ಬೆಂಗಳೂರು: ಮನೆ ಮೇಲೆ ಮರ ಬಿದ್ದು 35 ವರ್ಷದ ಮಹಿಳೆ ಮತ್ತು ಆಕೆಯ 3 ವರ್ಷದ ಮಗ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ನಗರದ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಾಲಯದ ಪಕ್ಕದಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ, ಈ ವೇಳೆ ಮನೆಯಲ್ಲಿದ್ದ ಪ್ರಭಾತಮ್ಮ ಮತ್ತು ಆಕೆಯ ಪುತ್ರ ಶರವಣ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಪ್ರಭಾತಮ್ಮ ಪತಿ ಪತಿ ನಂಜಪ್ಪ ದೇವಾಲಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಮುಜಾರಾಯಿ ಇಲಾಖೆಯಿಂದ ಕುಟುಂಬಕ್ಕೆ ಮನೆ ನೀಡಲಾಗಿತ್ತು.
ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತಿದ್ದರು, ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಯಾಗಿಲ್ಲ ಎಂಗದು ಸೆಕ್ಯೂರಿಟಿ ಗಾರ್ಡ್ ನಂಜಪ್ಪ ತಿಳಿಸಿದ್ದಾರೆ.