ಹೊರನಾಡು ಕನ್ನಡಿಗ

ಏಪ್ರಿಲ್ 24 ರಂದು ಕೆ.ಸಿ.ಎಫ್ ದುಬ್ಯೆ ಝೋನ್ ಮಹಾಸಭೆ

ದುಬ್ಯೆ: ಅನಿವಾಸಿ ಕನ್ನಡಿಗರ ಅಭಿಮಾನದ ಸಾಂಘಿಕ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ದುಬ್ಯೆ ಝೋನ್ ಮಹಾ ಸಭೆ ಏಪ್ರಿಲ್ 24ರಂದು (ಶುಕ್ರವಾರ) ಜುಮುಅ ನಮಾಝಿನ ನಂತರ ದುಬ್ಯೆ ಊದ್ ಮೆಹ್ತಾ ಪಾಕಿಸ್ತಾನಿ ಅಕಾಡಮಿಕ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಕಳೆದ ಮಾರ್ಚ್ 10 ರಿಂದ ಎಪ್ರಿಲ್ 10 ರ ತನಕ ಝೋನ್ ಸಮಿತಿಯ ಅದೀನದ ಸೆಕ್ಟರ್ ಸಮಿತಿಗಳ ಮಹಾ ಸಭೆಯು ಅತ್ಯಂತ ಯಶಸ್ವಿಯಾಗಿ ವ್ಯವಸ್ಥಿತ ರೀತಿಯಲ್ಲಿ ನಡೆದು 3 ಸೆಕ್ಟರ್ ಸಮಿತಿಗಳನ್ನು ಅಸ್ತಿತ್ವಕ್ಕೆ ತಂದು, ಇದೀಗ ಒಟ್ಟು 12 ಸೆಕ್ಟರ್ ಸಮಿತಿಗಳು ದುಬ್ಯೆ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ.

ಪ್ರತಿಯೊಂದು ಸೆಕ್ಟರ್ ಸಮಿತಿಗಳ ಪದಾಧಿಕಾರಿಗಳು ಝೋನ್ ಸಮಿತಿ ಮಹಾ ಸಭೆಯ ಸದಸ್ಯರಾಗಿರುತ್ತಾರೆ. ದುಬ್ಯೆ ಝೋನ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್(ಪಿಎಂಎಚ್) ಈಶ್ವರಮಂಗಲ ಉದ್ಘಾಟಿಸುವರು. ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿಯವರಾದ ಹಾಜಿ ಶ್ಯೆಖ್ ಬಾವ ಮಂಗಳೂರು ಚುನಾವಣಾಧಿಕಾರಿಯಾಗಿ ಭಾಗವಹಿಸುವರು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆ.ಎಚ್ ಅಹ್ಮದ್ ಫ್ಯೆಝಿ ಕಕ್ಕಿಂಜೆ, ಅಬೂಬಕರ್ ಕೊಟ್ಟಮುಡಿ, ಅಶ್ರಫ್ ಹಾಜಿ ಅಡ್ಯಾರ್, ಹುಸ್ಯೆನ್ ಹಾಜಿ ಕಿನ್ಯ, ಅಬೂಬಕರ್ ಮುಸ್ಲಿಯಾರ್ ಕೊಡುಂಗ್ಯೆ ಮಂತಾದ ಅನೇಕ ನಾಯಕರು ಉಪಸ್ಥಿತರಿರುವರು. ಮಹಾ ಸಭೆಯ ಸದಸ್ಯರಾದ ಎಲ್ಲಾ ಸೆಕ್ಟರ್ ಪದಾಧಿಕಾರಿಗಳು ಜುಮುಅ ನಮಾಝಿಗೆ ಊದ್ ಮೆಹ್ತಾ ಪಾಕಿಸ್ತಾನಿ ಶಾಲೆಯ ಪರಿಸರದ ಮಸೀದಿಗೆ ತಲುಪಬೇಕು ಹಾಗು ಹೆಚ್ಚಿನ ಮಾಹಿತಿಗಾಗಿ 055-4003848, 055-2337484 ಸಂಖ್ಯೆ ಯನ್ನು ಸಂಪರ್ಕಿಸ ಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ದುಬ್ಯೆ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಂ ಕೋಡಿ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel