ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿದ್ದ ಕಿರಾತಕನ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಲಗಿದ್ದ ಮಹಿಳೆಯೊಬ್ಬರ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಕಿರಾತಕ ಪುನೀತ್ ನನ್ನು ಮಂಗಳವಾರ ಬೆಂಗಳೂರು ಪೊಲೀಸರು...
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಲಗಿದ್ದ ಮಹಿಳೆಯೊಬ್ಬರ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಕಿರಾತಕ ಪುನೀತ್ ನನ್ನು ಮಂಗಳವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 25ರಂದು ಅಪಾರ್ಟ್ ಮೆಂಟ್ ನಿವಾಸಿಯಾಗಿರುವ ಡಾರ್ಜಿಲಿಂಗ್ ಮೂಲದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿ, ಪ್ರತಿರೋಧ ತೋರಿಸಿದಾಗ ಆಕೆಯ ಕೆನ್ನೆಕಚ್ಚಿ ಪರಾರಿಯಾಗಿದ್ದ ಆರೋಪಿ ಪುನೀತ್ (24)ನನ್ನು ಇಂದು ಶಿರಸಿಯಲ್ಲಿ ಬಂಧಿಸಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಗಂಡನಿಂದ ಬೇರೆಯಾಗಿದ್ದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದರು. ಮಹಿಳೆಯೊಂದಿಗೆ ಆಕೆಯ ಸಹೋದರಿ ವಾಸ ಮಾಡುತ್ತಿದ್ದಳು. ಇನ್ನು ಪನೀತ್ ಸಹ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ.
ಮಹಿಳೆ ಸುನಿಲ್ ವಿರುದ್ಧ ಎಚ್‌ಎಎಲ್ ಪೊಲೀಸರಿಗೆ ದೂರು ನೀಡಿದ್ದು, ಮಹಿಳಾ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಂಡಿದ್ದರು.