ದುಬೈ : ಕರ್ನಾಟಕ ರಾಜ್ಯದಲ್ಲಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದು, ಸುನ್ನಿ ಆದರ್ಶದ ಜೈತ್ರ ಯಾತ್ರೆಗೆ ಭದ್ರ ಬುನಾದಿ ಹಾಕಿದ ಯಶಸ್ವಿ "ಕರ್ನಾಟಕ ಯಾತ್ರೆ"ಯ ನಾಯಕ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ರವರನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಪಿ ಉಸ್ತಾದರು ಕರ್ನಾಟಕ ಯಾತ್ರೆಯ ಯಶಸ್ವಿಗೆ ಕೆಸಿಎಫ್ ಕಾರ್ಯಕರ್ತರ ಬೆಂಬಲ ಮತ್ತು ಪರಿಶ್ರಮವೇ ಕಾರಣ ಎಂದು ಹೇಳಿ ಕೆಸಿಎಫ್ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ದುಬೈ ಯಲ್ಲಿನ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಎಪಿ ಉಸ್ತಾದರಿಗೆ ಗೌರವಾರ್ಪಣೆ ನಡೆಯಿತು.
ಮಅದಿನ್ ಅಕಾಡೆಮಿ ಛೇರ್ಮನ್ ಸಯ್ಯದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ಕಡಲುಂಡಿ, ದುಬೈ ಮರ್ಕಝ್ ಅಧ್ಯಕ್ಷರಾದ ಕಟ್ಟಿಪ್ಪಾರ ಅಬೂಬಕರ್ ಮುಸ್ಲಿಯಾರ್, ಸಯ್ಯದ್ ತಾಹಾ ಬಾಫಖಿ ತಂಗಳ್ ಸೇರಿದಂತೆ ಅನೇಕ ಉಲಮಾ ಮತ್ತು ಉದ್ಯಮಿಗಳು ನಾಯಕರುಗಳು ಉಪಸ್ಥಿತರಿದ್ದರು.