗುತ್ತಿರುವ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ” ಎಂದು ಹೇಳಿದ್ದಾರೆ.

“ಸ್ತನ ಕ್ಯಾನ್ಸರ್ ತಪಾಸಣೆಯು ನಗರ ಪ್ರದೇಶಗಳಲ್ಲಿ ಸುಧಾರಿಸಿದರೂ, ಗ್ರಾಮೀಣ ಮಹಿಳೆಯರಲ್ಲಿ ಇನ್ನೂ ಜಾಗೃತಿ ಮೂಡಿಸುವ ಅಗತ್ಯವಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿನ ಮಹಿಳೆಯರು ಸ್ತನದಲ್ಲಿ ಉಂಡೆಯಾಕಾರ ಗಡ್ಡೆ ಇದ್ದರೂ ತಪಾಸಣೆ ಮಾಡಿಸಿಕೊಳ್ಳುವುದನ್ನು ತಪ್ಪಿಸುತ್ತಾರೆ. ತಪಾಸಣೆ ಮಾಡುವುದನ್ನು ತಪ್ಪಿಸುವುದರಿಂದ ರೋಗ ಉಲ್ಭಣಗೊಳ್ಳಲು ಕಾರಣವಾಗುತ್ತದೆ” ಎಂದು ತಿಳಿಸಿದ್ದಾರೆ.

“ಸ್ತನ ಕ್ಯಾನ್ಸರ್‌ ಹೊಂದಿರುವ ಗ್ರಾಮೀಣ ಮಹಿಳೆಯರು ನಿಯಮಿತವಾಗಿ ತಪಾಸಣೆಗೆ ಒಳಪಡುವುದನ್ನು ಮೀರಿ ಅಲ್ಟ್ರಾಸೌಂಡ್ ಮತ್ತು ಮ್ಯಾಮೊಗ್ರಫಿ ಪರೀಕ್ಷೆಗಳಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ಈ ಪರೀಕ್ಷೆಗಳು ಮೆಟಾಸ್ಟಾಟಿಕ್ ಹಂತದಲ್ಲಿ ರೋಗನಿರ್ಣಯ ಮಾಡಲು ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ” ಎಂದು ವಿವರಿಸಿದ್ದಾರೆ.

“ಮತ್ತೊಂದು ಅಂಶವೆಂದರೆ, ಮಹಿಳೆಯರ ಸ್ತನಗಳಲ್ಲಿ ಉದ್ಭವಾಗಿರುವ ಉಂಡೆಯಾಕಾರದ ಗಡ್ಡೆಗಳು ನೋವುರಹಿತವಾಗಿರುತ್ತವೆ. ಇದರಿಂದ ಮಹಿಳೆಯರು ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಅಕ್ಟೋಬರ್ ಅನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಆಂಕಾಲಾಜಿ ಮತ್ತು ರೊಬೊಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರಾದ ಡಾ ಶಬ್ಬರ್ ಜವೇರಿ ಅವರು ಮಾತನಾಡಿ, ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ ಎಂದು ತಿಳಿಸಿದರು.

ಹಿಂದೆ, 50-60ರ ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ರೋಗ ಕಂಡುಬರುತ್ತಿತ್ತು. ಆದರೆ, ಈಗ 30ರ ಹರೆಯದ ಮಹಿಳೆಯರಲ್ಲಿ ಕೂಡ ರೋಗ ಕಂಡು ಬರುತ್ತಿದೆ. ಇದಕ್ಕೆ ಜೀವನಶೈಲಿಯಲ್ಲಿನ ಬದಲಾವಣೆಗಳು, ತಡವಾಗಿ ಮದುವೆಯಾಗುವುದು, ಕಡಿಮೆ ಹಾಲುಣಿಸುವ ಅವಧಿ ಅಥವಾ ಕೆಲಸ-ಸಂಬಂಧಿತ ಒತ್ತಡವು ಕಾರಣವೆಂದು ಹೇಳಲಾಗುತ್ತದೆ” ಎಂದು ತಿಳಿಸಿದರು.

ಕೆಎಮ್‌ಐಒ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡಿದ ವರದಿಯು, “ರಾಜ್ಯದಲ್ಲಿ 87,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಅಂದಾಜಿಸಲಾಗಿದೆ. ಭಾರತದಲ್ಲಿ 37.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿದ್ದು, ಅದರಲ್ಲಿ 2.3 ಲಕ್ಷ ಪ್ರಕರಣಗಳು ಕರ್ನಾಟಕದಿಂದ ಬಂದಿವೆ. ಬೆಂಗಳೂರಿನಲ್ಲಿ ಶ್ವಾಸಕೋಶ, ಹೊಟ್ಟೆ, ಪ್ರಾಸ್ಟೇಟ್ ಮತ್ತು ಅನ್ನನಾಳದ ಕ್ಯಾನ್ಸರ್‌ಗಳು ಪುರುಷರಲ್ಲಿ ಪ್ರಧಾನವಾಗಿರುತ್ತವೆ. ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಅಂಡಾಶಯ ಮತ್ತು ಕಾರ್ಪಸ್ ಗರ್ಭಾಶಯಗಳು ಪ್ರಮುಖ ಕ್ಯಾನ್ಸರ್‌ಗಳಾಗಿವೆ” ಎಂದು ಹೇಳಿದೆ.

ಬಾಲ್ಯದ ಕ್ಯಾನ್ಸರ್ (0-14 ವರ್ಷಗಳು) ಪ್ರಕರಣ ಸಂಖ್ಯೆ ಕೂಡ ಉಲ್ಭಣಗೊಳ್ಳುತ್ತಿರುವುದು ಕೂಡ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ. ಲ್ಯುಕೇಮಿಯಾ ಮತ್ತು ಲಿಂಫೋಮಾ ರೋಗಗಳು ಕೂಡ ಉಲ್ಭಣಗೊಳ್ಳುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT