ಶೀಘ್ರದಲ್ಲೇ ಎಲ್ಲಾ ಬಸ್ಸುಗಳಲ್ಲಿ, ಕ್ಯಾಬ್ ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ! 
ರಾಜ್ಯ

ಶೀಘ್ರದಲ್ಲೇ ಎಲ್ಲಾ ಬಸ್, ಕ್ಯಾಬ್ ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ!

ಸಾರ್ವಜನಿಕ ಪ್ರಯಾಣಿಕರ ರಕ್ಷಣೆಗಾಗಿ ನಗರದ ಎಲ್ಲಾ ಬಸ್ಸುಗಳು, ಶಾಲಾ ವಾಹನಗಳು ಹಾಗೂ ಕ್ಯಾಬ್ ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ...

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ರಕ್ಷಣೆಗಾಗಿ ನಗರದ ಎಲ್ಲಾ ಬಸ್ಸುಗಳು, ಶಾಲಾ ವಾಹನಗಳು ಹಾಗೂ  ಕ್ಯಾಬ್ ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಪ್ರಯಾಣಿಕರು ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ರಕ್ಷಣೆಗಾಗಿ ಹೊಸ ನಿಯಮವನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಎಲ್ಲಾ ವಾಹನಗಳಲ್ಲೂ ಟ್ರಾಕಿಂಗ್ ವ್ಯವಸ್ಥೆ ಸೇರಿದಂತೆ ಪ್ಯಾನಿಕ್ ಬಟನ್ ನ್ನು ಕಡ್ಡಾಯಗೊಳಿಸಲು ತೀರ್ಮಾನಿಸಿದೆ. ಆದರೆ, ಆಟೋಗಳಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ಇಲಾಖೆ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಒಂದು ವೇಳೆ ಈ ವ್ಯವಸ್ಥೆ ಕಡ್ಡಾಯವಾಗಿದ್ದೇ ಆದರೆ, ಕರ್ನಾಟಕದ 2.25 ಲಕ್ಷ ವಾಹನಗಳು ಈ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ. ಈ ವ್ಯವಸ್ಥೆಯಿಂದ ಪ್ರಯಾಣ ಮಾಡುವ ವೇಳೆ ಪ್ರಯಾಣಿಕರಿಗಾಗುವ ಮುಖ್ಯವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಆಗುವ ಕಿರುಕುಳಗಳಿಗೆ ಕೊಂಚ ಮಟ್ಟಿಗೆ ಬ್ರೇಕ್ ಬೀಳಲಿದೆ ಎನ್ನಬಹುದು.

ಸಾರಿಗೆ ಇಲಾಖೆ ಸರ್ಕಾರೇತರ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳಿಲ್ಲಿ ಈಗಾಗಲೇ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ರಾಜ್ಯದ ಇನ್ನಿತರೆ ವಾಹನಗಳಿಗೂ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಿರ್ಭಯಾ ಪ್ರಕರಣ ಬೆಳಕಿಗೆ ಬಂದ ನಂತರ ಪ್ಯಾನಿಕ್ ಬಟನ್ ವಿಚಾರ ಚರ್ಚೆಗೆ ಬಂದಿತ್ತು. ದೆಹಲಿ ಸಾರಿಗೆ ಇಲಾಖೆ ಈ ವ್ಯವಸ್ಥೆಯನ್ನು ಒಂದು ಮಟ್ಟಿಗೆ ಜಾರಿಗೆ ತಂದಿತ್ತು. ಇದೀಗ ಕರ್ನಾಟಕದಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ವೇಗ ನಿಯಂತ್ರಣ ವ್ಯವಸ್ಥೆಯನ್ನು ಈಗಾಗಲೇ ವಾಹನಗಳಿಗೆ ಅಳವಡಿಕೆ ಮಾಡಲಾಗಿದೆ. ಇನ್ನು ಪ್ಯಾನಿಕ್ ಬಟನ್ ನನ್ನು ಶೀಘ್ರದಲ್ಲೇ ಬಸ್ ಗಳು ಹಾಗೂ ಇನ್ನಿತರೆ ವಾಹನಗಳಿಗೆ ಕಡ್ಡಾಯ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಗೊತ್ತು ಮಾಡಲಾದ ಮಾರ್ಗದಿಂದ ಚಾಲಕರು ಯಾವ ಮಾರ್ಗದಿಂದ ಹೋಗುತ್ತಾರೆಂಬುದನ್ನು ತಿಳಿಯಬಹುದು.

ಇದಲ್ಲದೆ, ಒಂದು ವೇಳೆ ವಾಹನಗಳು ಅಪಘಾತಕ್ಕೀಡಾದರೆ, ಕಾರ್ಯಾಚರಣೆ ನಡೆಸಲು ಈ ವ್ಯವಸ್ಥೆ ಸಹಾಯವಾಗಲಿದೆ. ಕೇಂದ್ರ ಸರ್ಕಾರ ಕೂಡ ವಾಹನ ಟ್ರ್ಯಾಕಿಂಗ್ ಜೊತೆಗೆ ವೇಗ ನಿಯಂತ್ರಣ ವ್ಯವಸ್ಥೆಯನ್ನು ಎಲ್ಲಾ ರೀತಿಯ ವಾಣಿಜ್ಯ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಅಳವಡಿಕೆ ಮಾಡಲು ಉತ್ತೇಜನ ನೀಡುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಅಳವಡಿಕೆ ವ್ಯವಸ್ಥೆಯ ಡಾಟಾ ನೇರವಾಗಿ ಕರ್ನಾಟಕ ಪೊಲೀಸರಿಗೆ ತಲುಪುತ್ತಿರುತ್ತದೆ. ಒಂದು ವೇಳೆ ಪ್ರಯಾಣಿಕರು ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸರಿಗೆ ಮಾಹಿತಿ ತಿಳಿಯುತ್ತದೆ. ಇದರಿಂತ ಪೊಲೀಸರು ಈ ಮಾಹಿತಿಯ ಹತ್ತಿರವಿರುವ ಸ್ಥಳೀಯ ಪೊಲೀಸರು ಮಾಹಿತಿ ನೀಡುತ್ತಾರೆಂದು ಜ್ಞಾನೇಂದ್ರ ಕುಮಾರ್ ಅವರು ಹೇಳಿದ್ದಾರೆ.

ಅಳವಡಿಕೆಯ ಕಡ್ಡಾಯ ಆಟೋಗಳಿಗಿಲ್ಲ

ಇನ್ನು ಈ ವ್ಯವಸ್ಥೆಗಳ ಅಳವಡಿಕೆಯ ಕಡ್ಡಾಯವನ್ನು ಆಟೋಗಳ ಮೇಲೆ ಹೇರಿಲಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಆಟೋಗಳ ಸಂಖ್ಯೆ ಸಾಕಷ್ಟಿದೆ. ಬೆಂಗಳೂರಿನಲ್ಲಿ ಆಟೋಗಳ ಸಂಖ್ಯೆ ಹೆಚ್ಚಿದೆ. ಆದರೆ, ಆಟೋಗಳ ಮೇಲೆ ವ್ಯವಸ್ಥೆ ಕಡ್ಡಾಯವನ್ನು ಹೇರುವ ಬಗ್ಗೆ ಚಿಂತನೆ ನಡೆಸಲಾಗಿಲ್ಲ. ಅಳವಡಿಕೆಯ ಕಡ್ಡಾಯ ಹೇರಿದರೆ ಇದು ಆಟೋ ಚಾಲಕರಿಗೆ ಹೆಚ್ಚಿನ ಖರ್ಚು ಬರುತ್ತದೆ. ಇದು ಬಡ ಚಾಲಕರ ಮೇಲೆ ಹೊರೆಯಾಗಲಿದೆ. ಒಂದು ವೇಳೆ ಸಾರ್ವಜನಿಕರು ಆಗ್ರಹಿಸಿದರೆ, ಆಟೋಗಳ ಮೇಲೆ ಕಡ್ಡಾಯ ಹೇರಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT