ಯದುವೀರ್ ಮತ್ತು ತ್ರಿಶಿಕಾ ಕುಮಾರಿ
ಮೈಸೂರು: ಮೈಸೂರು ರಾಜ ಮನೆತನದ ಶ್ರೀಕಂಠದತ್ತ ಒಡೆಯರ್ ಹಾಗೂ ರಾಣಿ ಪ್ರಮೋದಾ ದೇವಿ ಅವರ ದತ್ತುಪುತ್ರ ಯದುವೀರ್ ಒಡೆಯರ್ ಅವರ ವಿವಾಹ ಒಂದು ತಿಂಗಳು ಮುಂದಕ್ಕೆ ಹೋಗಿದೆ.
ಈ ಮುಂಚೆ ಮೇ 8ಕ್ಕೆ ನಿಗದಿಯಾಗಿದ್ದ ಯದುವೀರ್ ಒಡೆಯರ್ ಅವರ ಮದುವೆ ಈಗ ನಕ್ಷತ್ರ ಹಾಗೂ ಗೋತ್ರ ಸರಿಯಿಲ್ಲ ಎಂಬ ಕಾರಣಕ್ಕೆ ಜೂನ್ 27ಕ್ಕೆ ಮುಂದೂಡಲಾಗಿದೆ ಎಂದು ಅರಮನೆಯ ಮೂಲಗಳು ತಿಳಿಸಿವೆ
ಮೇ 8ರಿಂದ ಐದು ದನಿಗಳ ಕಾಲ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಒಡೆಯರ್ ಅವರ ಅದ್ಧೂರಿ ಮದುವೆ ನಿಗದಿಯಾಗಿತ್ತು. ಆದರೆ ರಾಜಗುರುಗಳ ಹಾಗೂ ಕುಲಗುರುಗಳಾದ ಶೃಂಗೇರಿ ಶ್ರೀಗಳ ಸಲಹೆಯಂತೆ ಜೂನ್ ತಿಂಗಳ 10 ಅಥವಾ 27 ರಂದು ನಡೆಸಲು ತೀರ್ಮಾನಿಸಲಾಗಿದೆ.
ಯದುವೀರ್ ಅವರು ಮೈಸೂರಿನ ಅರಮನೆಯ 27 ರಾಜವಂಶದ ಮಹಾರಾಜರಾಗಿರುವುದರಿಂದ ಜೂನ್ 27ರಂದೇ ರಾಜಸ್ಥಾನದ ರಾಜೋಟ್ ರಾಜ ಮನೆತನದ ರಾಜಕುಮಾರಿ ತ್ರಿಶಿಕಾಕುಮಾರಿಯನ್ನು ವರಿಸಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿ ಆರಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಸಹ ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೈಸೂರು ಸಂಸ್ಥಾನಕ್ಕೆಯದುವೀರ್‌ರನ್ನು ದತ್ತು ಪಡೆದು ನಂತರ ಮೇ ತಿಂಗಳಿನಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷೇಕ ನಡೆಸಲಾಯಿತು. ಆಗ ಯದುವೀರ್‌ಗೆ ಶ್ರೀ ಯದುವೀರ ಕೃಷ್ಣಚಾಮರಾಜ ಒಡೆಯರ್ ಎಂದು ನಾಮಕರಣ ಸಹ ಮಾಡಲಾಯಿತು.
ರಾಜಸ್ಥಾನದ ದುಂಗಾಪುರದ ರಾಜವಶಂಸ್ಥೆಯಾದ ತ್ರಿಶಿಕಾ ಕುಮಾರಿ ಜತೆ ನಿಶ್ಚಿತಾರ್ಥ ಸಹ ನಡೆದಿದ್ದು, ತ್ರಿಶಿಕಾ ಕುಮಾರಿ ಮಹಾರಾಜರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.