ಶ್ರೀನಿಧಿ ಶೆಟ್ಟಿ 
ರಾಜ್ಯ

ಬೆಂಗಳೂರು ಟೆಕ್ಕಿಗೆ ಮಿಸ್ ಸುಪ್ರನ್ಯಾಷನಲ್ 2016 ಕಿರೀಟ

ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ ಅವಾರ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂಜಿನೀಯರ್ ಬೆಡಗಿ ಶ್ರೀನಿಧಿ ಶೆಟ್ಟಿ...

ಬೆಂಗಳೂರು: ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ ಅವಾರ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂಜಿನೀಯರ್, ಬೆಡಗಿ ಶ್ರೀನಿಧಿ ಶೆಟ್ಟಿ ವಿಜೇತರಾಗಿದ್ದಾರೆ.

ವೆನಿಜುವೆಲಾದ ವಲೆರಿಯಾ ವೆಸ್ಪೋಲಿ ಮೊದಲ ರನ್ನರ್ ಅಪ್, ಸುರಿ ನೇಮ್ ನ ಜಲಿಸಾ ಪಿಗಾಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಫೈನಲ್ ನಲ್ಲಿ ಸ್ಪರ್ಧಿಗಳಾದ ಫಿಲಿಪೈನ್ಸ್ ಒರ್ನೆಲಾ ಮರಿಯಮ್ ಮತ್ತು ಶ್ರೀಲಂಕಾದ ಜಯಸಿರಿ ಗುಣಶೇಖರೆ ಅವರನ್ನು ಹಿಂದಿಕ್ಕಿದ ಶ್ರೀನಿಧಿ ಶೆಟ್ಟಿ ವಿಜೇತರಾದರು.

81 ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಮಿಸ್ ಸುಪ್ರನ್ಯಾಷನಲ್ ಸ್ಪರ್ಧೆಯಲ್ಲಿ ವಿಜೇತರಾಗಿರುವುದಕ್ಕೆ ಸಂತಸವಾಗುತ್ತಿದೆ. ನಂಬಲು ಆಗಲಿಲ್ಲ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.

2014 ರಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ ಸ್ಪರ್ಧೆಯಲ್ಲಿ ಭದ್ರಾವತಿ ಬೆಡಗಿ ಆಶಾ ಭಟ್ ವಿಜೇತರಾಗಿದ್ದರು.ಮೂರು ವರ್ಷಗಳ ನಂತರ ಮತ್ತೆ ದೇಶಕ್ಕೆ ಮಿಸ್ ಸುಪ್ರನ್ಯಾಷನಲ್ ಕಿರೀಟ ಸಿಕ್ಕಿದೆ.

30 ಸಾವಿರ ಡಾಲರ್ ನಗದು ಹಾಗೂ ಟೈಟಲ್ ಶ್ರೀನಿಧಿ ಪಾಲಾಗಿದೆ, ಕಾಲೇಜಿನಲ್ಲಿರುವಾಗಲೇ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ ನಾನು ಕಷ್ಟಪಟ್ಟೆ, ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT