ಪುಣೆ: ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರವು ಕಳೆದ 22 ವರ್ಷಗಳಿಂದ ಮರಾಠಿಗರಿಗಾಗಿ ಕನ್ನಡ ಕಲಿಕಾ ವರ್ಗಗಳನ್ನು ನಡೆಸಿಕೊಂಡು ಬರುತ್ತಿದೆ. ವರ್ಷ 2004ರಿಂದ ಕನ್ನಡ ಕಲಿಕಾ ವರ್ಗದಲ್ಲಿ ಉತ್ತೀರ್ಣರಾಗಿ, ಕನ್ನಡ ಭಾಷೆ, ಕನ್ನಡ -ಸಾಹಿತ್ಯ ಸಂಸ್ಕೃತಿಯಲ್ಲಿ ಹೆಚ್ಚಿನ ಪ್ರಭುತ್ವ ಸಾಧಿಸಲು ಇಚ್ಛಿಸುವ ಸಲುವಾಗಿ ಒಂದು ವರ್ಷದ ಪ್ರಗತ (Advance)ಕನ್ನಡ ಕಲಿಕಾ ವರ್ಗವನ್ನು ಆಯೋಜಿಸಲಾಗುತ್ತದೆ. ಕಳೆದ ಏಪ್ರಿಲ್ -2014ರಲ್ಲಿ ಕೇಂದ್ರವು ನಡೆಸಿದ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳ ಪರೀಕ್ಷೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬಂದಿರುವುದಕ್ಕೆ ಕೇಂದ್ರದ ವಿಶ್ವಸ್ಥರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಕಲಿಕಾ ವರ್ಗ
- ಪ್ರಥಮ ಸ್ಥಾನ-ಸಚಿನ ಗೋಪಾಳ ದೇಶಪಾಂಡೆ: 99ರ್
- 2ನೆಯ ಸ್ಥಾನ- ಶ್ರೀಮತಿ ಲತಾ ರಾಜೇಂದ್ರ ಹಿರೇಮಠ: 97ರ್
- 3ನೆಯ ಸ್ಥಾನ- ಮಾಧವಿ ಯೋಗೇಶ ಕುಲಕರ್ಣಿ 95.50ರ್
ಪ್ರಗತ ಕನ್ನಡ ಕಲಿಕಾ ವರ್ಗ
- ಪ್ರಥಮ ಸ್ಥಾನ- ಕು. ಚೈತನ್ಯ ಥಿಟೆ (11ನೇ ವರ್ಗ) 96ರ್
- 2ನೆಯ ಸ್ಥಾನ- ಶ್ರೀಮತಿ ಅಜಿತಾ ದೇಶಪಾಂಡೆ: 95ರ್
- 3ನೆಯ ಸ್ಥಾನ - ಶ್ರೀ ವಸಂತ ಅಥಣಿ: 93.50ರ್
2014-15ರ ಪ್ರವೇಶ ಪ್ರಕ್ರಿಯೆ
2014-15ರ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಕನ್ನಡ ಓದಲು, ಬರೆಯಲು, ಮಾತನಾಡಲು ಬಾರದ ಕನ್ನಡೇತರರು, ಮಹಾರಾಷ್ಟ್ರಕ್ಕೆ ಬಂದು ಇಂಗ್ಲಿಷ್ ಮರಾಠಿ ಮಾಧ್ಯಮಗಳಲ್ಲಿ ಕಲಿತು ಕನ್ನಡ ಭಾಷೆ-ಸಂಸ್ಕೃತಿ ಪರಿಚಯವಿಲ್ಲದ ತುಳು ಕನ್ನಡಿಗರಿಗೆ ಈ ಕಲಿಕಾ ವರ್ಗ ಪ್ರಯೋಜನಕಾರಿಯಾಗಿದ್ದು ಆಸಕ್ತರು ಕೂಡಲೇ ಮೊ.ಕ್ರ. 9890 391552ನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷಾ ಫಲಿತಾಂಶ ಪ್ರಕಟಣೆ ಸಂದರ್ಭದಲ್ಲಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ಕೃ.ಶಿ. ಹೆಗಡೆ, ವಿಶ್ವಸ್ಥರಾದ ವಿಶ್ವನಾಥಶೆಟ್ಟಿ, ಎಂ.ಎಸ್. ಪಂಡಿತ, ಅರವಿಂದ ಹರ್ಲೆಕರ, ಕನ್ನಡ ಶಿಕ್ಷಕಿ ಸುನೀತಾ ಶಿರಗುಪ್ಪಿ, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದುದು ವೈಶಿಷ್ಟ್ಯಪೂರ್ಣವಾಗಿತ್ತು.