ಸಂಗ್ರಹ ಚಿತ್ರ 
ಆರೋಗ್ಯ

Cancer ಬಂದಿದೆ ಎಂದು ಕುಗ್ಗಬೇಡಿ: ಜೀವನಶೈಲಿ ಬದಲಾವಣೆಗಳಿಂದ ಆರೋಗ್ಯ ಸುಧಾರಿಸಬಹುದು, ಬದುಕು ಬದಲಾಯಿಸುವ 5 ಸೂಪರ್ Habits ಇಲ್ಲಿವೆ..!

ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ದೇಹಕ್ಕೆ ಹೊಸ ಶಕ್ತಿ ನೀಡುವುದರ ಜೊತೆಗೆ ಬದುಕಿನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಕ್ಯಾನ್ಸರ್‌ನ ನಂತರವೂ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

ಕ್ಯಾನ್ಸರ್‌ ಎಂಬುದು ಕೇವಲ ಒಂದು ರೋಗವಲ್ಲ, ಅದು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಜೀವನವನ್ನೇ ಬದಲಾಯಿಸುವ ದೊಡ್ಡ ಸವಾಲು. ರೋಗ ಪತ್ತೆಯಾದ ಕ್ಷಣದಿಂದಲೇ ಹಲವರಲ್ಲಿ ಭಯ, ಆತಂಕ ಮತ್ತು ನಿರಾಶೆ ಹೆಚ್ಚಾಗುತ್ತದೆ. ಆದರೆ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ, ಜೀವನಶೈಲಿಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ದೇಹಕ್ಕೆ ಹೊಸ ಶಕ್ತಿ ನೀಡುವುದರ ಜೊತೆಗೆ ಬದುಕಿನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಕ್ಯಾನ್ಸರ್‌ನ ನಂತರವೂ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ, ಧೂಮಪಾನ ತ್ಯಾಗ ಮತ್ತು ಮದ್ಯಪಾನ ನಿಯಂತ್ರಣ ಇವುಗಳು ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವವರ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ.

ಜೀವ ಉಳಿಸಲಿದೆ ದೈಹಿಕ ಚಟುವಟಿಕೆ

ಕ್ಯಾನ್ಸರ್ ರೋಗಿಗಳಿಗೆ ಸಂಪೂರ್ಣ ವಿಶ್ರಾಂತಿ ಬೇಕು ಎಂಬುದು ಹಳೆದ ಕಲ್ಪನೆ. ವೈದ್ಯರು ಹೇಳುವಂತೆ, ನಿಯಮಿತ ದೈಹಿಕ ಚಟುವಟಿಕೆ ದೇಹಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ವ್ಯಾಯಾಮ — ನಡೆಯುವುದು, ಯೋಗ, ಸೈಕ್ಲಿಂಗ್ ಅಥವಾ ಲಘು ವರ್ಕೌಟ್ — ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಂಗ್ರಹ ಚಿತ್ರ

ಅಧ್ಯಯನಗಳ ಪ್ರಕಾರ, ವ್ಯಾಯಾಮ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನಿಂದ ಸಾವು ಸಂಭವಿಸುವ ಅಪಾಯವು ಸುಮಾರು ಶೇ.36ರಷ್ಟು ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ಹಾಗೆಯೇ ದೈಹಿಕವಾಗಿ ಚುರುಕಾಗಿರುವ ಪುರುಷರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್‌ನಿಂದ ಸಾವು ಸಂಭವಿಸುವ ಅಪಾಯವು ಶೇ.37ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದ. ವ್ಯಾಯಾಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ ಹಾರ್ಮೋನ್ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.

ಆಹಾರವೇ ಔಷಧಿ

ಕ್ಯಾನ್ಸರ್ ನಂತರ ಆಹಾರ ಪದ್ಧತಿಯಲ್ಲಿ ಬದಲಾವಣೆ ಬಹಳ ಮುಖ್ಯ. ಹೆಚ್ಚು ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದು ಉತ್ತಮ. ವಿಶೇಷವಾಗಿ ಮೆಡಿಟರೇನಿಯನ್ ಡಯಟ್‌ (Mediterranean Diet) ಅನುಸರಿಸುವವರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್‌ನಿಂದ ಸಾವು ಸಂಭವಿಸುವ ಸಾಧ್ಯತೆ ಸುಮಾರು ಶೇ.50ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಇನ್ನೊಂದೆಡೆ, ಸಂಸ್ಕರಿತ ಆಹಾರ, ಅತಿಯಾದ ಸಕ್ಕರೆ ಮತ್ತು ಕೆಂಪು ಮಾಂಸ ಸೇವನೆಯನ್ನೂ ಕಡಿಮೆ ಮಾಡುವುದು ಉತ್ತಮ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದರಿಂದ ಚಿಕಿತ್ಸೆ ಬಳಿಕ ದೇಹ ಬೇಗ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ.

ತೂಕ ನಿಯಂತ್ರಣ ಬಹಳ ಅಗತ್ಯ

ಅತಿಯಾದ ತೂಕ ಅಥವಾ ದೇಹದಲ್ಲಿ ಹೆಚ್ಚುವರಿ ಕೊಬ್ಬು ಇರುವುದು ಕ್ಯಾನ್ಸರ್ ರೋಗಿಗಳಿಗೆ ಅಪಾಯಕಾರಿಯಾಗಿದೆ. ಇದು ಮಧುಮೇಹ, ಹೃದಯ ಸಮಸ್ಯೆಗಳು ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಯ ನಂತರ ದೇಹದ ಮೆಟಾಬಾಲಿಸಂ ಬದಲಾಗುವ ಸಾಧ್ಯತೆ ಇರುವುದರಿಂದ ತೂಕ ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ.

ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕ ಕಾಪಾಡಿಕೊಂಡರೆ ದೇಹದ ಶಕ್ತಿ ಹೆಚ್ಚುತ್ತದೆ ಮತ್ತು ರೋಗ ಮರುಕಳಿಸುವ ಅಪಾಯ ಕಡಿಮೆಯಾಗಬಹುದು.

ಧೂಮಪಾನ ತ್ಯಜಿಸಿದರೆ ಉಳಿಯುತ್ತದೆ ಜೀವ

ಕ್ಯಾನ್ಸರ್ ದೃಢಪಟ್ಟ ಬಳಿಕವೂ ಕೆಲವರು ಧೂಮಪಾನ ಬಿಡುವುದಿಲ್ಲ. ಆದರೆ, ಇದು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಧೂಮಪಾನ ನಿಲ್ಲಿಸಿದ ಶ್ವಾಸಕೋಶ ಕ್ಯಾನ್ಸರ್ ರೋಗಿಗಳಲ್ಲಿ ಬದುಕುಳಿಯುವ ಸಾಧ್ಯತೆ ಸುಮಾರು ಶೇ.30ರಷ್ಟು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ಧೂಮಪಾನ ದೇಹದ ಕೋಶಗಳನ್ನು ಹಾನಿಗೊಳಿಸಿ ಮತ್ತಷ್ಟು ಕ್ಯಾನ್ಸರ್‌ಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಚಿಕಿತ್ಸೆ ಪಡೆಯುತ್ತಿರುವವರು ಮಾತ್ರವಲ್ಲ, ಗುಣಮುಖರಾದವರೂ ಕೂಡ ಈ ಅಭ್ಯಾಸವನ್ನು ಸಂಪೂರ್ಣವಾಗಿ ಬಿಡುವುದು ಅಗತ್ಯ.

ಸಂಗ್ರಹ ಚಿತ್ರ

ಮದ್ಯಪಾನ ಸಂಪೂರ್ಣವಾಗಿ ತ್ಯಜಿಸಿದರೆ ಉತ್ತಮ

ಕ್ಯಾನ್ಸರ್‌ನ ನಂತರ ಅತಿಯಾದ ಮದ್ಯಪಾನ ದೇಹಕ್ಕೆ ಮತ್ತಷ್ಟು ಹಾನಿ ಉಂಟುಮಾಡಬಹುದು. ಇದು ಲಿವರ್ ಮೇಲೆ ಒತ್ತಡ ಹೆಚ್ಚಿಸಿ ದೇಹದ ಚೇತರಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಎರಡನೇ ಬಾರಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

ಆದ್ದರಿಂದ ವೈದ್ಯರು ಮದ್ಯಪಾನವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆರೋಗ್ಯಕರ ಜೀವನಶೈಲಿಯೊಂದಿಗೆ ಇದೂ ಪ್ರಮುಖ ಬದಲಾವಣೆಯಾಗಿದೆ.

ಸಂಶೋಧಕರು ಹೇಳುವುದೇನು?

ಬ್ರಿಟನ್‌ನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ಸಂಶೋಧಕರಾದ ಜಾನ್ ಮ್ಯಾಥರ್ಸ್ ಮತ್ತು ಡಾ. ಫಿಯೋನಾ ಮಾಲ್ಕಂಸನ್ ನಡೆಸಿದ ಅಧ್ಯಯನದ ಪ್ರಕಾರ, ಈ ಐದು ಆರೋಗ್ಯಕರ ಅಭ್ಯಾಸಗಳಲ್ಲಿ ಪ್ರತಿಯೊಂದನ್ನೂ ಪಾಲಿಸಿದಂತೆ ಒಟ್ಟು ಸಾವಿನ ಅಪಾಯವು ಸುಮಾರು 8%ರಷ್ಟು ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ರೋಗಿಗಳು ತಮ್ಮ ಆರೋಗ್ಯ ಸುಧಾರಣೆಯಲ್ಲಿ ದೊಡ್ಡ ಪಾತ್ರ ವಹಿಸಬಹುದು. ಚಿಕಿತ್ಸೆ ಮಾತ್ರವಲ್ಲ, ಜೀವನಶೈಲಿಯೂ ಬದುಕನ್ನು ಬದಲಾಯಿಸಬಲ್ಲದು ಎಂದು ಡಾ. ಫಿಯೋನಾ ಹೇಳಿದ್ದಾರೆ.

ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ಕ್ಯಾನ್ಸರ್ ಜೀವನದ ಅಂತ್ಯವಲ್ಲ. ಸರಿಯಾದ ಚಿಕಿತ್ಸೆ ಜೊತೆಗೆ ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಉತ್ತಮ ಗುಣಮಟ್ಟದ ಬದುಕು ನಡೆಸಬಹುದು. ಪ್ರತಿದಿನ ಸ್ವಲ್ಪ ನಡೆಯುವುದು, ಆರೋಗ್ಯಕರ ಆಹಾರ ಸೇವಿಸುವುದು, ಒತ್ತಡ ಕಡಿಮೆ ಮಾಡುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಡುವುದು — ಇವು ಸಣ್ಣ ಬದಲಾವಣೆಗಳಂತೆ ಕಂಡರೂ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.

ದೇಹವನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸುತ್ತದೆ. ಆರೋಗ್ಯಕರ ಬದುಕಿನತ್ತ ಇಡುವ ಪ್ರತಿಯೊಂದು ಹೆಜ್ಜೆಯೂ ಹೊಸ ಭರವಸೆಯನ್ನು ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಲಾಖೆಗಳ ನಡುವಿನ ತಡೆಗೋಡೆ ಒಡೆಯಿರಿ, ಒಂದೇ ತಂಡವಾಗಿ ಕೆಲಸ ಮಾಡಿ: ಕೇಂದ್ರ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ..!

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?