ಹಲಸಿನ ಹಣ್ಣು 
ಆರೋಗ್ಯ

ಹಲಸಿನ ಹಣ್ಣು ತಿಂದು ಬೀಜ ಬಿಸಾಡದಿರಿ... ಇದರಲ್ಲಿದೆ ಬೆಟ್ಟದಷ್ಟು ಪ್ರಯೋಜನ...!

ಹಸಿ ಹಲಸಿನ ಕಾಯಿಯನ್ನು ತರಕಾರಿಯಾಗಿ ಸೇವನೆ ಮಾಡಲಾಗುತ್ತದೆ. ಹಲಸು ಕಾಯಿಯಿಂದ ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುತ್ತಾರೆ.

ಹಲಸಿನ ಹಣ್ಣಿನ ಸಿಹಿ ಹಾಗೂ ಈ ಹಣ್ಣಿನ ಆಹ್ಲಾದಕರ ಪರಿಮಳವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅನೇಕರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಚೆನ್ನಾಗಿ ಹಣ್ಣಾದ ಹಲಸಿನ ತೊಳೆಗಳ ರುಚಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಬೇಸಿಗೆ ಕಾಲದಲ್ಲಿ ಸಿಗುವ ತರಕಾರಿಗಳಲ್ಲಿ ಹಲಸು ಕೂಡ ಒಂದು. ಕೆಲವರು ಇದನ್ನು ಸಸ್ಯಾಹಾರಿಗಳ ಮಾಂಸಾಹಾರ ಆಹಾರ ಎಂದೂ ಕರೆಯುವುದುಂಟು. ಹಲಸು ತರಕಾರಿಯಾಗಿ ಮತ್ತು ಹಣ್ಣಾಗಿ ಬಳಕೆ ಮಾಡಲಾಗುತ್ತದೆ. ಹಲಸಿನ ಹಣ್ಣನ್ನು ವಿವಿಧ ತರಹದ ರೆಸಿಪಿ ಮಾಡಲು ಬಳಕೆ ಮಾಡಲಾಗುತ್ತದೆ.

ಹಸಿ ಹಲಸಿನ ಕಾಯಿಯನ್ನು ತರಕಾರಿಯಾಗಿ ಸೇವನೆ ಮಾಡಲಾಗುತ್ತದೆ. ಹಲಸು ಕಾಯಿಯಿಂದ ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುತ್ತಾರೆ. ಅದರ ರುಚಿಯ ಹೊರತಾಗಿಯೂ ಹಲಸಿನ ಹಣ್ಣು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ.

ಹಲಸಿನ ಬೀಜಗಳಲ್ಲಿ ಅನೇಕ ಪೋಷಕಾಂಶ ತತ್ವಗಳಿವೆ. ಇದರಿಂದಾಗಿ ಇದನ್ನು ಅಗ್ಗದ ಬಾದಾಮಿ ಎಂದೂ ಕರೆಯುತ್ತಾರೆ. ಅನೇಕರು ಹಲಸಿನ ತೊಳೆಗಳನ್ನು ತಿಂದು ಅದರಲ್ಲಿನ ಬೀಜವನ್ನು ಎಸೆಯುವುದುಂಟು. ಆದರೆ, ಹಣ್ಣಿನಲ್ಲಿ ಅಷ್ಟೇ ಅಲ್ಲ. ಈ ಹಣ್ಣಿನ ಬೀಜದಲ್ಲಿಯೂ ಬೆಟ್ಟದಷ್ಟು ಪ್ರಯೋಜನಗಳಿವೆ.

ಹಲಸಿನ ಬೀಜಗಳಲ್ಲಿರುವ ಆರೋಗ್ಯ ಪ್ರಯೋಜನೆಗಳು ಇಂತಿವೆ...

  • ಹಲಸಿನ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು (ಒಮೆಗಾ 3, ಒಮೆಗಾ 6), ವಿಟಮಿನ್ ಎ, ಸಿ, ಇ, ಬಿ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮುಂತಾದ ಖನಿಜಗಳಿವೆ,

  • ಹಲಸಿನ ಬೀಜಗಳಲ್ಲಿ ಲಿಗ್ನಾನ್‌, ಐಸೊಫ್ಲೇವೋನ್‌, ಸಪೋನಿನ್‌ ಮತ್ತು ಫೈಟೊನ್ಯೂಟ್ರಿಯೆಂಟ್‌ ಇದ್ದು, ಇದು ಕ್ಯಾನ್ಸರ್ ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ಹುಣ್ಣು ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳನ್ನು ದೂರಾಗಿಸಲು ಪ್ರಯೋಜನಕಾರಿಯಾಗಿದೆ.

  • ಹಲಸಿನ ಬೀಜಗಳಲ್ಲಿ ಜಾಕಲಿನ್ ಅಂಶ ಇದ್ದು, ಇದು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿದೆ. ಇದಲ್ಲದೆ, ಹಲಸಿನ ಬೀಜಗಳಳ್ಲಿ ಆಲ್-ಟ್ರಾನ್ಸ್-ಕ್ಯಾರೋಟಿನ್ ಹೇರಳವಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ಮತ್ತು ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ದೀರ್ಘಕಾಲದ ಕ್ಷೀಣಗೊಳ್ಳುವ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

  • ಹಲಸಿನ ಬೀಜಗಳಲ್ಲಿನ ಫೈಬರ್​ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ತಡೆಯಲು ಮತ್ತು ಮಲ ಚಲನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

  • ಹಲಸಿನ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇವೆರಡೂ ಹೃದಯದ ಆರೋಗ್ಯಕ್ಕೆ ಪ್ರಮುಖ ಖನಿಜಗಳಾಗಿವೆ. ಪೊಟ್ಯಾಸಿಯಮ್ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತದೆ.

  • ಈ ಬೀಜಗಳು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಹಲಸಿನ ಬೀಜಗಳಲ್ಲಿರುವ ನಾರಿನಾಂಶವು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ, ಹೀಗಾಗಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

  • ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಈ ಹಸಲಿನ ಬೀಜಗಳು ಉಪಯೋಗಕಾರಿಯಾಗಿದೆ. ಈ ಬೀಜಗಳಲ್ಲಿನ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್​ಗಳು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸಲು, ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಅವು ಸಹಾಯ ಮಾಡುತ್ತದೆ.ಈ ಬೀಜಗಳಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಇವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಲಸಿನ ಬೀಜಗಳನ್ನು ತ್ಯಜಿಸದೇ ಆಹಾರದಲ್ಲಿ ಸೇರಿಸಿದರೆ ಕಬ್ಬಿಣದ ಕೊರತೆಯನ್ನೂ ಕೂಡಾ ಸರಿದೂಗಿಸಬಹುದು.

  • ಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ, ಹಲಸಿನ ಬೀಜಗಳು ಬಳಕೆ ಮಾಡುವುದು ಅತ್ಯಂತ ವಿರಳ. ಇದಕ್ಕೆ ಕಾರಣ ಅರಿವಿನ ಕೊರತೆಯೂ ಆಗಿದೆ.

ಹಣ್ಣಿನ ಬೀಜ ಬಳಕೆ ಹೇಗೆ..?

  • ಈ ಹಲಸಿನ ಬೀಜಗಳನ್ನು ಸಾಂಬಾರ್'ಗೆ, ಹುರಿದುಹಾಗೂ ಕಟ್ಲೆಟ್ ಗಳಲ್ಲಿ ಬಳಕೆ ಮಾಡಬಹುದು.

  • ಬೀಜಗಳನ್ನು ಚೆನ್ನಾಗಿ ಒಣಗಿಸಿ, ಪುಡಿ ಮಾಡಿ ಗೋಧಿ ಅಥವಾ ಇತರೆ ಧಾನ್ಯದ ಹಿಟ್ಟಿನೊಂದಿಗೆ ಬೆರೆಸಿ, ಚಪಾತಿ, ದೋಸೆ, ಪ್ಯಾನ್ ಕೇಕ್, ಬಿಸ್ಕೆಟ್, ಬ್ರೆಡ್, ಕೇಕ್ ಹಾಗೂ ನೂಡಲ್ಸ್ ಗಳನ್ನು ತಯಾರಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT