ಮುಖ್ಯಮಂತ್ರಿ ಸಿದ್ದರಾಮಯ್ಯ(ಸಾಂದರ್ಭಿಕ ಚಿತ್ರ) 
ರಾಜ್ಯ

ನನ್ನ ಯಶಸ್ಸಿನ ಹಿಂದೆ ಚಾಮುಂಡೇಶ್ವರಿ ಆಶೀರ್ವಾದ: ಸಿಎಂ ಸಿದ್ದರಾಮಯ್ಯ

ನಾಸ್ತಿಕ ಎಂದು ಕರೆದುಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಯಶಸ್ಸಿನ ಹಿಂದೆ ತಾಯಿ ಚಾಮುಂಡೇಶ್ವರಿ...

ಮೈಸೂರು: ನಾಸ್ತಿಕ ಎಂದು ಕರೆದುಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಯಶಸ್ಸಿನ ಹಿಂದೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವಿದೆ ಎಂದು ಹೇಳಿದ್ದಾರೆ. 
ಚಾಮುಂಡೇಶ್ವರಿ ವಿಧಾನಸಭಾ ವಿಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ರಾಜಕೀಯ ಯಶಸ್ಸಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಕಾರಣ ಎಂದು ತಿಳಿಸಿದ್ದಾರೆ. 
ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ರಾಜಕೀಯ ವೃತ್ತಿ ಆರಂಭಿಸಿದೆ. ಅದೇ ರೀತಿ ಶಾಸಕ, ಸಚಿವ ಮತ್ತು ಮುಖ್ಯಮಂತ್ರಿಯಾಗಿದ್ದೇನೆ. ಇದರ ಜೊತೆಗೆ ಜನರು ನನ್ನ ಬೆಂಬಲಕ್ಕೆ ನಿಂತಿರುವುದೇ, ಇಲ್ಲಿಯವರೆಗಿನ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದ್ದಾರೆ. 
ಚಾಮುಂಡಿ ಬೆಟ್ಟದಲ್ಲಿರುವ ದೈವಿ ವನ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಎಂ ಎಲ್ ಸಿ ಎಚ್ ವಿಜಯಶಂಕರ್ ಅವರ ಒತ್ತಾಯಕ್ಕೆ ಪ್ರತಿಕ್ರಯಿಸಿದ ಅವರು, ವಿಜಯಶಂಕರ್ ಅವರು ಧಾರ್ಮಿಕ ವ್ಯಕ್ತಿ ಆದರೆ, ನಾನು ನಂಬುವುದು ದೇವರು ನಮ್ಮ ಜೊತೆಯಲ್ಲಿದ್ದಾನೆಂದು. ಶ್ರೀಮಂತರು ದೇವಸ್ಥಾನ ಕಟ್ಟುತ್ತಾರೆ ಆದರೆ, ನನಗೆ ನನ್ನ ದೇಹವೇ ದೇಗುಲ ಎಂದು ಬಸವಣ್ಣನ ವಚನವನ್ನು ಹೇಳಿದ ಅವರು, ನಮಗೆ ಒಳ್ಳೆ ಹೃದಯವಿದ್ದರೆ, ದೇವರು ನಮ್ಮೊಂದಿಗೆ ಇರುತ್ತಾರೆ. ದೇವರನ್ನು ಮನದಲ್ಲಿ ಇಟ್ಟುಕೊಳ್ಳದೇ, ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿದರೇ ಏನು ಪ್ರಯೇಜನಾ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!