ಕಡಿಮೆ ಪ್ರಮಾಣದ ಹಣ್ಣುಗಳ ಸೇವನೆಯಿಂದ ತೀವ್ರ ರೀತಿಯ ಆರೋಗ್ಯ ಪರಿಣಾಮಗಳು ಉಂಟಾಗಬಹುದು ಎಂದು ಮೆಡಿಕಲ್ ನ್ಯೂಸ್ ಟುಡೇ ವರದಿ ಮಾಡಿದೆ. ಸಾಕಷ್ಟು ಹಣ್ಣುಗಳನ್ನು ಸೇವಿಸದಿದ್ದರೆ ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹಣ್ಣುಗಳು ಒಳಗೊಂಡಿರುವ ಪಾಲಿಫಿನಾಲ್‌ಗಳು (NEPP)ನೈಸರ್ಗಿಕವಾಗಿ ಕಂಡುಬರುವ ಶಕ್ತಿಶಾಲಿ ಸೂಕ್ಷ್ಮ ಪೋಷಕಾಂಶಗಳಾಗಿವೆ. ಇದರಲ್ಲಿ ಪೈಬರ್ ಅಂಶ ಅಧಿಕವಾಗಿರುತ್ತದೆ. ಪಾಲಿಫಿನಾಲ್‌ಗಳು ಪೈಬರ್ ಜೊತೆಗೆ ಕರಳನ್ನು ತಲುಪಿದಾಗ, ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಅವುಗಳನ್ನು ರಕ್ತನಾಳಗಳ ಆರೋಗ್ಯಕ್ಕೆ ನೆರವಾಗುವ ಪ್ರಮುಖ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ.
ಸಂಪೂರ್ಣವಾಗಿ ಹಣ್ಣನ್ನು ತಿನ್ನುವುದರಿಂದ ನಿಮಗೆ ಹೊಟ್ಟೆಯೂ ಅನುಭವವಾಗುತ್ತದೆ ಮತ್ತು ಸರಿ ಇಲ್ಲದ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡುತ್ತದೆ.
'ನಾರು ಹೃದಯದ ಆರೋಗ್ಯಕ್ಕೆ ವಿಶೇಷವಾಗಿದೆ. ಏಕೆಂದರೆ ಕರಗುವ ನಾರಿನ ಅಂಶ ಜೀರ್ಣಾಂಗದಲ್ಲಿ ಪಿತ್ತರಸ ವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆನಡಾದ ಆಹಾರ ತಜ್ಞ ಜೆನ್ನಿಫರ್ ಪಲ್ಲಿಯನ್ ಮೆಡಿಕಲ್ ನ್ಯೂಸ್ ಟುಡೇಗೆ ಹೇಳಿದ್ದಾರೆ.
ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ತೂಕ ನಿರ್ವಹಣೆಯನ್ನು ಬೆಂಬಲಿಸಲು ನಾರು ಸಹಾಯ ಮಾಡುತ್ತದೆ, ಇವೆಲ್ಲವೂ ಹೃದಯರಕ್ತನಾಳದ ಅಪಾಯದ ಮೇಲೆ ಪ್ರಭಾವ ಬೀರುತ್ತವೆ'. ಮತ್ತೊಂದೆಡೆ ಹಣ್ಣಿನ ರಸದಲ್ಲಿ ಫೈಬರ್ ಮತ್ತು ಅದರಲ್ಲಿ ಕಂಡುಬರುವ NEPP ಎರಡೂ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಫೈಬರ್ ನೀರಿನಲ್ಲಿ ಕರಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕೊಬ್ಬಿನಂಶವನ್ನು (Cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್, ಬೀನ್ಸ್, ಮಸೂರ ಬೇಳೆ, ಸೇಬು ಮತ್ತಿತರ ಹಣ್ಣುಗಳಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ.