ಬೆಂಗಳೂರು: ಶಾಸಕರ ಭವನದಲ್ಲಿ ಕಾರು ಟ್ರ್ಯಾಕಿಂಗ್ ಯೋಜನೆಗೆ 25 ಲಕ್ಷ ರೂಪಾಯಿ ಮಂಜೂರು ಮಾಡಿ ಸರ್ಕಾರದ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದ ಖಾಸಗಿ ಘಟಕಕ್ಕೆ ರಾಜ್ಯ ಸರ್ಕಾರ, ಇದೀಗ ಕಂಪೆನಿಯ ಕೆಲಸವನ್ನೇ ಜಾಡು ಹಿಡಿದು ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಕಾರು ಟ್ರ್ಯಾಕಿಂಗ್ ವ್ಯವಸ್ಥೆಯ ಹಾರ್ಡ್ ವೇರ್ ಮತ್ತು ಆರ್ ಎಫ್ಐಡಿ/ ಜಿಪಿಎಸ್ ಸಾಫ್ಟ್ ವೇರ್ ಗೆ 2011ರಲ್ಲಿ M/s KEONICS ಕಂಪೆನಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕಂಪೆನಿ ಕೆಲಸ ಮಾಡದೆ ಹಾಗೆ ಕುಳಿತಿದೆ. ಈ ಬಗ್ಗೆ ವಿಧಾನಸಭೆ ಸಚಿವಾಲಯ ಸರ್ಕಾರಕ್ಕೆ ಪತ್ರ ಬರೆದು ಸಿಐಡಿ ತನಿಖೆ ನಡೆಸುವಂತೆ ಕೋರಿತ್ತು. ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ.
ಕಳೆದ ಆಗಸ್ಟ್ 16ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ, ''M/s KEONICS(M/S Aviron Technology) ವಿಧಾನಸಭೆ ಸಚಿವಾಲಯದೊಂದಿಗೆ ಕಾರು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸುವಂತೆ ಕೋರಿ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಮೊದಲ ಹಂತದಲ್ಲಿ 25 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಆದರೆ ಇಲ್ಲಿಯವರೆಗೆ ಏನೂ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ, ಕೇಸನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲಾಗಿದೆ'' ಎಂದು ಹೇಳಲಾಗಿದೆ.
ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಈ ಹಗರಣದಲ್ಲಿ ಕೆಲವು ಸಚಿವಾಲಯದ ಸಿಬ್ಬಂದಿ ಭಾಗಿಯಾಗಿರುವ ಸಂಶಯವಿದೆ. ಸಚಿವಾಲಯಕ್ಕೆ 25 ಲಕ್ಷ ರೂಪಾಯಿ ನಷ್ಟವಾಗಿರುವುದರಿಂದ ನಾವು ಸಿಐಡಿ ತನಿಖೆಗೆ ಮನವಿ ಮಾಡುತ್ತೇವೆ ಎಂದರು.
ಈ ಯೋಜನೆಯ ಒಟ್ಟು ವೆಚ್ಚ 42 ಲಕ್ಷ ರೂಪಾಯಿಯಾಗಿದೆ.