ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ 
ರಾಜ್ಯ

ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ ಹತ್ಯೆ ಪ್ರಕರಣ: 45 ದಿನ ಕಳೆದರೂ ಸಿಕ್ಕಿಲ್ಲ ಸಣ್ಣ ಸುಳಿವು

ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ ಹತ್ಯೆ ನಡೆದು 45 ದಿನ ಕಳೆದರೂ ಸಂಜಯನಗರ ಪೊಲೀಸರಿಗೆ ಇದುವರೆಗೂ ಕೊಲೆ ಮಾಡಿದವರ ಸಣ್ಣ ಸುಳಿವು ಕೂಡ ...

ಬೆಂಗಳೂರು: ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ ಹತ್ಯೆ ನಡೆದು 45 ದಿನ ಕಳೆದರೂ ಸಂಜಯನಗರ ಪೊಲೀಸರಿಗೆ ಇದುವರೆಗೂ ಕೊಲೆ ಮಾಡಿದವರ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.

ಅಕ್ಟೋಬರ್ 30 ರಂದು  ದೀಪಾವಳಿ ಹಬ್ಬದಂದು ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರುವ ಪರಚೂರಿ ಸುರೇಂದ್ರ ಕುಮಾರ್ ಮನೆ ಮುಂದೆಯೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಸುರೇಂದ್ರ  ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆರು ಸುತ್ತು ಗುಂಡು ಹಾರಿಸಿ ಆರೋಪಿಸುರೇಂದ್ರ ಅವರನ್ನು ಕೊಂದಿದ್ದಾನೆ. ಆದರೆ ಆರೋಪಿ ಬಗ್ಗೆ ಇದುವರೆಗೂ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ನಾವು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಅವರ ಕಚೇರಿಯ ಕೆಲ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಯಿತು. ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳು ಪಕ್ಕದ ರಾಜ್ಯಗಳಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ, ಆದರೆ ಅಲ್ಲಿಯೂ ಕೂಡ ಅವರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್ , ಉತ್ತರ ಪ್ರದೇಶ ಮತ್ತು ದೆಹಲಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿತ್ತು. ಕಪಿಲ್ ಸರಸ್ವತ್ ನನ್ನು ವಿಚಾರಣೆ ನಡೆಸಲಾಗಿದೆ. ಕಪಿಲ್ ಸರಸ್ವತ್ ಜೊತೆ ಸುರೇಂದ್ರಗೆ ಹಣಕಾಸು ವಿವಾದವಿತ್ತು. ಹೀಗಾಗಿ ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಅಲ್ಲಿಯೂ ಸಹ ಯಾವುದೇ ಮಾಹಿತಿ ಸಿಕ್ಕಿಲ್ಲ . ಈ ಪ್ರಕರಣ ಬೇಧಿಸಲು ಮತ್ತಷ್ಟು ಹೆಚ್ಚಿನ ಸಮಯ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ