ರಾಜ್ಯ

ಕೆಂಡದಂತಹ ಬಿಸಿಲಿಗೆ ರಾಜ್ಯದ ಜನ ತತ್ತರ

Mainashree
ಬೆಂಗಳೂರು: ರಾಜ್ಯದ ಬಿಸಿಲಿನ ಝಳ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಭಾಗದ ಜನರು ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದಾರೆ. 
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಹಲವು ಜಿಲ್ಲೆಯಲ್ಲಿ ಕೆಂಡದಂಥ ಬಿಸಿಲಿಗೆ ಜನರು ಬಸವಳಿದಿದ್ದು, ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ 42 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣತೆ ಏರಿಕೆಯಾಗಿದೆ. ರಾಯಚೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದು, ಬೆಂಗಳೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಇನ್ನು ಕೆಲವು ದಿನಗಳ ಕಾಲ ಇದೇ ಉಷ್ಣಾಂಶ ಮುಂದುವರೆಯಲಿದೆ ಎಂದು ಹೇಳಿರುವ ತಜ್ಞರು, ವಾಹನದ ಸಂಖ್ಯೆ ಹೆಚ್ಚಳ, ಕಟ್ಟಡಗಳ ನಿರ್ಮಾಣ, ವಾಯು ಮಾಲಿನ್ಯದಿಂದಾಗಿ ಈ ಬಾರಿ ಬಿಸಿಲು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. 
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುತ್ತದೆ. ಆದರೆ, ಈ ಬಾರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಕಂಡು ಬಂದಿದೆ. 
ಹೆಚ್ಚು ಉಷ್ಣಾಂಶ ಇರುವ ಹಿನ್ನಲೆಯಲ್ಲಿ ರಾಯಚೂರ್, ಕಲಬುರ್ಗಿ ಮತ್ತು ವಿಜಯಪುರದಲ್ಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 8 ರಿಂದ 1 ರವರೆಗೆ ಕಾರ್ಯನಿರ್ಹವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT