ಮೈಸೂರು: ನೀರು ಸರಬರಾಜು ಮಾಡುತ್ತಿದ್ದ ಪೈಪ್ ದುರಸ್ತಿಕ್ಕೀಡಾಗಿದ್ದು, ದಲಿತ ಕುಟುಂಬದವರು ಶಾಲೆಯ ಶೌಚಾಲಯದಿಂದ ನೀರು ಹಿಡಿದುಕೊಳ್ಳುತ್ತಿರುವ ಪರಿಸ್ಥಿತಿ ಮೈಸೂರಿನ ಗುಂಡ್ಲುಪೆಟ್ ತಾಲ್ಲೂಕಿನಲ್ಲಿ ನಡೆದಿದೆ.
ಗುಂಡ್ಲುಪೇಟೆಯ ಭೀಮನ ಬೀಡು ಹಳ್ಳಿಯಲ್ಲಿ ವಾಸವಾಗಿರುವ ಸುಮಾರು 15 ದಲಿತ ಕುಟುಂಬಗಳು ಸರ್ಕಾರಿ ಶಾಲೆಯ ಶೌಚಾಲಯದಿಂದ ನೀರು ಸಂಗ್ರಹಿಸುತ್ತಿದ್ದಾರೆ. ನೀರು ಸರಬರಾಜು ಪೈಪ್ ದುರಸ್ತಿಕ್ಕೀಡಾಗಿದ್ದು, ದಲಿತ ಕುಟುಂಬಗಳು ಪರದಾಡಬೇಕಿದೆ. ಅಲ್ಲದೇ, ಅಲ್ಲಿನ ಮೇಲ್ವರ್ಗದ ಜನರು ತಮ್ಮ ಕೇರಿಯಲ್ಲಿ ನೀರು ಹಿಡಿಯಲು ದಲಿತರಿಗೆ ಅವಕಾಶ ಕೊಟ್ಟಿಲ್ಲ. ಈ ಹಿನ್ನಲೆಯಲ್ಲಿ ದಲಿತರು ತೀರಾ ಕೊಳಕಾಗಿರುವ ಶೌಚಾಲಯದಿಂದ ಕುಡಿಯುವ ನೀರು ಸಂಗ್ರಹಿಸುತ್ತಿದ್ದಾರೆ.
ಈ ಊರಿನಲ್ಲಿ ನಾಲ್ಕು ಬೋರ್ ವೆಲ್ ಗಳಿದ್ದು, ಅದರಲ್ಲಿ ಮೂರು ಬೋರ್ ವೆಲ್ ಗಳು ಕೆಟ್ಟುಹೋಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ದಲಿತ ಮಹಿಳೆಯರು ಮತ್ತು ಮಕ್ಕಳು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ತದ ನಂತರ ಹಳ್ಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಮರಾಸಿಂಹಾ ಮೂರ್ತಿ, ಬೋರ್ ವೆಲ್ ಗಳನ್ನು ಕಾರ್ಯನಿರ್ವಹಿಸುವಂತೆ ಸರಿಪಡಿಸಿ ಹಾಗೂ ಟ್ಯಾಂಕ್ ಗಳನ್ನು ಶುದ್ಧೀಕರಿಸಿ ಎಂದು ಆದೇಶಿಸಲಾಗಿದೆ. ನಿರ್ಲಕ್ಷ್ಯ ತೋರಿದ ಪಿಡಿಓ ಶ್ರೀನಿವಾಸ್ ಮತ್ತು ಬಿಲ್ ಕಲೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics