ಹೊರನಾಡು ಕನ್ನಡಿಗ

ಕೆಸಿಎಫ್ ದುಬೈ: ನಖೀಲ್ ಸೆಕ್ಟರ್ ಅಧ್ಯಕ್ಷರಾಗಿ ತೆಕ್ಕಾರು, ಕಾರ್ಯದರ್ಶಿಯಾಗಿ ನಿಯಾಝ್ ಬಸರ ಪುನರಾಯ್ಕೆ

Lingaraj Badiger
ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ(ಕೆಸಿಎಫ್ ) ಝೋನ್ ಅಧೀನದಲ್ಲಿರುವ ನಖೀಲ್  ಸೆಕ್ಟರ್ ಮಹಾಸಭೆಯು ಇತ್ತೀಚಿಗೆ ನೈಫ್ ಸೂಕ್ ಬಳಿ ಇರುವ ಅಲ್ ಗುರೈರ್ ಮಸ್ಜಿದ್  ನಲ್ಲಿ ನಡೆಯಿತು.
ಕೆಸಿಎಫ್ ನಖೀಲ್  ಸೆಕ್ಟರ್ ಅದ್ಯಕ್ಷರಾದ ಖಾಸಿಂ ಮದನಿರವರ ಅದ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಆಯ್ಕೆ ಸಮೀತಿಯ  ವೀಕ್ಷಕರಾಗಿ ಆಗಮಿಸಿದ ಕೆಸಿಎಫ್ ದುಬೈ ಝೋನ್ ಇದರ ಅದ್ಯಕ್ಷರಾದ ಜಲೀಲ್ ನಿಝಾಮಿ ಮಾದರಿ ಕಾರ್ಯಕರ್ತ ಎಂಬ ವಿಷಯದಲ್ಲಿ ಮಾತನಾಡಿ  ಕೆಸಿಎಫ್ ನ   ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು. 
ಆಯ್ಕೆ ಸಮಿತಿಯ ಮುಖ್ಯ ಅಧಿಕಾರಿಯಾಗಿ  ಆಗಮಿಸಿದ್ದ ರಫೀಕ್ ಕಲ್ಲಡ್ಕ  ಹೊಸ ಸಮಿತಿ ರಚನೆಗೆ ಚಾಲನೆ  ನೀಡಿದರು,
ನೂತನ ಪದಾದಿಕಾರಿಗಳು 
ಅದ್ಯಕ್ಷರು : ಖಾಸಿಂ ಮದನಿ ತೆಕ್ಕಾರು 
ಕಾರ್ಯದರ್ಶಿ : ನಿಯಾಝ್ ಬಸರ ಮಂಜನಾಡಿ 
ಕೋಶಾಧಿಕಾರಿ: ಸಲೀಂ ಗುಂಡಿಗೆರೆ, ಕೊಡಗು   
ಶಿಕ್ಷಣ ವಿಭಾಗ 
ಅದ್ಯಕ್ಷರು : ಇಬ್ರಾಹಿಂ ಸಖಾಫಿ ಮಠ  
ಕನ್ವೀನರ್ : ಅಶ್ರಫ್ ಮದನಿ ನಗರ  
ಸಂಘಟನೆ  ವಿಭಾಗ 
ಅದ್ಯಕ್ಷರು : ಅಬೂಬಕರ್ ಕೆ ಕೆ  ಈಶ್ವರಮಂಗಳ  
ಕನ್ವೀನರ್ : ಅಝರುದ್ದೀನ್ ಚಾಮಿಯಲ್ 
ಸಾಂತ್ವನ ವಿಭಾಗ 
ಅದ್ಯಕ್ಷರು : ಮಜೀದ್ ಮಂಜನಾಡಿ 
ಕನ್ವೀನರ್ : ಅಬ್ದುಲ್ ರಹ್ಮಾನ್  ಪಾಟ್ರಕೊಡಿ 
ಯೆಸ್ ಟೀಮ್ ಕನ್ವೀನರ್ : ನಿಯಾಝ್ ಕೂರ್ನಾಡ್ 
 ಫ್ಯಾಮಿಲಿ ಕನ್ವೀನರ್ : ಇಕ್ಬಾಲ್ ಬಸರ ಮಂಜನಾಡಿ
ಲೀಗಲ್  ಕನ್ವೀನರ್  : ಮುನೀರ್ ಕೆಮ್ಮಾರ 
ಮತ್ತು 26 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಕೊನೆಯಲ್ಲಿ ಅಬೂಬಕರ್ ಕೆ ಕೆ ದನ್ಯವಾದ ಸಮರ್ಪಿಸಿದರು 
ವರದಿ: ರಿಯಾಝ್ ಕೊಂಡಂಗೇರಿ
SCROLL FOR NEXT