Health Tips: ಸಾಮಾನ್ಯವಾಗಿ ಅದೆಷ್ಟೋ ಮನೆಗಳಲ್ಲಿ ಒಂದು ಸೋಪು ಒಂದು ಫ್ಯಾಮಿಲಿ (One Family One Soap) ಅನ್ನುವಂತಾಗಿದೆ. ಯಾಕಂದ್ರೆ, ಕುಟುಂಬದ ಅಪ್ಪ, ಅಮ್ಮ, ಮಗ, ಮಗಳು ಎಲ್ಲರೂ ಒಂದೇ ಸೋಪಿನ ಹಿಂದೆ ಬೀಳುತ್ತಾರೆ. ಇದರ ಹಿಂದೆ ದುಡ್ಡು ಉಳಿಸುವ (Save Money) ಅಥವಾ ನಿರ್ಲಕ್ಷ್ಯ ಇರುತ್ತದೆ. ಆದ್ರೆ, ನಿಮಗೆ ಗೊತ್ತಾ ಮನೆಯ ಎಲ್ಲಾ ಸದಸ್ಯರು ಒಂದೇ ಸೋಪು (Soap) ಬಳಸುವುದರಿಂದ ಎಷ್ಟೆಲ್ಲಾ ಕಾಯಿಲೆಗಳು ಬರಬಹುದು ಎಂದು? ಇಲ್ಲದೆ ನೋಡಿ ಆ ಕುರಿತ ಕಂಪ್ಲೀಟ್ ವರದಿ:
ಮನೆಯ ಎಲ್ಲಾ ಸದಸ್ಯರು ಒಂದೇ ಸೋಪ್ ಬಳಸಿದರೆ ಏನಾಗುತ್ತೆ?
ದೇಹವನ್ನ ಬ್ಯಾಕ್ಟೀರಿಯಾ ಹಾಗೂ ಚರ್ಮದ ಸೋಂಕುಗಳಂತೆ ರೋಗಗಳನ್ನು ದೂರ ಮಾಡಲು ಬಳಸುತ್ತೆವೆ. ಆದರೆ, ಅದೇ ಸೋಪನ್ನು ಮನೆಯ ಎಲ್ಲಾ ಸದಸ್ಯರು ಬಳಕೆ ಮಾಡಿದರೆ ಏನೆಲ್ಲ ತೊಂದರೆಗಳು ಬರುತ್ತದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.
1. ಫಂಗಲ್ ಮತ್ತು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಹರಡುತ್ತೆ
ಸೋಪ್ ತೇವವಾಗಿರೋದ್ರಿಂದ ಅದರ ಮೇಲೆ ಬ್ಯಾಕ್ಟೀರಿಯಾ, ಫಂಗಸ್, ವೈರಸ್ ಸುಲಭವಾಗಿ ಬೆಳೆಯುತ್ತೆ. ಮನೆಯಲ್ಲಿ ಯಾರಿಗಾದ್ರೂ ಅಥ್ಲೀಟ್ ಫುಟ್, ರಿಂಗ್‌ವರ್ಮ್, ತುರಿಕೆ, ಮೊಡವೆ ಇದ್ರೆ ಅದರ ಜೀವಾಣುಗಳು ಸೋಪ್ ಮೂಲಕ ಇನ್ನೊಬ್ಬರಿಗೆ ಹರಡಬಹುದು.
2. ಚರ್ಮದ ಸಮಸ್ಯೆಗಳು
ಪ್ರತಿಯೊಬ್ಬರ ಚರ್ಮದ ಟೈಪ್ ಬೇರೆ. ಎಣ್ಣೆ ಚರ್ಮ, ಡ್ರೈ ಚರ್ಮ, ಸೆನ್ಸಿಟಿವ್ ಚರ್ಮಕ್ಕೆ ಬೇರೆ ಬೇರೆ ಸೋಪ್ ಬೇಕು. ಒಂದೇ ಆಂಟಿಬ್ಯಾಕ್ಟೀರಿಯಲ್ ಸೋಪ್ ಎಲ್ಲರೂ ಬಳಸಿದರೆ ಡ್ರೈ ಚರ್ಮ ಇರೋರಿಗೆ ಇನ್ನೂ ಡ್ರೈ ಆಗುತ್ತೆ. ಸೆನ್ಸಿಟಿವ್ ಚರ್ಮ ಇರೋರಿಗೆ ಅಲರ್ಜಿ, ಕೆಂಪು, ತುರಿಕೆ ಬರಬಹುದು.
3. ಇಂಟಿಮೇಟ್ ಇನ್ಫೆಕ್ಷನ್ ರಿಸ್ಕ್
ಲೇಡೀಸ್ ಮತ್ತು ಜೆಂಟ್ಸ್ ಒಂದೇ ಸೋಪ್ ಬಳಸಿದರೆ ಇಂಟಿಮೇಟ್ ಏರಿಯಾದಲ್ಲಿ ಯೀಸ್ಟ್ ಇನ್ಫೆಕ್ಷನ್, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಬರುವ ಚಾನ್ಸ್ ಜಾಸ್ತಿ. ವಿಶೇಷವಾಗಿ ಮಕ್ಕಳು ಮತ್ತು ವಯಸ್ಕರು ಒಂದೇ ಸೋಪ್ ಬಳಸುವುದು ಸರಿಯಲ್ಲ.
4. ಸೋಪ್ ಬೇಗನೆ ಕರಗುತ್ತೆ ಮತ್ತು ಕೊಳಕಾಗುತ್ತೆ
ಹಲವರು ಬಳಸೋದರಿಂದ ಸೋಪ್ ಬೇಗನೆ ಸವೆದು ಹೋಗುತ್ತೆ. ಜೊತೆಗೆ ಅದರ ಮೇಲೆ ಕೊಳೆ, ಕೂದಲು, ಜಿಡ್ಡು ಅಂಟಿಕೊಳ್ಳುತ್ತೆ. ಇದರಿಂದ ಸೋಪ್ ಸ್ವಚ್ಛ ಮಾಡೋ ಬದಲು ಇನ್ನಷ್ಟು ಜೀವಾಣು ಹರಡುತ್ತೆ.
ಮನೆಯಲ್ಲಿ ಯಾರಿಗೆ ಹೆಚ್ಚು ಅಪಾಯ?
ಮನೆಯಲ್ಲಿ ಎಲ್ಲರೂ ಒಂದೇ ಸೋಪ್ ಬಳಸುವುದರಿಂದ
ಮಕ್ಕಳು: ಇವರ ರೋಗನಿರೋಧಕ ಶಕ್ತಿ ಇನ್ನು ಬೆಳೆಯುತ್ತಿರುವುದರಿಂದ ಸೋಂಕುಗಳು ಬೇಗನೆ ಒಕ್ಕರಿಸುತ್ತವೆ.
ವೃದ್ಧರು: ವಯಸ್ಸಾದಂತೆ ಚರ್ಮವು ತೆಳುವಾಗುವುದರಿಂದ ಮತ್ತು ಸುಲಭವಾಗಿ ಗಾಯವಾಗುವುದರಿಂದ ರೋಗಾಣುಗಳು ದೇಹ ಸೇರುವುದು ಸುಲಭ.
ಮಧುಮೇಹಿಗಳು: ಸಕ್ಕರೆ ಕಾಯಿಲೆ ಇರುವವರಿಗೆ ಸಣ್ಣ ಇನ್ಫೆಕ್ಷನ್ ಆದರೂ ಅದು ದೊಡ್ಡ ಗಾಯವಾಗಿ ಮಾರ್ಪಡುವ ಅಪಾಯವಿರುತ್ತದೆ.
ಹಾಗಾದ್ರೆ ಏನು ಮಾಡಬೇಕು?
ಪ್ರತಿ ವ್ಯಕ್ತಿಗೂ ಪ್ರತ್ಯೇಕ ಸೋಪ್ ಅಥವಾ ಬಾಡಿ ವಾಶ್ ಇಡಿ
ಮಕ್ಕಳಿಗೆ, ವಯಸ್ಕರಿಗೆ, ಸೆನ್ಸಿಟಿವ್ ಚರ್ಮಕ್ಕೆ ಪ್ರತ್ಯೇಕ ಸೋಪ್
ಸೋಪ್ ಡಬ್ಬಾ ಒಣಗಿರಲಿ. ಬಳಕೆ ನಂತರ ನೀರಿನಲ್ಲಿ ನೆನೆಯಲು ಬಿಡಬೇಡಿ
ಸಾಧ್ಯವಾದರೆ ಲಿಕ್ವಿಡ್ ಬಾಡಿ ವಾಶ್ ಅಥವಾ ಪಂಪ್ ಸೋಪ್ ಬಳಸಿ. ಅದರಲ್ಲಿ ಕಾಂಟ್ಯಾಮಿನೇಷನ್ ಕಡಿಮೆ