ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ ಶಿವಕುಮಾರ್ 
ರಾಜ್ಯ

ಖಜಾನೆ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ: ಸಿಐಡಿ

ಈ ವರ್ಷ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ದೊಡ್ಡ ದಂಧೆಯೇ ನಡೆದಿದೆ. ಇದರಲ್ಲಿ ಗಣ್ಯ ವ್ಯಕ್ತಿಗಳು...

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ದೊಡ್ಡ ದಂಧೆಯೇ ನಡೆದಿದೆ. ಇದರಲ್ಲಿ ಗಣ್ಯ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳು ಶಾಮೀಲಾಗಿರುವ ಬಗ್ಗೆ ಶಂಕೆಯಿದೆ. ಸಚಿವರ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಖಾಸಗಿ ಕಾಲೇಜು ವ್ಯವಸ್ಥಾಪಕರು ಮತ್ತು ಅಧ್ಯಾಪಕರು ಇದರ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಹಿರಿಯ ಆಡಳಿತಾಧಿಕಾರಿಗಳು ಕೂಡ ಆರೋಪಿಗಳ ಜೊತೆ ಕೈಜೋಡಿಸಿದ್ದರು ಎಂದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ಕೋಚಿಂಗ್ ಕೇಂದ್ರಗಳನ್ನು ತಮ್ಮ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಪ್ರಕರಣದ ಕಿಂಗ್ ಪಿನ್ ರಾಜ್ಯಾದ್ಯಂತ ಟ್ಯೂಷನ್ ಕೇಂದ್ರಗಳನ್ನು ನಡೆಸುತ್ತಿದ್ದು, ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅವರ ಪ್ರಮುಖ ಗುರಿಯಾಗಿದೆ.
ಆರಂಭದಲ್ಲಿ ವ್ಯಾಪಾರವಾಗಿ ಶುರುಮಾಡಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಸಾವಿರಗಳಲ್ಲಿ ಆರೋಪಿಗಳಿಗೆ ಆದಾಯ ತರುತ್ತಿತ್ತು. ನಂತರ ಅದು ಪೂರ್ಣಪ್ರಮಾಣದ ಉದ್ಯೋಗವನ್ನಾಗಿ ಮಾಡಿಕೊಳ್ಳಲಾಯಿತು. ಸಿಐಡಿ ಮೂಲಗಳ ಪ್ರಕಾರ, ಇದುವರೆಗೆ ನಡೆಸಿದ ತನಿಖೆಯಲ್ಲಿ 6 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಳ್ಳಲಾಗಿತ್ತು ಎಂದು ಗೊತ್ತಾಗಿದೆ.

ಪಿಯು ಶಿಕ್ಷಣ ಇಲಾಖೆಯ ಖಜಾನೆ ಮಟ್ಟದಲ್ಲಿ ಆರಂಭವಾದ ಸೋರಿಕೆ ಪರೀಕ್ಷೆಗಳು ಆರಂಭವಾಗುವುದಕ್ಕೆ ಕೆಲ ದಿನಗಳ ಮೊದಲಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಟ್ರೆಶರಿಯಲ್ಲಿ ಡೆಪಾಸಿಟ್ ಮಾಡಲಾಗಿತ್ತು.

ಖಜಾನೆ ವಿಭಾಗದ ಕೆಲವರನ್ನು ಟ್ಯೂಷನ್ ಕೇಂದ್ರದವರು ಸಂಪರ್ಕದಲ್ಲಿಟ್ಟುಕೊಳ್ಳುತ್ತಾರೆ. ನಕಲಿ ಕೀ ಬಳಸಿ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಯನ್ನು ತೆಗೆದುಕೊಳ್ಳುತ್ತಾರೆ.
ಶಿವಕುಮಾರ ಸ್ವಾಮಿ ಕಳೆದ ಹಲವಾರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಅದು ಆತನಿಗೆ ಸುಲಭದ ವ್ಯವಹಾರವಾಗಿತ್ತು.

ವೃತ್ತಿಪರ ಕೋರ್ಸ್ ಗಳಲ್ಲಿ ಸೀಟು ಸಿಗಬೇಕೆಂದು ಬಯಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಶೇಕಡಾ 100 ಫಲಿತಾಂಶ ಬರುವ ಬಯಕೆಯಿಂದ ಮತ್ತು ಮುಂದಿನ ವರ್ಷಗಳಲ್ಲಿ ಪಿಯುಸಿಗೆ ಹೆಚ್ಚು ದಾಖಲಾತಿ ಬರಲು ಕೆಲವು ಖಾಸಗಿ ಕಾಲೇಜುಗಳು ಶಾಮೀಲಾಗಿವೆ.

ಕಾಮೆಡ್ ಕೆ ನಿಯಮವೇನು?: ಆಧುನಿಕ ತಂತ್ರಜ್ಞಾನದೊಂದಿಗೆ ಹಳೆಯ ವ್ಯವಸ್ಥೆಯನ್ನು ಬದಲಾಯಿಸುವುದೇ ಪ್ರಶ್ನೆಪತ್ರಿಕೆ ಸೋರಿಕೆಗಿರುವ ಪರಿಹಾರ ಎನ್ನುತ್ತಾರೆ ತಜ್ಞರು.
ಉನ್ನತ ಶಿಕ್ಷಣ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಮೆಡ್ ಕೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎ.ಎಸ್.ಶ್ರೀಕಾಂತ್, ಪರೀಕ್ಷಾ ಪ್ರಕ್ರಿಯೆಯಲ್ಲಿ ನಾವು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತೇವೆ. ಪರೀಕ್ಷೆಗೆ ಒಂದು ಗಂಟೆಗೆ ಮೊದಲು ನಾವು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುತ್ತೇವೆ. ನಮ್ಮ ಎಲ್ಲಾ ಪರೀಕ್ಷಾ ಕೇಂದ್ರಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿವೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಕೆಲವರನ್ನು ಮಾತ್ರ ಸೇರಿಸಬೇಕು. ತುಂಬಾ ಜನರು ಒಳಗೊಂಡರೆ ಸೋರಿಕೆಯಾಗುವ ಅವಕಾಶಗಳು ಹೆಚ್ಚು ಎನ್ನುತ್ತಾರೆ.

ಪ್ರಶ್ನೆಪತ್ರಿಕೆಯನ್ನು ಇಲಾಖೆಯ ಸಿಬ್ಬಂದಿ ತಯಾರಿಸುವುದಲ್ಲ. ತಜ್ಞರು ಹಲವು ಪ್ರಶ್ನೆಗಳನ್ನು ತಯಾರಿಸಿ ಅದಕ್ಕಾಗಿ ಕೃತಿಚೌರ್ಯವಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಪರೀಕ್ಷೆಗೆ ಎರಡು ಗಂಟೆ ಮುಂಚೆ ಕಂಪ್ಯೂಟರ್ ನಲ್ಲಿ ಪೇಪರನ್ನು ಸೆಟ್ ಮಾಡಿ ಕೇಂದ್ರಗಳಿಗೆ ಒಂದು ಗಂಟೆ ಮುಂಚೆ ಕಳುಹಿಸಲಾಗುತ್ತದೆ. ಕೇಂದ್ರದ ಮುಖ್ಯ ಸೂಪರಿಂಟೆಂಡ್ ರಿಗೆ 45 ನಿಮಿಷಗಳ ಮುಂಚೆ ಒಂದು ಪಾಸ್ ವರ್ಡ್ ಸಿಗುತ್ತದೆ. ಖಾಸಗಿಯವರು ಹೀಗೆ ಮಾಡಲು ಸಾಧ್ಯವಿರುವಾಗ ರಾಜ್ಯ ಪದವಿಪೂರ್ವ ಶಿಕ್ಷಣ ಮಂಡಳಿಗೆ ಇಂತಹ ವ್ಯವಸ್ಥೆ ತರಲು ಸಾಧ್ಯವಾಗುವುದಿಲ್ಲ ಏಕೆ ಎಂದು ಕೇಳುತ್ತಾರೆ ಶ್ರೀಕಾಂತ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT