ಬೆಂಗಳೂರು: ಮೊಬೈಲ್ ನಿಂದಾಗಿ ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ, ಹೀಗಾಗಿ ನನ್ನ ಬಳಿ ಒಂದು ಮೊಬೈಲ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಗರಿಕ ಸೇವೆಗಳ ಸರಳೀಕರಣ ಇ– ಆಡಳಿತದ ಉಪಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಅವರು, ನನ್ನ ಹತ್ತಿರವೂ ಒಂದು ಮೊಬೈಲ್ ಇತ್ತು. ಅದನ್ನು ಮೂರು ತಿಂಗಳಷ್ಟೇ ಬಳಸಿದ್ದೆ. ತಡರಾತ್ರಿಯೂ ಹತ್ತಾರು ಕರೆ ಬರುತ್ತಿತ್ತು.ಇಂತಹ ರಗಳೆ ಬೇಡ ಎಂದು ಮೊಬೈಲ್ ಇಟ್ಟುಕೊಳ್ಳುವುದನ್ನು ಬಿಟ್ಟುಬಿಟ್ಟೆ. ಈಗ ಎಲ್ಲರೂ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಬಳಿ ಮೊಬೈಲ್ ಇಲ್ಲ’ ಎಂದು ಸಿದ್ದರಾಮಯ್ಯ ಬಹಿರಂಗಪಡಿಸಿದರು.
ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ದೇಶದಲ್ಲಿ 20 ವರ್ಷಗಳಲ್ಲಿ ಮೂರು ಕ್ರಾಂತಿಗಳಾಗಿವೆ. ಅದರಲ್ಲಿ ಮೊಬೈಲ್ ಕ್ರಾಂತಿಯೂ ಒಂದು. ದೇಶದಲ್ಲಿ 120 ಕೋಟಿ ಮೊಬೈಲ್‌ಗಳಿವೆ ಎಂದು ಹೇಳಿದ್ದರು.
1990 ರಲ್ಲಿ ಕೇಂದ್ರ ಸತಿವರೊಬ್ಬರು ಆರು ಮೊಬೈಲ್ ಫೋನ್ ಗಳನ್ನು ಕೊಳ್ಳುವ ಮೂಲಕ ಹೆಡ್ ಲೈನ್ ನಲ್ಲಿ ಸುದ್ದಿಯಾಗಿದ್ದರು. ದೇಶದಲ್ಲಿ ಮೊಬೈಲ್ ಫೋನ್ ಕ್ರಾಂತಿಯ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮವಿದೆ ಎಂದು ಅನಂತ್ ಕುಮಾರ್ ಅಭಿಪ್ರಾಯ ಪಟ್ಟರು.