ಶ್ರೀ ಪಾಲಿಮರು ಮಠ 
ರಾಜ್ಯ

ನೋಟು ನಿಷೇಧ ಬಳಿಕ ತಂತ್ರಜ್ಞಾನ ಬಳಕೆಗೆ ಮುಂದಾದ ಪಲಿಮಾರು ಮಠ

ದೇಶದಲ್ಲಿ ನೋಟು ನಿಷೇಧದ ಬಳಿಕ ದೇಶದಲ್ಲಿ ಹಲವು ಮಹತ್ತರ ಘಟನೆಗಳು ನಡೆಯುತ್ತಿದ್ದು, ಇದೀಗ ಭಕ್ತರಿಂದ ಕಾಣಿಕೆ ಸಂಗ್ರಹಕ್ಕೆ ದೇವಸ್ಥಾನ ಹಾಗೂ ಮಠ ಮಾನ್ಯಗಳು...

ಉಡುಪಿ: ದೇಶದಲ್ಲಿ ನೋಟು ನಿಷೇಧದ ಬಳಿಕ ದೇಶದಲ್ಲಿ ಹಲವು ಮಹತ್ತರ ಘಟನೆಗಳು ನಡೆಯುತ್ತಿದ್ದು, ಇದೀಗ ಭಕ್ತರಿಂದ ಕಾಣಿಕೆ ಸಂಗ್ರಹಕ್ಕೆ ದೇವಸ್ಥಾನ ಹಾಗೂ ಮಠ ಮಾನ್ಯಗಳು ಇದೀಗ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ. 
ಇತ್ತೀಚೆಗಷ್ಟೇ ಶಬರಿಮಲೆಯಲ್ಲಿ ಇ-ಹುಂಡಿ ಸೇವೆಗೆ ಚಾಲನೆ ನೀಡಲಾಯಿತು. ಭಕ್ತರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೈಪ್ ಮಾಡುವ ಮೂಲಕ ದೇವಸ್ಥಾನಕ್ಕೆ ಕಾಣಿಕೆ ಅರ್ಪಿಸಬಹುದಾಗಿತ್ತು. 
ಇದೇ ರೀತಿಯ ವ್ಯವಸ್ಥೆಯನ್ನು ಇದೀಗ ಅಷ್ಠ ಮಠಗಳಲ್ಲಿ ಒಂದಾದ ಉಡುಪಿಯ ಪಾಲಿಮರು ಮಠ ಸ್ವೈಪಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಣ ರಹಿತ ವಹಿವಾಟು ನಡೆಸುವ ಸಲುವಾಗಿ ಭಕ್ತರು ಮಠಕ್ಕೆ ಸ್ವೈಪ್ ಮಿಷನ್ ಅನ್ನು ದಾನ ನೀಡಿದ್ದಾರೆ. 
ಶ್ರೀ ಪಾಲಿಮರ್ ಮಠದ ಶ್ರೀಗಳಾದ ವಿದ್ಯಾದೇಶ ತೀರ್ಥ ಸ್ವಾಮೀಜಿಗಳು ನೋಟು ರದ್ದತಿಯಿಂದಾಗಿ ಹಣ ವರ್ಗಾವಣೆಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಭಕ್ತಾಧಿಗಳು ಸ್ವೈಪ್ ಮಾಡುವ ಮೂಲಕ ಮಠಕ್ಕೆ ಕಾಣಿಕೆ ನೀಡಬಹುದಾಗಿದೆ ಎಂದರು. 
ಸಚಿವ ಪ್ರಮೋದ್ ಮದ್ವರಾಜ್ ಅವರು ತಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೂಲಕ ಮಠಕ್ಕೆ ಕಾಣಿಕೆ ನೀಡಿದ ಮೊದಲ ದಾನಿಯಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!