ಆರೋಗ್ಯ

ಮೂತ್ರನಾಳದ ಸೋಂಕಿನ ಕುರಿತು ನಿರ್ಲಕ್ಷ ಬೇಡ: ಯುಟಿಐ ತಡೆಗಟ್ಟಲು ಇಲ್ಲಿದೆ ಮಾರ್ಗದರ್ಶನ..

ಆರೋಗ್ಯವಾಗಿರಲು ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾಗಳು ಮೂತ್ರನಾಳದಲ್ಲಿ ನೆಲೆ ನಿಂತು ಸಮಸ್ಯೆ ಉಂಟುಮಾಡುವುದನ್ನು ತಡೆಯಬಹುದು.

ಮೂತ್ರನಾಳದ ಸೋಂಕು ಅಥವಾ ಯುಟಿಐ ಎಂಬುದು ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ 'ಸಾಮಾನ್ಯ' ಆರೋಗ್ಯ ಸಮಸ್ಯೆಯಿಂದ‌ ಉಂಟಾಗುವ ಕಿರಿಕಿರಿ ಅಥವಾ ನೋವು ಮಾತ್ರ 'ಅಸಾಮಾನ್ಯ'ವೇ ಸರಿ. ಅನೇಕರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಇದು ಪದೇ ಪದೇ ಎದುರಾಗುವ ಒಂದು ಹೋರಾಟದಂತೆ ಭಾಸವಾಗುತ್ತದೆ. ನಮ್ಮ ದೇಹದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮೂಲಕ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಹಾಗೂ ನಿರಂತರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಕಿರಿಕಿರಿ ಉಂಟುಮಾಡುವ ಸೋಂಕುಗಳನ್ನು ನಾವು ತಪ್ಪಿಸಬಹುದು.

ನಿಮ್ಮ ದೇಹ ನೀಡುವ ಆರಂಭಿಕ ಎಚ್ಚರಿಕೆಗಳನ್ನು ಗಮನಿಸಿ

ಮೂತ್ರನಾಳದ ಸೋಂಕಿನ ಲಕ್ಷಣಗಳನ್ನು ಗುರುತಿಸುವುದು ಇದರ ವಿರುದ್ಧದ ಹೋರಾಟದ ಮೊದಲ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ತೀಕ್ಷ್ಣವಾದ ನೋವು ಅಥವಾ ಉರಿ ಸಂವೇದನೆಯೊಂದಿಗೆ ಪ್ರಾರಂಭವಾಗುವ ಯುಟಿಐ ನಿಮಗೆ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬೇಕೆಂಬ ತುಡಿತವನ್ನು ಉಂಟುಮಾಡಬಹುದು. ಆದರೆ ಮೂತ್ರ ವಿಸರ್ಜನೆಯ ವೇಳೆ ಸರಿಯಾಗಿ ವಿಸರ್ಜನೆಯಾಗುವುದಿಲ್ಲ. ಪಾರದರ್ಶಕವಲ್ಲದ ಅಥವಾ ಗಾಢವಾದ ವಾಸನೆಯುಳ್ಳ ಮೂತ್ರ ಮತ್ತು ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಅಸ್ವಸ್ಥತೆ ಉಂಟಾಗುವುದು ಈ ಸೋಂಕಿನ ಇತರ ಲಕ್ಷಣಗಳಾಗಿವೆ. ಅಲ್ಲದೇ, ನಿಮಗೆ ಜ್ವರ ಅಥವಾ ಬೆನ್ನು ನೋವು ಕಾಣಿಸಿಕೊಂಡರೆ, ಅದು ಪರಿಸ್ಥಿತಿ ಗಂಭೀರವಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದ್ದು ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಅತ್ಯಗತ್ಯ ಎಂದು ಮಣಿಪಾಲ್ ಆಸ್ಪತ್ರೆ, ಯುರಾಲಜಿ ಮತ್ತು ರೀನಲ್ ಟ್ರಾನ್ಸ್‌ಪ್ಲಾಂಟ್ ಸರ್ಜರಿ- ಕನ್ಸಲ್ಟೆಂಟ್, ಡಾ. ಹರ್ಷ ಆರ್ ಹೇಳುತ್ತಾರೆ. 

ಮೂತ್ರನಾಳದ ಸೋಂಕಿನಿಂದ ರಕ್ಷಣೆಗೆ ದೈನಂದಿನ ಸ್ಮಾರ್ಟ್ ಅಭ್ಯಾಸಗಳು

ಆರೋಗ್ಯವಾಗಿರಲು ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾಗಳು ಮೂತ್ರನಾಳದಲ್ಲಿ ನೆಲೆ ನಿಂತು ಸಮಸ್ಯೆ ಉಂಟುಮಾಡುವುದನ್ನು ತಡೆಯಬಹುದು. ನಿಮ್ಮ ದೇಹ ನೀಡುವ ಸೂಚನೆಗಳಿಗೆ ಗಮನ ಕೊಡುವುದು ಕೂಡ ಅಷ್ಟೇ ಮುಖ್ಯ. ಮೂತ್ರವನ್ನು ಹೆಚ್ಚು ಹೊತ್ತು ತಡೆ ಹಿಡಿಯಬೇಡಿ. ಏಕೆಂದರೆ ನಿಂತ ಮಡುವಿನಂತಿರುವ ಮೂತ್ರವು ಜೀವಾಣುಗಳ ಬೆಳವಣಿಗೆಗೆ ಪೂರಕವಾದ ಸ್ಥಳವಾಗಬಹುದು.

ಮೂಲಭೂತ ನೈರ್ಮಲ್ಯ ಅಭ್ಯಾಸಗಳು ದೊಡ್ಡ ಬದಲಾವಣೆಯನ್ನು ತರಬಲ್ಲವು. ಯಾವಾಗಲೂ ಮುಂಭಾಗದಿಂದ ಹಿಂಭಾಗಕ್ಕೆ ಸ್ವಚ್ಛಗೊಳಿಸಿ. ಸುಗಂಧಯುಕ್ತ ಸ್ತ್ರೀ ಶೌಚ ದ್ರಾವಣಗಳು ಅಥವಾ ಡೌಚ್‌ಗಳನ್ನು ಬಳಸಬೇಡಿ. ಅವು ದೇಹದ ನೈಸರ್ಗಿಕ ಸಮತೋಲನವನ್ನು ತಪ್ಪಿಸಬಹುದು. ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ಟ್ಯಾಂಪೂನ್‌ಗಳನ್ನು ಪದೇ ಪದೇ ಬದಲಾಯಿಸುವುದನ್ನು ಮರೆಯದಿರಿ.

ಲೈಂಗಿಕ ಸಂಪರ್ಕದ ನಂತರ ತಕ್ಷಣ ಮೂತ್ರ ವಿಸರ್ಜನೆ ಮಾಡುವುದು ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಇರುವ ಒಂದು ಅತ್ಯಂತ ಉಪಯುಕ್ತ ಮತ್ತು ಸಾಬೀತಾದ ಸಲಹೆಯಾಗಿದೆ. ಅಲ್ಲದೇ, ನಿಮ್ಮ ಉಡುಪುಗಳು ಕೂಡ ವ್ಯತ್ಯಾಸವನ್ನುಂಟು ಮಾಡುತ್ತವೆ. ಉದಾಹರಣೆಗೆ, ಗಾಳಿಯಾಡುವ ಹತ್ತಿಯ ಒಳ ಉಡುಪುಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳದ ಕಾರಣ ಯಾವಾಗಲೂ ಉತ್ತಮ ಆಯ್ಕೆಯಾಗಿವೆ.

ವೈದ್ಯಕೀಯ ನೆರವು ಯಾವಾಗ ಅಗತ್ಯ?

ಮೂತ್ರನಾಳದ ಸೋಂಕಿನಿಂದ ಪಾರಾಗಲು ಜೀವನಶೈಲಿಯ ಬದಲಾವಣೆಗಳು ಗಮನಾರ್ಹ ಪರಿಣಾಮ ಬೀರಬಲ್ಲವು. ಆದರೆ ಕೆಲವು ಸಮಸ್ಯೆಗಳಿಗೆ ವೈದ್ಯಕೀಯ ಸಹಾಯದ ಅಗತ್ಯವಿರುತ್ತದೆ. ಒಂದು ವರ್ಷದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಯುಟಿಐ ಕಾಣಿಸಿಕೊಂಡರೆ, ಮೂತ್ರದಲ್ಲಿ ರಕ್ತ ಕಂಡುಬಂದರೆ ಅಥವಾ ಕಡಿಮೆ ಆಗದ ಜ್ವರವಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಯುಟಿಐ ಹೊಂದಿರುವ ಗರ್ಭಿಣಿಯರು, ಮಾರ್ಗದರ್ಶಿತ ಈಸ್ಟ್ರೊಜೆನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದಾದ ಋತುಬಂಧದ ನಂತರದ ಮಹಿಳೆಯರು, ಪ್ರೊಸ್ಟೇಟ್ ಸಮಸ್ಯೆಗಳಂತಹ ಮೂಲಭೂತ ತೊಂದರೆಗಳನ್ನು ಪತ್ತೆಹಚ್ಚಲು ಹೆಚ್ಚಿನ ಪರೀಕ್ಷೆಗಳ ಅಗತ್ಯವಿರುವ ಪುರುಷರು, ಹಾಗೂ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಮಧುಮೇಹ ಇರುವವರು ಆರೋಗ್ಯವಾಗಿರಲು ಸಕ್ಕರೆಯ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುವುದು ಬಹಳ ಮುಖ್ಯ.

ಅದೃಷ್ಟವಶಾತ್, ಆಧುನಿಕ ವೈದ್ಯಕೀಯ ವಿಜ್ಞಾನವು ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆ. ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದಾಗ ಚಿಕಿತ್ಸೆಯು ಸರಳವಾಗಿರುತ್ತದೆ. ಪದೇ ಪದೇ ಸೋಂಕಿಗೆ ಒಳಗಾಗುವವರಿಗೆ, ವೈದ್ಯರು ನಿರ್ದಿಷ್ಟ ಆಂಟಿಬಯೋಟಿಕ್‌ಗಳು, ಸೋಂಕು ತಡೆಗಟ್ಟಲು ಕಡಿಮೆ ಪ್ರಮಾಣದ ಔಷಧಗಳು ಅಥವಾ ಪ್ರೊಬಯೋಟಿಕ್‌ಗಳನ್ನು ಸೂಚಿಸಬಹುದು. ಕೆಲವು ಸಂದರ್ಭಗಳಲ್ಲಿ, ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಇಮೇಜಿಂಗ್ ಪರೀಕ್ಷೆಗಳನ್ನು ಬಳಸಬಹುದು.

ಕೊನೆಯದಾಗಿ, ಯುಟಿಐ ಸಾಮಾನ್ಯ ಸಮಸ್ಯೆಯಾದರೂ, ಅವುಗಳನ್ನು ಗುಣಪಡಿಸುವುದು ಸುಲಭ ಮತ್ತು ತಡೆಗಟ್ಟುವುದು ಕೂಡ ಅಷ್ಟೇ ಸುಲಭ. ಅಪಾಯದ ಸಾಧ್ಯತೆಗಳನ್ನು ಅರಿತುಕೊಳ್ಳುವುದು ಮತ್ತು ದೈನಂದಿನ ಜೀವನದಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಮ್ಮ ಮೂತ್ರಪಿಂಡ ಮತ್ತು ಮೂತ್ರಕೋಶದ ದೀರ್ಘಕಾಲದ ಆರೋಗ್ಯಕ್ಕೆ ಅತ್ಯುತ್ತಮ ಮಾರ್ಗವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

ಗಲ್ಫ್‌ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು 'ಒಪ್ಪಲಾಗದು': ಅನಿಲ ಪೂರೈಕೆ ಸಮಸ್ಯೆ ಬಗ್ಗೆ ಭಾರತ ಕಳವಳ!

ಯುಗಾದಿ ಹಬ್ಬದಂದೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಇಂದಿನ ದರವೆಷ್ಟು?

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

SCROLL FOR NEXT